ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರಕಾಶ್ ರಾಜ್ ಅವರು ಕೇರಳ ಸಾಹಿತ್ಯ ಉತ್ಸವದಲ್ಲಿ ದೊಡ್ಡ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಕಂಡುಬಂದಿದೆ. ಶಾಲಾ ಮಕ್ಕಳು ಅಭಿನಯಿಸಿದ ನಾಟಕವೊಂದರ ಬಗ್ಗೆ ವಿವರಿಸಿರುವ ಪ್ರಕಾಶ್ ರಾಜ್, ರಾಮಾಯಣದ ಕಥೆಯನ್ನು ಇಂದಿನ ಸಂದರ್ಭಕ್ಕೆ ತಕ್ಕಂತೆ ಮರುಸೃಷ್ಟಿಸಲಾಗಿತ್ತು ಎಂದು ತಿಳಿಸಿದ್ದಾರೆ. ರಾಮ, ಲಕ್ಷ್ಮಣ ಮತ್ತು ಸೀತೆ ದಕ್ಷಿಣಕ್ಕೆ ಬಂದಾಗ ಹಸಿವಿನಿಂದ ಅಲ್ಲಿನ ತೋಟವೊಂದರಲ್ಲಿ ಹಣ್ಣುಗಳನ್ನು ತಿನ್ನುತ್ತಾರೆ. ಆಗ ಅಲ್ಲಿನ ಮಾಲೀಕರಾದ ರಾವಣ ಮತ್ತು ಶೂರ್ಪನಖಿ ಬರುತ್ತಾರೆ. ಶೂರ್ಪನಖಿ ಹಣ್ಣು ತಿಂದಿದ್ದಕ್ಕೆ ಹಣ ಕೇಳಿದಾಗ, ರಾವಣನು "ಅವರು ಹಸಿದಿದ್ದಾರೆ, ತಿನ್ನಲಿ ಬಿಡು" ಎಂದು ಹೇಳಿ ವಿನಾಯಿತಿ ನೀಡುತ್ತಾನೆ. ಹಣವಿಲ್ಲದಿದ್ದಾಗ ರಾವಣನು, "ನೀವು ಇಲ್ಲಿಗೆ ಕೆಲಸ ಹುಡುಕಿಕೊಂಡು ಬಂದಿದ್ದೀರಿ ಎಂದರೆ, ಹಣ್ಣು ತಿಂದ ಮೇಲೆ ಅದರ ಬೀಜಗಳನ್ನು ನೆಟ್ಟು ಮರವನ್ನಾಗಿ ಬೆಳೆಸಿ ಹೋಗಿ" ಎಂದು ಹೇಳುವ ಮೂಲಕ ಉತ್ತರ ಮತ್ತು ದಕ್ಷಿಣದ ನಡುವಿನ ಸಂಬಂಧವನ್ನು ನಾಟಕೀಯವಾಗಿ ವಿವರಿಸಿದ್ದಾರೆ.