40ನೇ ವಯಸ್ಸಿನಲ್ಲಿ ಮತ್ತೆ ತಂದೆಯಾದ ಅಂಬಟಿ ರಾಯುಡು: ವಾರಸ್ದಾರನ ಎಂಟ್ರಿ, ಖುಷಿ ಹಂಚಿಕೊಂಡ ಮಾಜಿ ಕ್ರಿಕೆಟಿಗ! Ambati Rayudu

ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಕುಟುಂಬ
ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಕುಟುಂಬ
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಮತ್ತೆ ತಂದೆಯಾಗಿದ್ದಾರೆ
  • ರಾಯುಡು ಅವರ ಪತ್ನಿ ವಿದ್ಯಾ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ
  • ಪತ್ನಿ ಮತ್ತು ಮಗನೊಂದಿಗೆ ತೆಗೆದುಕೊಂಡಿರುವ ಸೆಲ್ಫಿ ಫೋಟೋವನ್ನು ರಾಯುಡು ಹಂಚಿಕೊಂಡಿದ್ದಾರೆ
ಹೈದರಾಬಾದ್​: ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ( Ambati Rayudu ) ಮತ್ತೆ ತಂದೆಯಾಗಿದ್ದಾರೆ. ಅವರ ಪತ್ನಿ ವಿದ್ಯಾ, ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ರಾಯುಡು ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಆಸ್ಪತ್ರೆಯ ಬೆಡ್​ ಮೇಲೆ ಮಲಗಿರುವ ತಮ್ಮ ಪತ್ನಿ ಮತ್ತು ಮಗನೊಂದಿಗೆ ತೆಗೆದುಕೊಂಡಿರುವ ಸೆಲ್ಫಿ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ರಾಯುಡು ಹಂಚಿಕೊಂಡಿದ್ದಾರೆ. "ಮಗನನ್ನು ಪಡೆದಿದ್ದಕ್ಕೆ ತುಂಬಾ ಸಂತೋಷ" ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಸದ್ಯ ಈ ಫೋಟೋ ಈಗ ವೈರಲ್ ಆಗಿದ್ದು, ಸಹ ಆಟಗಾರರು ಮತ್ತು ನೆಟ್ಟಿಗರು ರಾಯುಡು ಕುಟುಂಬಕ್ಕೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಅಂದಹಾಗೆ, ಅಂಬಟಿ ರಾಯುಡು ಮತ್ತು ವಿದ್ಯಾ ಅವರು 2009 ರಲ್ಲಿ ವಿವಾಹವಾದರು. ದಂಪತಿಗೆ 2020 ಜುಲೈ ತಿಂಗಳಲ್ಲಿ ಮೊದಲು ಹೆಣ್ಣು ಮಗು ಜನಿಸಿತು. ಆ ಮಗುವಿಗೆ ವಿವಿಯಾ ಎಂದು ಹೆಸರಿಡಲಾಗಿದೆ. 2023 ರಲ್ಲಿ ಎರಡನೇ ಮಗಳು ಜನಿಸಿದಳು. ಇದೀಗ ಗಂಡು ಮಗು ಜನಿಸಿದ್ದು, 40ನೇ ವಯಸ್ಸಿನಲ್ಲಿ ರಾಯುಡು ಮೂರನೇ ಬಾರಿಗೆ ತಂದೆಯಾಯಾಗಿದ್ದಾರೆ.
ಇನ್ನು ಕ್ರಿಕೆಟ್​ ವಿಚಾರಕ್ಕೆ ಬರುವುದಾದರೆ, 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ರಾಯುಡು, ಟೀಮ್ ