ಕೊನೇ ವಿಶ್ವಕಪ್​ಗೂ ಮೊದಲು 'ಕಿಂಗ್'​ ಕೊಹ್ಲಿಯನ್ನು ಈ ರೀತಿ ಸಂಭ್ರಮಿಸಲು ಫ್ಯಾನ್ಸ್​ ತವಕ | Virat Kohli

ವಿಂಡೀಸ್​ ವಿರುದ್ಧ ಮೂರು ಪಂದ್ಯಗಳಲ್ಲಿ ಇದೇನಾದರೂ ಸಾಧ್ಯವಾದರೆ, ಏಕದಿನದಲ್ಲಿ ಅತಿ ವೇಗವಾಗಿ 15,000 ರನ್ ಪೂರೈಸಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಲ್ಲಿದ್ದಾರೆ.
Virat Kohli
ಕೊನೇ ವಿಶ್ವಕಪ್​ಗೂ ಮೊದಲು ಕಿಂಗ್​ ಕೊಹ್ಲಿಯನ್ನು ಈ ರೀತಿ ಸಂಭ್ರಮಿಸಲು ಫ್ಯಾನ್ಸ್​ ತವಕ
Published on: 

Virat Kohli: ಇಂದಿನಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯ ಮಧ್ಯಾಹ್ನ 2 ಗಂಟೆಗೆ ತಿರುವನಂತಪುರದಲ್ಲಿ ಶುರುವಾಗಲಿದೆ. ಈ ಪಂದ್ಯದಲ್ಲಿ ಕ್ರಿಕೆಟ್​ ಪ್ರೇಮಿಗಳು ಹಾಗೂ ಅಭಿಮಾನಿಗಳ ಕಣ್ಣು ಸಂಪೂರ್ಣವಾಗಿ ಟೀಮ್ ಇಂಡಿಯಾದ ದಿಗ್ಗಜ, ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ಮೇಲೆ ಮೂಡಿದೆ. ವಿಂಡೀಸ್​ ಎದುರು ಕಣಕ್ಕಿಳಿಯಲಿರುವ ಕಿಂಗ್​ ಅನ್ನು ದಾಖಲೆಗಳ ಸರದಾರನಾಗಿ ಮತ್ತೊಮ್ಮೆ ಸಂಭ್ರಮಿಸಲು ಫ್ಯಾನ್ಸ್ ಎದುರುನೋಡುತ್ತಿದ್ದಾರೆ.

15,000 ರನ್ ಗುರಿ

ಕಾರಣ, 'ಕ್ರಿಕೆಟ್​ ದೇವರು' ಸಚಿನ್​ ತೆಂಡೂಲ್ಕರ್​ ಅವರ ಹೆಸರಿನಲ್ಲಿರುವ ಅಪರೂಪದ ದಾಖಲೆಗಳನ್ನು ಮುರಿಯುವ ಅವಕಾಶ ಇದೀಗ ಕೊಹ್ಲಿಗೆ ಸಿಕ್ಕಿದ್ದು, ಈ ಸರಣಿಯ ಅಂತ್ಯದೊಳಗೆ ಸಚಿನ್ ಅವರ ನಾಲ್ಕು ದಾಖಲೆಗಳನ್ನು ಖಂಡಿತ ಮುರಿಯುತ್ತಾರೆ ಎಂಬ ಆಶಯ ಕೊಹ್ಲಿ ಅಭಿಮಾನಿಗಳಲ್ಲಿ ಮೂಡಿದೆ. ವಿರಾಟ್ ಇಲ್ಲಿಯವರೆಗೆ 314 ಏಕದಿನ ಪಂದ್ಯಗಳಲ್ಲಿ 302 ಇನ್ನಿಂಗ್ಸ್‌ಗಳಲ್ಲಿ 14,941 ರನ್ ಗಳಿಸಿದ್ದಾರೆ. 15,000 ಏಕದಿನ ರನ್‌ಗಳ ಮೈಲಿಗಲ್ಲನ್ನು ತಲುಪಲು ಅವರಿಗೆ ಬೇಕಿರುವುದು ಇನ್ನೂ 59 ರನ್‌ಗಳಷ್ಟೇ. ವಿಂಡೀಸ್​ ವಿರುದ್ಧ ಮೂರು ಪಂದ್ಯಗಳಲ್ಲಿ ಇದೇನಾದರೂ ಸಾಧ್ಯವಾದರೆ, ಏಕದಿನದಲ್ಲಿ ಅತಿ ವೇಗವಾಗಿ 15,000 ರನ್ ಪೂರೈಸಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಲ್ಲಿದ್ದಾರೆ.

