ಭಾರತ ಅಂಡರ್-19 ಮತ್ತು ದಕ್ಷಿಣ ಆಫ್ರಿಕಾ ಅಂಡರ್-19 ನಡುವಿನ ಎರಡನೇ ಯೂತ್ ಏಕದಿನ ಪಂದ್ಯ
ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ನಡೆದ ಪಂದ್ಯದಲ್ಲಿ ಅಬ್ಬರಿಸಿ, ಬೊಬ್ಬಿರಿದ ವೈಭವ್ ಸೂರ್ಯವಂಶಿ
ಮೊದಲ ಎಸೆತದಿಂದಲೇ ದಕ್ಷಿಣ ಆಫ್ರಿಕಾದ ಬೌಲರ್‌ಗಳ ಬೆವರಿಳಿಸಿ ಸಿಕ್ಸರ್‌ಗಳ ಸುರಿಮಳೆಗೈದ ವೈಭವ್
Vaibhav Suryavanshi : ದಕ್ಷಿಣ ಆಫ್ರಿಕಾದ ಬೆನೋನಿಯಲ್ಲಿ ನಡೆದ ಭಾರತ ಅಂಡರ್-19 ಮತ್ತು ದಕ್ಷಿಣ ಆಫ್ರಿಕಾ ಅಂಡರ್-19 ನಡುವಿನ ಎರಡನೇ ಯೂತ್ ಏಕದಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ತಮ್ಮ ಬ್ಯಾಟಿಂಗ್ ಮೂಲಕ ಅಬ್ಬರಿಸಿ, ಬೊಬ್ಬಿರಿದಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ U-19 ತಂಡ 49.3 ಓವರ್‌ಗಳಲ್ಲಿ 245 ರನ್‌ಗಳಿಗೆ ಆಲೌಟ್ ಆಯಿತು. ಹರಿಣ ಪಡೆಯ ಬ್ಯಾಟ್ಸ್‌ಮನ್‌ಗಳಲ್ಲಿ, ಜೇಸನ್ ರಾಲ್ಸ್ (114 ರನ್, 113 ಎಸೆತ, 7 ಬೌಂಡರಿ, 3 ಸಿಕ್ಸರ್) ಶತಕ ಗಳಿಸಿದರು.
ಟೀಮ್ ಇಂಡಿಯಾ ಬೌಲರ್‌ಗಳಲ್ಲಿ ಕಿಶನ್ ಕುಮಾರ್ ಸಿಂಗ್ ನಾಲ್ಕು ವಿಕೆಟ್ ಪಡೆದರು. ಆರ್.ಎಸ್. ಅಂಬ್ರೀಶ್ ಎರಡು ವಿಕೆಟ್ ಪಡೆದರೆ, ಕನಿಷ್ಕ್ ಚೌಹಾಣ್, ಖಿಲನ್ ಪಟೇಲ್ ಮತ್ತು ದೀಪೇಶ್ ದೇವೇಂದ್ರನ್ ತಲಾ ಒಂದು ವಿಕೆಟ್ ಪಡೆದರು.
ನಂತರ, 246 ರನ್‌ಗಳ ಗುರಿ ಬೆನ್ನಟ್ಟುವಲ್ಲಿ, ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ, ಮೊದಲ ಎಸೆತದಿಂದಲೇ ದಕ್ಷಿಣ ಆಫ್ರಿಕಾದ ಬೌಲರ್‌ಗಳ ಬೆವರಿಳಿಸಿದರು. ಬೆನೋನಿಯಲ್ಲಿ ಸಿಕ್ಸರ್‌ಗಳ ಮಳೆಯನ್ನೇ ಸುರಿಸಿದರು. ಕೇವಲ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಒಟ್ಟು 24 ಎಸೆತಗಳನ್ನು ಆಡಿದ ವೈಭವ್ 68 ರನ್ ಗಳಿಸಿದರು. ಇದರಲ್ಲಿ 10 ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಸೇರಿವೆ.
ಅಂತಿಮವಾಗಿ ಭಾರತ U-19 ತಂಡವು DLS ನಿಯಮದ ಪ್ರಕಾರ ಎಂಟು ವಿಕೆಟ್‌ಗಳ ಜಯ ಸಾಧಿಸಿ ದಕ್ಷಿಣ ಆಫ್ರಿಕಾ ವಿರುದ್ಧ 2-0 ಮುನ್ನಡೆ ಸಾಧಿಸಿತು. ವಿಲ್ಲೋಮೂರ್ ಪಾರ್ಕ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನೂ DLS ನಿಯಮದ ಪ್ರಕಾರ ಭಾರತ 25 ರನ್‌ಗಳಿಂದ ಗೆದ್ದಿತ್ತು, (ಏಜೆನ್ಸೀಸ್).