BBK13: ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 13ರ ಘಟಾನುಘಟಿ ಸ್ಪರ್ಧಿಗಳ ಪೈಕಿ ಈ ವಾರ ತಾಂಡವ್ ರಾಮ್ ಮಿಡ್ವೀಕ್ ಎಲಿಮಿನೇಷನ್ನಲ್ಲಿ ಹೊರಬಂದಿದ್ದೇ ಆದರೂ ಜನರ ವೋಟಿಂಗ್ನಿಂದ ಸೇಫ್ ಆಗಿ ಇದೀಗ ವಾಪಾಸ್ ಮನೆಯೊಳಗೆ ಹೆಜ್ಜೆಯಿಟ್ಟಿದ್ದಾರೆ. ಮತ್ತೊಂದೆಡೆ, ಡಬಲ್ ಎವಿಕ್ಷನ್ನಡಿ ಶಾಕಿಂಗ್ ಎಂಬಂತೆ ಅವಿನಾಶ್ ಮತ್ತು ವೈಷ್ಣವಿ ಕೌಂಡಿನ್ಯ ಎಲಿಮಿನೇಟ್ ಆಗಿ ಹೊರನಡೆದಿದ್ದಾರೆ.
ಈ ವಾರದ ಸಂಚಿಕೆಯಲ್ಲಿ ಟ್ವಿಸ್ಟ್, ಎಕ್ಟಿಟ್ ಮತ್ತು ಹೊಸ ಎಂಟ್ರಿಗಳು ಜೋರಾಗಿದ್ದು, ತಾಂಡವ್ ರಾಮ್ ರೀ-ಎಂಟ್ರಿಯ ಬೆನ್ನಲ್ಲೇ ಬಿಗ್ ಮನೆಯೊಳಗೆ ಮೂವರು ಹೊಸ ಸ್ಪರ್ಧಿಗಳು ರಗಡ್ ಆಗಿ ಕಾಲಿಟ್ಟಿದ್ದಾರೆ. ಈಗಾಗಲೇ ಹೊರಬಿದ್ದಿರುವ ಹೊಸ ಪ್ರೋಮೋದಲ್ಲಿ ಇಬ್ಬರು ಬ್ಯೂಟಿಗಳು ಮನೆ ಪ್ರವೇಶಿಸಿದರೆ, ಒಬ್ಬ ಪುರುಷ ಸ್ಪರ್ಧಿ ಎಂಟ್ರಿಕೊಟ್ಟಿದ್ದಾರೆ. ಮೂವರ ಪೈಕಿ ಇಬ್ಬರ ಹೆಸರಂತು ಬಹಳ ಚರ್ಚೆಯಾಗುತ್ತಿದ್ದು, ಬಹುತೇಕರು ಇವರೇ ಇರಬಹುದು ಎಂದು ಗೆಸ್ ಮಾಡಿದ್ದಾರೆ.
ಮನೆ ಮಂದಿಗೆಲ್ಲ ತಮ್ಮ ಖಡಕ್ ಮತ್ತು ಖಾರದ ಮಾತಿನಿಂದಲೇ ವೇದಿಕೆಯಲ್ಲಿ ಕೌಂಟರ್ಗಳನ್ನು ಕೊಟ್ಟಿರುವ ಇಬ್ಬರು ಮಹಿಳಾ ಸ್ಪರ್ಧಿಗಳು ಪ್ರೋಮೋದಲ್ಲಿ ಬಿಗ್ ಬಾಸ್ ವೀಕ್ಷಕರ ಕುತೂಹಲವನ್ನು ಡಬಲ್ ಮಾಡಿದ್ದಾರೆ. ಈ ಇಬ್ಬರ ಪೈಕಿ ಒಬ್ಬರ ಹೆಸರು ಅದಾಗಲೇ ಗೊತ್ತಾಗಿದ್ದು, ರಿಯಾಲಿಟಿ ಶೋ ಒಂದರ ರನ್ನರ್ ಅಪ್ ಆದ ಗಾನವಿ ಗೌಡ ಎನ್ನಲಾಗಿದೆ. ಇನ್ನು, ಪುರುಷ ಸದಸ್ಯರಲ್ಲಿ ಹಾಸ್ಯ ನಟ ಪ್ರಶಾಂತ್ ಎಂದು ಹೇಳಲಾಗಿದೆ. ಇವರಿಬ್ಬರು ಹೆಸರು ಹೊರಬಂದಿದ್ದರೆ, ಇನ್ನೊಬ್ಬರು ಯಾರೆಂದು ಅಷ್ಟಾಗಿ ತಿಳಿದುಬಂದಿಲ್ಲ. ಅಷ್ಟಕ್ಕೂ ಆ ಯಾರು ಮತ್ತೊಬ್ಬ ರಗಡ್ ಲೇಡಿ ಎಂಬುದನ್ನು ಇಂದಿನ ಸಂಚಿಕೆಯಲ್ಲೇ ಕಾದು ನೋಡಬೇಕಿದೆ.
ಇನ್ನು, ನಾಲ್ಕನೇ ವಾರಕ್ಕೆ ಕಾಲಿಡುತ್ತಿರುವ ಬಿಗ್ ಬಾಸ್ ಸೀಸನ್ 13ರ ಮನೆ ಮಂದಿಗೆ ಈಗ ಮೂವರ ಹೊಸ ಎಂಟ್ರಿ ಸ್ಪರ್ಧೆಯನ್ನು ಇನ್ನಷ್ಟು ಪೈಪೋಟಿ ಮಾಡಲಿದೆ ಎಂಬುದಂತು ಖಚಿತ. ಇವರ ಪೈಕಿ ಯಾರು ಕಿಚ್ಚು ಹಚ್ಚುತ್ತಾರೋ? ಯಾರಿಗೆ ಯಾರು ಟಕ್ಕರ್ ಕೊಡುತ್ತಾರೆ ಎಂಬ ಕುತೂಹಲ ಸದ್ಯ ಬಿಗ್ ಬಾಸ್ ವೀಕ್ಷಕರಲ್ಲಿ ಮೂಡಿದೆ. ಮೊದಲ ವಾರದಿಂದ ಇಲ್ಲಿಯವರೆಗೆ ಮನೆಯಿಂದ ಪ್ರಥಮಾ ಪ್ರಸಾದ್, ಓಂ ಪ್ರಕಾಶ್, ವೈಷ್ಣವಿ ಮತ್ತು ಅವಿನಾಶ್ ಸೇರಿದಂತೆ ಒಟ್ಟು ನಾಲ್ಕು ಸೆಲೆಬ್ರಿಟಿ ಸ್ಪರ್ಧಿಗಳು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.