IND vs NZ T20: ಪ್ರಸಕ್ತ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ2-0 ಅಂತದಲ್ಲಿ ಮುನ್ನಡೆ ಸಾಧಿಸಿರುವ ಶ್ರೇಯಸ್ ಅಯ್ಯರ್ ಪಡೆ, ಇದೀಗ ಮೂರನೇ ಮ್ಯಾಚ್ನಲ್ಲೂ ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳಲು ತುದಿಗಾಲಿನಲ್ಲಿದೆ. ಈ ಮಧ್ಯೆ, ತಂಡದ ಬ್ಯಾಟಿಂಗ್ ಯೂನಿಟ್ನಲ್ಲಿ ಮೂರನೇ ಸ್ಥಾನ ಯಾರಿಗೆ ಕೊಡಬೇಕು ಎಂಬ ಗೊಂದಲಗಳು ಸೃಷ್ಟಿಯಾಗಿವೆ.
ಆರಂಭಿಕರಾಗಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಆರಂಭಿಸಿದರೆ, ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಬರುತ್ತಿದ್ದರು. ಆದರೆ, ಇಂಜುರಿ ಸಮಸ್ಯೆಯಿಂದ ಹೊರಗುಳಿದಿರುವ ಅವರ ಬದಲಿಗೆ ಕಳೆದ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಯಿತು. ಆದರೆ, ಇಲ್ಲಿ ಕೇವಲ 4 ರನ್ಗೆ ಔಟ್ ಆಗುವ ಮೂಲಕ ವೈಭವ್ ಮ್ಯಾನೇಜ್ಮೆಂಟ್ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ.
ಮತ್ತೊಂದೆಡೆ, ಇಶಾನ್ ಕಿಶನ್ ಜಾಗಕ್ಕೆ ಕುಮಾರ್ ಕುಶಾಗ್ರ ಅವರನ್ನು ತಂಡದೊಂದಿಗೆ ಕಳುಹಿಸಿರುವ ಬಿಸಿಸಿಐ, ಅಗತ್ಯವಿದ್ದಲ್ಲಿ ಅವರಿಗೂ ಅವಕಾಶ ಕೊಡುವಂತೆ ಮ್ಯಾನೇಜ್ಮೆಂಟ್ಗೆ ತಿಳಿಸಿದೆ. ಇದೆಲ್ಲದರ ಜತೆ ಮಾಜಿ ಕ್ರಿಕೆಟಿಗರ ಸಲಹೆಗಳಂತೆ, ವೈಭವ್ಗೆ ಓಪನಿಂಗ್ ಕೊಟ್ಟು, ಸಂಜುರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಳುಹಿಸಬೇಕು ಎಂದು ಹೇಳಲಾಗಿದೆ. ಅತ್ತ ಯುವ ಆಟಗಾರ ಕುಶಾಗ್ರ ಕೂಡ ತಂಡದಲ್ಲಿ ಇರುವುದರಿಂದ ಅವರಿಗೇನಾದರೂ ಚಾನ್ಸ್ ಕೊಡುವ ಸಾಧ್ಯತೆಗಳಿದೆಯಾ ಎಂಬ ಪ್ರಶ್ನೆ, ಗೊಂದಲಗಳು ಮೂಡಿವೆ.
ಎಂದಿನಂತೆ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಓಪನಿಂಗ್ ಆರಂಭಿಸಿ, ಮೂರನೇ ಕ್ರಮಾಂಕದಲ್ಲಿ ವೈಭವ್ ಸೂರ್ಯವಂಶಿ ಅಥವಾ ಕುಶಾಗ್ರ ಕಣಕ್ಕಿಳಿಯುತ್ತಾರೋ ಎಂಬುದನ್ನು ಸದ್ಯ ಕಾಡು ನೋಡಬೇಕಿದೆ. ಈ ನಿರ್ಧಾರ ಸಂಪೂರ್ಣವಾಗಿ ಮ್ಯಾನೇಜ್ಮೆಂಟ್ ಆದ ಹಿನ್ನೆಲೆ, ಕ್ರಿಕೆಟ್ ಪ್ರೇಮಿಗಳ ಅಚ್ಚುಮೆಚ್ಚಿನ ಯುವ ಸೆನ್ಸೇಷನ್ ವೈಭವ್ ಅವಕಾಶ ಪಡೆಯಲಿದ್ದಾರಾ? ಏನು ಕಥೆ? ಎಂಬುದನ್ನು ಇನ್ನಿಂಗ್ಸ್ ಆರಂಭಗೊಂಡಾಗಲೇ ಸ್ಪಷ್ಟವಾಗಲಿದೆ.
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವೈಭವ್ ಸೂರ್ಯವಂಶಿ, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ನಮನ್ ಧಿರ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್.
ಫಿನ್ ಅಲೆನ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಬೆವನ್ ಜೇಕಬ್ಸ್, ಗ್ಲೆನ್ ಫಿಲಿಪ್ಸ್, ಡ್ಯಾರಿಯಲ್ ಮಿಚೆಲ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಥ್ಯೂ ಫಿಶರ್, ಕೈಲ್ ಜೇಮಿಸನ್, ಆಡಮ್ ಮಿಲ್ನೆ, ಜಾಕೋಬ್ ಡಫಿ.