ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 146 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಮಿಚೆಲ್ ಮಾರ್ಷ್ (40 ರನ್, 32 ಎಸೆತ, 3 ಬೌಂಡರಿ, 2 ಸಿಕ್ಸರ್), ಆಯುಷ್ ಬಡೋನಿ (38 ರನ್, 24 ಎಸೆತ, 4 ಬೌಂಡರಿ, 1 ಸಿಕ್ಸರ್), ಮತ್ತು ಮುಕುಲ್ ಚೌಧರಿ (39 ರನ್, 28 ಎಸೆತ, 3 ಬೌಂಡರಿ, 2 ಸಿಕ್ಸರ್) ಅವರು ಉಪಯುಕ್ತ ಪ್ರದರ್ಶನ ನೀಡಿದರು. ಆರ್ಸಿಬಿ ಬೌಲರ್ಗಳಲ್ಲಿ ರಸಿಕ್ ಸಲಾಮ್ದಾರ್ನಾಲ್ಕು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಮೂರು, ಕೃನಾಲ್ ಪಾಂಡ್ಯ ಎರಡು ವಿಕೆಟ್ ಮತ್ತು ಜೋಶ್ ಹ್ಯಾಜಲ್ವುಡ್ ಒಂದು ವಿಕೆಟ್ ಪಡೆದರು.