ಆಧ್ಯಾತ್ಮಿಕ ಹಾದಿಯಲ್ಲಿ 'ವಿರುಷ್ಕಾ': ವೃಂದಾವನದ ಪ್ರೇಮಾನಂದ ಮಹಾರಾಜರ ದರ್ಶನ ಪಡೆದ ಕೊಹ್ಲಿ ದಂಪತಿ! Virat Kohli

Virat Kohli (ಚಿತ್ರ X)
Virat Kohli (ಚಿತ್ರ X)
Published on
Virat Kohli: ಟೀಮ್ ಇಂಡಿಯಾ ಕ್ರಿಕೆಟಿಗ ವಿರಾಟ್​ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಮತ್ತೊಮ್ಮೆ ಆಧ್ಯಾತ್ಮದ ಹಾದಿ ಹಿಡಿದಿದ್ದಾರೆ. ಬುಧವಾರದಂದು (ಜು.22) ಉತ್ತರ ಪ್ರದೇಶದ ವೃಂದಾವನದಲ್ಲಿರುವ ಪ್ರಸಿದ್ಧ ಸಂತ ಪ್ರೇಮಾನಂದ ಗೋವಿಂದ ಶರಣ್ ಮಹಾರಾಜರ ಆಶ್ರಮಕ್ಕೆ ಈ ತಾರಾ ದಂಪತಿ ಭೇಟಿ ನೀಡಿದ್ದು, ಅದರ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸಾಧಾರಣ ಉಡುಪಿನಲ್ಲಿ, ಮುಖಕ್ಕೆ ಮಾಸ್ಕ್ ಧರಿಸಿ ಆಶ್ರಮಕ್ಕೆ ಭೇಟಿ ನೀಡಿದ ಈ ಜೋಡಿ ಪ್ರೇಮಾನಂದ ಮಹಾರಾಜರ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು. ಆದಾಗ್ಯೂ, ಕೀರ್ತಿ, ಯಶಸ್ಸು ಮತ್ತು ಗ್ಲಾಮರ್ ಪ್ರಪಂಚದ ಆಚೆಗಿನ ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳುವುದು ಹಾಗೂ ನೆಮ್ಮದಿಗಾಗಿ ಕೊಹ್ಲಿ-ಅನುಷ್ಕಾ ದಂಪತಿ ಆಗ್ಗಾಗ ವೃಂದಾವನಕ್ಕೆ ಭೇಟಿ ನೀಡುತ್ತಿರುತ್ತಾರೆ. 

ಐಪಿಎಲ್ ಯಶಸ್ಸು ಮತ್ತು ತಂಡದ ಪ್ರದರ್ಶನ

ಇತ್ತೀಚೆಗಷ್ಟೇ ಗುಜರಾತ್ ಟೈಟನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಈ ಭೇಟಿ ನಡೆದಿರುವುದು ವಿಶೇಷ. ಪಂದ್ಯಾವಳಿಯ ಉದ್ದಕ್ಕೂ ಅತ್ಯತ್ತಮ ಪ್ರದರ್ಶನ ನೀಡಿದ ಆರ್​ಸಿಬಿ ತಂಡದ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ತಂಡದ ಸಮತೋಲನ ಮತ್ತು ಆಟಗಾರರ ಬದ್ಧತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಪ್ರಸ್ತುತ ಆರ್‌ಸಿಬಿ ತಂಡದಲ್ಲಿ ಅದ್ಭುತ ಸಮತೋಲನ ಮತ್ತು ಶಕ್ತಿಯಿದೆ. ಇಂತಹ ಶ್ರೇಷ್ಠ ತಂಡದ ಭಾಗವಾಗಿರುವುದು ನನಗೆ ಅತ್ಯಂತ ಸಂತಸ ತಂದಿದೆ. ಬ್ಯಾಟಿಂಗ್ ವಿಭಾಗದಲ್ಲಿ ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಿದ್ದಾರೆ. ಮೈದಾನದಲ್ಲಿ ನಾವು ತೋರಿಸುತ್ತಿರುವ ಆತ್ಮವಿಶ್ವಾಸಕ್ಕೆ ತಂಡದ ಈ ಸರ್ವತೋಮುಖ ಬಲವೇ ಕಾರಣ ಎಂದು ಕೊಹ್ಲಿ ಹೇಳಿದ್ದಾರೆ.
ಬದ್ಧತೆ ಮತ್ತು ಅಧಿಪತ್ಯ
ಕಳೆದ ಬಾರಿಯ ಒತ್ತಡಕ್ಕೂ ಈ ಬಾರಿಯ ಸನ್ನಿವೇಶಕ್ಕೂ ಇರುವ ವ್ಯತ್ಯಾಸವನ್ನು ಗುರುತಿಸಿದ ಕೊಹ್ಲಿ, ನಾವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದೇವೆ ಎಂದರೆ ಅದಕ್ಕೊಂದು ಬಲವಾದ ಕಾರಣವಿದೆ. ನಾವು ನಮ್ಮ ಮೂಲ ಕ್ರಿಕೆಟ್‌ಗೆ ಬದ್ಧರಾಗಿದ್ದು, ಯೋಜನೆಗಳನ್ನು ಸರಿಯಾಗಿ ಜಾರಿಗೊಳಿಸಿದರೆ ನಾವೇ ಈ ಸರಣಿಯ ಅತ್ಯುತ್ತಮ ತಂಡ ಎಂಬುದನ್ನು ನಂಬಿದ್ದೆವು. ಆದಾಗ್ಯೂ, ಲೀಗ್​ ಹಂತದಲ್ಲೂ ಅಗ್ರಸ್ಥಾನಕ್ಕೇರಿದ್ದೆವು. ನಮ್ಮಲ್ಲಿರುವ ಕೌಶಲ್ಯ, ಆಟಗಾರರ ಪರಿಪಕ್ಷತೆ ಮತ್ತು ಸಮಾಧಾನಚಿತ್ತ ಇಂದಿನ ಪಂದ್ಯದಲ್ಲೂ ಸಾಬೀತಾಗಿದೆ ಎಂದರು (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net