ಕೊಹ್ಲಿಯನ್ನು ತವರು ತಂಡ ಡೆಲ್ಲಿ ಖರೀದಿ ಮಾಡಲಿಲ್ಲ ಏಕೆ? 19 ವರ್ಷಗಳ ಬಳಿಕ ಸತ್ಯ ಬಾಯ್ಬಿಟ್ಟ ವೀರೂ! Virender Sehwag

ಕೊಹ್ಲಿಯನ್ನು ತವರು ತಂಡ ಡೆಲ್ಲಿ ಖರೀದಿ ಮಾಡಲಿಲ್ಲ ಏಕೆ? 19 ವರ್ಷಗಳ ಬಳಿಕ ಸತ್ಯ ಬಾಯ್ಬಿಟ್ಟ ವೀರೂ! Virender Sehwag
ಕೊಹ್ಲಿಯನ್ನು ತವರು ತಂಡ ಡೆಲ್ಲಿ ಖರೀದಿ ಮಾಡಲಿಲ್ಲ ಏಕೆ? 19 ವರ್ಷಗಳ ಬಳಿಕ ಸತ್ಯ ಬಾಯ್ಬಿಟ್ಟ ವೀರೂ! Virender Sehwag
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ನಲ್ಲಿ ಇದುವರೆಗೆ ಪ್ರಶಸ್ತಿ ಗೆಲ್ಲದ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಒಂದು
  • 2008ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಎಂಬ ಹೆಸರಿನಲ್ಲಿ ಈ ತಂಡವು ತನ್ನ ಚೊಚ್ಚಲ ಪ್ರವೇಶ ಮಾಡಿತು
  • 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎಂದು ಬದಲಿಸಿಕೊಂಡರು ತಂಡದ ಅದೃಷ್ಟ ಮಾತ್ರ ಬದಲಾಗಿಲ್ಲ
  • ಇದೇ ಸಂದರ್ಭದಲ್ಲಿ ಡೆಲ್ಲಿ ತಂಡ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಮಾಡಿದ ಕಾಮೆಂಟ್‌ಗಳು ವೈರಲ್ ಆಗಿವೆ
Virender Sehwag : ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಇದುವರೆಗೆ ಪ್ರಶಸ್ತಿ ಗೆಲ್ಲದ ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಒಂದು. 2008ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಎಂಬ ಹೆಸರಿನಲ್ಲಿ ಈ ತಂಡವು ತನ್ನ ಚೊಚ್ಚಲ ಪ್ರವೇಶ ಮಾಡಿತು. ಆದರೆ, 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎಂದು ತನ್ನ ಹೆಸರು ಬದಲಿಸಿಕೊಂಡಿತು. ಆದರೂ, ತಂಡದ ಅದೃಷ್ಟ ಮಾತ್ರ ಬದಲಾಗುತ್ತಿಲ್ಲ. ಒಂದೇ ಒಂದು ಟ್ರೋಫಿಗಾಗಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಎದುರು ನೋಡುತ್ತಿದೆ. ಇದೇ ಸಂದರ್ಭದಲ್ಲಿ, ಟೀಮ್​ ಇಂಡಿಯಾ ಮಾಜಿ ಸ್ಫೋಟಕ ಆಟಗಾರ ಮತ್ತು ಡೆಲ್ಲಿ ತಂಡ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಮಾಡಿದ ಕಾಮೆಂಟ್‌ಗಳು ವೈರಲ್ ಆಗುತ್ತಿವೆ. ಆ ದಿನ ಡೆಲ್ಲಿ ಫ್ರಾಂಚೈಸಿ ಆ ಒಂದು ತಪ್ಪು ಮಾಡದಿದ್ದರೆ, ತಂಡಕ್ಕೆ ಇಂದು ಒಳ್ಳೆಯ ಕ್ರೇಜ್ ಇರುತ್ತಿತ್ತು ಎಂದಿದ್ದಾರೆ. ಹಾಗಾದರೆ, ವೀರೂ ಭಾಯ್ ಮಾತಿನ ಅರ್ಥವೇನು ಎಂಬುದನ್ನು ತಿಳಿಯೋಣ.
2008ರ ಐಪಿಎಲ್ ಉದ್ಘಾಟನಾ ಸೀಸನ್ ನನಗೆ ನೆನಪಿದೆ. ಆಗ ಶಿಖರ್ ಧವನ್ ಮತ್ತು ತಿಲಕರತ್ನೆ ದಿಲ್ಶಾನ್ ಕೂಡ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿದ್ದರು. ಇಬ್ಬರೂ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿದ್ದರು. ಆದರೆ, ಗೌತಮ್ ಮತ್ತು ನಾನು ಇನ್ನಿಂಗ್ಸ್ ಆರಂಭಿಸುತ್ತಿದ್ದೆವು. ಹಾಗಾಗಿ, ಧವನ್ ಮತ್ತು ದಿಲ್ಶನ್ ತಡವಾಗಿ ಬರುತ್ತಿದ್ದರು. ಮನೋಜ್ ತಿವಾರಿ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ನಮ್ಮ ಅಗ್ರ ಕ್ರಮಾಂಕ ತುಂಬಿ ತುಳುಕುತ್ತಿತ್ತು. ಹಾಗಾಗಿ, ನಮಗೆ ಹೊಸ ಬ್ಯಾಟ್ಸ್‌ಮನ್ ಅವಶ್ಯಕತೆ ಇರಲಿಲ್ಲ.