2 ಶತಕ ಬಾರಿಸಿದರೆ...

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ 60 ಶತಕಗಳನ್ನು ಬಾರಿಸಿದ್ದಾರೆ. ಅದೇ ಕೊಹ್ಲಿ 58 ಶತಕಗಳನ್ನು ಹೊಂದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಇನ್ನೂ ಎರಡು ಶತಕ ಬಾರಿಸಿದರೆ ಈ ದಾಖಲೆಯನ್ನು ಮುರಿಯುವ ಅವಕಾಶ ಅವರಿಗಿದೆ. ಅದೇ ರೀತಿ, ಭಾರತದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ ಕೂಡ ಸಚಿನ್ ಅವರೇ. ತವರಿನಲ್ಲಿ ಸಚಿನ್ 42 ಶತಕ ಸಿಡಿಸಿದ್ದರೆ, ಕೊಹ್ಲಿ 41 ಶತಕ ಸಿಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳಲ್ಲಿ ಕೊಹ್ಲಿ ಎರಡು ಶತಕ ಬಾರಿಸಿದರೆ ಹಿರಿಯ ಕ್ರಿಕೆಟಿಗನ ದಾಖಲೆಯನ್ನು ಮುರಿಯಬಹುದು.

Also Read
ದೊಡ್ಮನೆಗೆ ಮೂರು ವೈಲ್ಡ್​ಕಾರ್ಡ್​ ಎಂಟ್ರಿ! ಇವರೇನಾ ನೋಡಿ ಕಿಚ್ಚು ಹಚ್ಚಲಿರುವ ಆ ಹೊಸ ರಗಡ್​ ಸ್ಪರ್ಧಿಗಳು? |BBK13
Virat Kohli

ಸಚಿನ್ ತವರಿನಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಭಾರತ ಪರ ಸಚಿನ್ 6,976 ಏಕದಿನ ರನ್ ಗಳಿಸಿದ್ದಾರೆ. ಕೊಹ್ಲಿ 6,867 ರನ್ ಬಾರಿಸಿದ್ದಾರೆ. ಈ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಇನ್ನೂ 110 ರನ್‌ಗಳ ಅಗತ್ಯವಿದೆ. ಕ್ರಿಕೆಟ್​ ಅಂಕಿ ಅಂಶಗಳ ಪ್ರಕಾರ, ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ವಿಂಡೀಸ್​ ಪಡೆಯ ಎದುರು ಇದುವರೆಗೆ 43 ಪಂದ್ಯಗಳಲ್ಲಿ 41 ಇನ್ನಿಂಗ್ಸ್ ಆಡಿರುವ ವಿರಾಟ್​, 2,261 ರನ್ ಗಳಿಸಿದ್ದಾರೆ. ಇದರಲ್ಲಿ, 9 ಶತಕ ಮತ್ತು 11 ಅರ್ಧ ಶತಕಗಳಿವೆ. ಈ ನಿಟ್ಟಿನಲ್ಲಿ, ಇನ್ನು ಎರಡು ಶತಕ ಬಾರಿಸಿದರೆ ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ಏಕದಿನ ಶತಕ ಸಿಡಿಸಿದ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಏಕದಿನ ಸರಣಿಯ ವೇಳಾಪಟ್ಟಿ

  • ಮೊದಲ ಏಕದಿನ ಸೆ.27: ತಿರುವನಂತಪುರ

  • ಎರಡನೇ ಏಕದಿನ ಸೆ.30: ಗುವಾಹಟಿ

  • ಮೂರನೇ ಏಕದಿನ ಅ.3: ಹೊಸ ಚಂಡೀಗಢ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net