ಆದಾಗ್ಯೂ, ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್‌ನಂತಹ ಮೂರು ಪ್ರಮುಖ ಟ್ರೋಫಿಗಳು ಗೌತಮ್ ಅವರ ನಾಯಕತ್ವದಲ್ಲಿ ಗೆಲ್ಲಲಾಗಿದೆ. ಏಕದಿನ ಹಾಗೂ ಟಿ20ಯಲ್ಲಿ ಯಶಸ್ಸು ಸಾಧಿಸಿರುವ ಟೀಮ್ ಇಂಡಿಯಾ, ಟೆಸ್ಟ್ ಕ್ರಿಕೆಟ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಇದಕ್ಕೆಲ್ಲ ಗಂಭೀರ್ ಅವರೇ ಕಾರಣ ಹೀಗಾಗಿ ಅವರನ್ನು ಕೋಚ್ ಹುದ್ದೆಯಿಂದ ತೆಗೆದುಹಾಕಬೇಕೆಂಬ ಬೇಡಿಕೆಗಳು ಹೆಚ್ಚುತ್ತಿವೆ. ಇದೇ ಸಂದರ್ಭದಲ್ಲಿ, 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಮುನಾಫ್ ಪಟೇಲ್ ತಮ್ಮ ಸಹ ಆಟಗಾರನನ್ನು ಬೆಂಬಲಿಸಿದ್ದಾರೆ. ಗಂಭೀರ್ ಅವರನ್ನು ಪದಚ್ಯುತಗೊಳಿಸಿದರೆ ಟೀಮ್ ಇಂಡಿಯಾದ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಇತ್ತೀಚಿನ ಸಂದರ್ಶನದಲ್ಲಿ ಮುನಾಫ್ ಪಟೇಲ್ ಎಚ್ಚರಿಸಿದ್ದಾರೆ.