ಐಪಿಎಲ್​ ಆರಂಭದ ಸಮಯದಲ್ಲಿ, ವಿರಾಟ್ ಕೊಹ್ಲಿ ಒನ್ ಡೌನ್ ಅಥವಾ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದ್ದರಿಂದ, ನಮ್ಮ ಫ್ರಾಂಚೈಸಿಯಿಂದ ಅವರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ನಮಗೆ ಬೌಲರ್ ಬೇಕಾಗಿತ್ತು. ಅದಕ್ಕಾಗಿಯೇ ನಾವು ಕೊಹ್ಲಿ ಬದಲಿಗೆ ಪ್ರದೀಪ್ ಸಾಂಗ್ವಾನ್ ಅವರನ್ನು ಆಯ್ಕೆ ಮಾಡಿದೆವು ಎಂದು ಜಿಯೋಸ್ಟಾರ್ ಚಾಂಪಿಯನ್ಸ್ ವಾಲಿ ಕಾಮೆಂಟರಿಯಲ್ಲಿ ಸೆಹ್ವಾಗ್​ ಹೇಳಿದರು.
ಸ್ಥಳೀಯ ಆಟಗಾರನಾಗಿದ್ದ ಕೊಹ್ಲಿ ಅವರನ್ನು ಡೆಲ್ಲಿ ತಂಡ ಖರೀದಿ ಮಾಡಲಿಲ್ಲ. ಅನ್​ಕ್ಯಾಪ್ಡ್​ ಆಟಗಾರನಾಗಿದ್ದ ಕೊಹ್ಲಿಯನ್ನು ಮೂಲ ಬೆಲೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಖರೀದಿ ಮಾಡಿತು. ಅಂದಿನಿಂದ ಕೊಹ್ಲಿ ಒಂದೇ ತಂಡಕ್ಕೆ ಆಡುತ್ತಿದ್ದಾರೆ. ಒಂದೇ ತಂಡಕ್ಕೆ ಆಡಿದ ಏಕೈಕ ಆಟಗಾರ ಕೊಹ್ಲಿ ಎಂಬ ದಾಖಲೆ ಇದೆ. ಐಪಿಎಲ್​ನಲ್ಲಿ ಕೊಹ್ಲಿ ಅವರ ಈ ಪ್ರಯಾಣ ಅವರನ್ನು ಕರ್ನಾಟಕದ ದತ್ತು ಪುತ್ರ ಭಾವನಾತ್ಮಕ ಬಂಧದೊಂದಿಗೆ ಬೆಸೆದಿದೆ. ಕೊಹ್ಲಿಗೂ ಕೂಡ ಕರ್ನಾಟಕ ತನ್ನ ಎರಡನೇ ಮನೆಯಾಗಿದೆ. ಸ್ವತಃ ಕೊಹ್ಲಿ ಅವರೇ ಇದನ್ನು ಹೇಳಿಕೊಂಡಿದ್ದಾರೆ.
ಅಂದಹಾಗೆ, ಕೊಹ್ಲಿ ಅವರು ನಾಯಕನಾಗಿ ಟ್ರೋಫಿ ಗೆಲ್ಲಲು ಸಾಧ್ಯವಾಗದಿದ್ದರೂ ಕಳೆದ ವರ್ಷ ರಜತ್ ಪಾಟೀದಾರ್ ನಾಯಕತ್ವದಲ್ಲಿ ಕೊಹ್ಲಿ ಮೊದಲ ಬಾರಿಗೆ RCB ಪರ ಕಪ್‌ಗೆ ಮುತ್ತಿಕ್ಕಿದರು. ಇಂದು ಐಪಿಎಲ್​ನಲ್ಲಿ ಆರ್​ಸಿಬಿ ತಂಡಕ್ಕಿರುವ ಕ್ರೇಜ್​ ಬೇರೆ ಯಾವುದೇ ತಂಡಕ್ಕಿಲ್ಲ. ಹೀಗಾಗಿ, ಅಂದು ಕೊಹ್ಲಿಯನ್ನು ಬಿಟ್ಟು ನಾವು ತಪ್ಪು ಮಾಡಿದೆವು. ಅಂದು ಕೊಹ್ಲಿಯನ್ನು ಬಿಡದೇ ಹೋಗಿದ್ದರೆ ಡೆಲ್ಲಿ ತಂಡಕ್ಕೆ ಒಳ್ಳೆಯ ಕ್ರೇಜ್​ ಇರುತ್ತಿತ್ತು ಎಂದು ಸೆಹ್ವಾಗ್​ ಹೇಳಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net