2 ವರ್ಷಗಳ ಹಿಂದೆಯೇ... ಸೂರ್ಯವಂಶಿ​ ದಾಖಲೆಯ ಇನ್ನಿಂಗ್ಸ್​ಗೆ ಮನಸೋತ ಕೋಚ್​ ಲಕ್ಷ್ಮಣ್​ ಹೇಳಿಕೆ ವೈರಲ್​

ಸೂರ್ಯವಂಶಿ​ ದಾಖಲೆಯ ಇನ್ನಿಂಗ್ಸ್​ಗೆ ಮನಸೋತ ಕೋಚ್​ ಲಕ್ಷ್ಮಣ್​ ಹೇಳಿಕೆ ವೈರಲ್​
ಸೂರ್ಯವಂಶಿ​ ದಾಖಲೆಯ ಇನ್ನಿಂಗ್ಸ್​ಗೆ ಮನಸೋತ ಕೋಚ್​ ಲಕ್ಷ್ಮಣ್​ ಹೇಳಿಕೆ ವೈರಲ್​
Published on

ಪ್ರಮುಖ ಮುಖ್ಯಾಂಶಗಳು

  • ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಗೆದ್ದ ಭಾರತ
  • ಟೀಮ್ ಇಂಡಿಯಾ ಪರ ಅದ್ಭುತ ಇನ್ನಿಂಗ್ಸ್ ನೀಡಿದ ಯುವ ಬ್ಯಾಟಿಂಗ್ ಸೆನ್ಸೇಷನ್
  • ವೈಭವ್ ಆಟಕ್ಕೆ ಫಿದಾ ಆದ ಹೆಡ್ ಕೋಚ್ ವಿವಿಎಸ್​ ಲಕ್ಷ್ಮಣ್​
Vaibhav Sooryavanshi: ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್​ಸ್ವೀಪ್​ ಮಾಡಿದ ಟೀಮ್ ಇಂಡಿಯಾ ಪರ ಅದ್ಭುತ ಇನ್ನಿಂಗ್ಸ್ ನೀಡಿದ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿಗೆ ಇದೀಗ ಮೆಚ್ಚುಗೆಗಳು ಹರಿದುಬರುತ್ತಿವೆ.
ಮೂರು ಪಂದ್ಯಗಳಲ್ಲಿ 196 ಸ್ಟ್ರೈಕ್ ರೇಟ್‌ನಲ್ಲಿ 151 ರನ್ ಗಳಿಸಿದ 16 ವರ್ಷ ಬಾಲಕ, ಮೂರನೇ ಹಾಗೂ ಕೊನೆ ಟಿ20 ಪಂದ್ಯದಲ್ಲಿ, ಕೇವಲ 49 ಎಸೆತಗಳಲ್ಲಿ 81 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಪಾತ್ರರಾಗಿದ್ದಲ್ಲದೆ, ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಗಳನ್ನು ಬಾಚಿಕೊಂಡರು. ಯುವ ಪ್ರತಿಭೆಯನ್ನು ಮೆಚ್ಚಿದ ಟೀಮ್ ಇಂಡಿಯಾದ ಹಂಗಾಮಿ ಹೆಡ್​ ಕೋಚ್ ವಿವಿಎಸ್ ಲಕ್ಷ್ಮಣ್, ಬಿಸಿಸಿಐ ಎರಡೂವರೆ ವರ್ಷಗಳ ಹಿಂದೆಯೇ ಈತನ ಪ್ರತಿಭೆಯನ್ನು ಗುರುತಿಸಿದೆ ಎಂದರು.
'2024ರ ಅಂಡರ್-19 ವಿಶ್ವಕಪ್‌ಗೆ ಮೊದಲು ವೈಭವ್​ ಅವರು ವಿಜಯವಾಡದಲ್ಲಿ ಆಡುವುದನ್ನು ನಾವು ನೋಡಿದ್ದೆವು. ಅಲ್ಲಿ ನಡೆದ ಚತುಷ್ಕೋನ ಸರಣಿಯಲ್ಲಿ ವೈಭವ್ ಭಾರತ-ಬಿ ಪರ ಅತಿ ಹೆಚ್ಚು ರನ್ ಗಳಿಸಿದರು. ಆಗ ನಾವು ಅವರ ಪ್ರತಿಭೆಯನ್ನು ಗುರುತಿಸಿದೆವು. ಅಂದಿನಿಂದ, ನಾವು ಅವರಿಗೆ ಸೆಂಟರ್ ಆಫ್ ಎಕ್ಸಲೆನ್ಸ್ (COE) ತರಬೇತಿ ಕೇಂದ್ರಗಳಲ್ಲಿ ಅವಕಾಶಗಳನ್ನು ಕೊಟ್ಟೆವು. ಅದಾದ ನಂತರ, ಅವರು ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಪರ ಅತ್ಯಧಿಕ ರನ್ ದಾಖಲಿಸಿದ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದರು ಎಂದರು.
ವೈಭವ್​ ಆಟ ಮಾತ್ರವಲ್ಲದೆ, ಅವರ ವ್ಯಕ್ತಿತ್ವವೂ ನಮಗೆ ಚೆನ್ನಾಗಿ ತಿಳಿದಿದೆ. ಆತನಿಗೆ ಯಾವುದು ಸರಿಯಾಗಿ ಕೆಲಸ ಮಾಡುತ್ತದೆ ಎಂಬ ವಿಷಯ ನಮಗೆ ಗೊತ್ತಿದೆ. ಮತ್ತು ಪಂದ್ಯದ ಮೊದಲು ಸರಿಯಾದ ಮಾನಸಿಕ ಸ್ಥಿತಿಯಲ್ಲಿರಲು ಸೂರ್ಯವಂಶಿಯನ್ನು ಸಿದ್ಧತೆಗೆ ಒಳಪಡಿಸಲಾಗುತ್ತದೆ. ವೈಭವ್ ವ್ಯಕ್ತಿತ್ವ, ಆಟದ ತಿಳುವಳಿಕೆ ಮತ್ತು ಪ್ರಬುದ್ಧತೆ ಕಳೆದ ಆರು ತಿಂಗಳಲ್ಲಿ ಸಾಕಷ್ಟು ಬೆಳೆದಿದೆ ಎಂದು ಲಕ್ಷ್ಮಣ್ ಹೇಳಿದರು.
ವೈಭವ್ ಅವರ ಕೆಲಸವೆಂದರೆ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವುದು. ಆದಾಗ್ಯೂ, ಈ ಬಾರಿ ಅವರು ಸ್ವಲ್ಪ ವಿಭಿನ್ನವಾಗಿ ಆಡಿದರು. ಅದು ಅದ್ಭುತವೇ. ಇವೆಲ್ಲವೂ ಅವರ ಪ್ರಗತಿಯನ್ನು ತೋರಿಸುತ್ತೆ. ಪಂದ್ಯದಿಂದ ಪಂದ್ಯಕ್ಕೆ ಸುಧಾರಣೆಗೊಳ್ಳುತ್ತಿರುವುದು ಖುಷಿಯ ಸಂಗತಿ ಮತ್ತು ಅನುಭವವನ್ನು ಪಡೆಯುತ್ತಿದ್ದಾರೆ. ಇದೆಲ್ಲ ಓಕೆ, ಆದರೆ ಒಂದು ಬದಲಾವಣೆ ಆಗಬೇಕಿದೆ. ಸೂರ್ಯವಂಶಿ ತಮ್ಮ ಫಿಟ್ನೆಸ್​ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net