ಕೊಹ್ಲಿ ಮಾಡಿಕೊಂಡ ಬಿಗ್ ಮಿಸ್ಟೇಕ್​ ಇದು! 10 ವರ್ಷ ಆದ ಮೇಲೆ ಪಶ್ಚಾತ್ತಾಪ ಪಡ್ತಾರೆ: ಕಪಿಲ್​ ದೇವ್​ | Virat Kohli

Virat Kohli
ಕೊಹ್ಲಿ ಮಾಡಿಕೊಂಡ ಬಿಗ್ ಮಿಸ್ಟೇಕ್​ ಇದು! 10 ವರ್ಷ ಆದ ಮೇಲೆ ಪಶ್ಚಾತ್ತಾಪ ಪಡ್ತಾರೆ: ಕಪಿಲ್​ ದೇವ್​ | Virat Kohli
Published on: 

Virat Kohli: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕಿವೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ತೋರಿದ ಕಳಪೆ ಬ್ಯಾಟಿಂಗ್ ಪ್ರದರ್ಶನ ಮಾಜಿ ಕ್ರಿಕೆಟಿಗರ ಟೀಕೆ, ಅಭಿಪ್ರಾಯಗಳಿಗೆ ಕಾರಣವಾಗಿರುವಾಗ, ಭಾರತದ ಮಾಜಿ ಕ್ಯಾಪ್ಟನ್​, ದಿಗ್ಗಜ ಕ್ರಿಕೆಟಿಗ ಕಪಿಲ್​ ದೇವ್​ ಮಾತ್ರ ವಿರಾಟ್​ರ ಹಳೆಯ ನಿರ್ಧಾರವೊಂದರ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಅತಿದೊಡ್ಡ ಮಿಸ್ಟೇಕ್

'ಮಿಡ್-ಡೇ' ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, "ಉತ್ತುಂಗದಲ್ಲಿ ಇರುವಾಗಲೇ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ವಿರಾಟ್​ರ ನಿರ್ಧಾರ ಸರಿಯಲ್ಲ. ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು ಕೊಹ್ಲಿ ತಮ್ಮ ಕರಿಯರ್​ನಲ್ಲಿ ಮಾಡಿಕೊಂಡ ಅತಿದೊಡ್ಡ ಮಿಸ್ಟೇಕ್​. ಈ ನಿರ್ಧಾರಕ್ಕೆ ಅವರು ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡುತ್ತಾರೆ" ಎಂದು ಹೇಳಿದ್ದಾರೆ.

"ವಿರಾಟ್​ ಇಷ್ಟು ಬೇಗ ಟೆಸ್ಟ್ ಕ್ರಿಕೆಟ್‌ನಿಂದ ದೂರವಾಗುವ ಅಗತ್ಯವಿರಲಿಲ್ಲ. ಈಗಲೂ ಅವರ ಫಿಟ್‌ನೆಸ್ ಇನ್ನೂ ಅತ್ಯುತ್ತಮವಾಗಿದೆ. ಯುವ ಆಟಗಾರರಿಗೂ ಸವಾಲು ಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕಠಿಣ ಪರಿಸ್ಥಿತಿಗಳನ್ನು ಎದುರಿಸಿದಾಗ ನಿವೃತ್ತಿ ಆಯ್ಕೆ ತೆಗೆದುಕೊಳ್ಳುವ ಬದಲು, ತಂಡಕ್ಕೆ ಮರಳಲು ಹೋರಾಟ ನಡೆಸಬೇಕು" ಎಂದರು.

ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಮೊಹಿಂದರ್ ಅಮರನಾಥ್ ಅವರ ಉದಾಹರಣೆಯನ್ನು ನೀಡಿದ ಕಪಿಲ್, "ಮೊಹಿಂದರ್ ಅವರನ್ನು ಹಲವು ಬಾರಿ ತಂಡದಿಂದ ಕೈಬಿಡಲಾಗಿತ್ತು. ಆದರೂ ಅವರು ಮತ್ತೆ ತಂಡಕ್ಕೆ ವಾಪಾಸ್​ ಆಗಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಆಟಗಾರರು ಕೂಡ ಅದೇ ರೀತಿಯ ಮನೋಭಾವ ಹೊಂದಿರಬೇಕು” ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಟೆಸ್ಟ್​ಗೆ ವಿರಾಟ್​ ಗುಡ್​ಬೈ

ಮೇ 12, 2025ರಂದು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. 123 ಟೆಸ್ಟ್ ಪಂದ್ಯಗಳ ವೃತ್ತಿಜೀವನಕ್ಕೆ ವಿದಾಯ ಹೇಳಿದ ಕಿಂಗ್​, 9,230 ರನ್‌ಗಳನ್ನು 46.85ರ ಸರಾಸರಿಯಲ್ಲಿ ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ 2025ರ ಜನವರಿ 3ರಂದು ಆಡಿದ್ದ ಪಂದ್ಯವೇ ಅವರ ಕೊನೆಯ ಟೆಸ್ಟ್ ಪಂದ್ಯ. ಅದರ ಹಿಂದಿನ ವರ್ಷ ಅಂದರೆ 2024ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದ ಬಳಿಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರೋಹಿತ್​ ಶರ್ಮಾ ಜತೆಗೂಡಿ ನಿವೃತ್ತಿ ಘೋಷಿಸಿದರು.

Also Read
ಈ ವಾರ ಒಂದಲ್ಲ, ಎರಡಲ್ಲ 19 ಚಿತ್ರಗಳು ಒಟಿಟಿಗೆ, 10 ಸೌತ್ ಸಿನಿಮಾಗಳು ಥಿಯೇಟರ್​ನಲ್ಲಿ ರಿಲೀಸ್​; ಇಲ್ಲಿದೆ ಪಟ್ಟಿ | OTT Films
Virat Kohli

ಪ್ರಸ್ತುತ ಏಕದಿನ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಆಡುತ್ತಿರುವ ಕೊಹ್ಲಿ, ಈಗಲೂ ಸ್ಟಾರ್​ ಆಟಗಾರರಾಗಿಯೇ ಉಳಿದಿದ್ದಾರೆ. ಡಿಸೆಂಬರ್ 13ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಕಣಕ್ಕಿಳಿಯಲಿದ್ದಾರೆ ಎಂದು ಕ್ರಿಕೆಟ್​ ವರದಿಗಳು ತಿಳಿಸಿವೆ.

ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದು, 14 ಪಂದ್ಯಗಳ 13 ಇನ್ನಿಂಗ್ಸ್‌ಗಳಲ್ಲಿ 53.17ರ ಸರಾಸರಿಯಲ್ಲಿ 638 ರನ್ ಗಳಿಸಿದ್ದಾರೆ. ಅವರ ಖಾತೆಯಲ್ಲಿ ಎರಡು ಶತಕ ಮತ್ತು ನಾಲ್ಕು ಅರ್ಧಶತಕಗಳಿವೆ. ಸ್ಟ್ರೈಕ್‌ರೇಟ್ 118ಕ್ಕಿಂತ ಹೆಚ್ಚಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ ಇನ್ನೂ ಮುಂದುವರಿಯಬೇಕಿತ್ತು ಎಂಬ ಕಪಿಲ್ ದೇವ್ ಅವರ ಅಭಿಪ್ರಾಯ ಈಗ ಕೊಹ್ಲಿ ಅಭಿಮಾನಿಗಳನ್ನು ಕಾಡಲಾರಂಭಿಸಿದೆ. ಮತ್ತೊಮ್ಮೆ ಅವರನ್ನು ವೈಟ್​ ಜೆರ್ಸಿಯಲ್ಲಿ ನೆನಪಿಸಿಕೊಳ್ಳುವ ಮೂಲಕ ಹಳೆಯ ಇನ್ನಿಂಗ್ಸ್​ಗಳನ್ನು ಮೆಲುಕು ಹಾಕುತ್ತಾರೆ,(ಏಜೆನ್ಸೀಸ್).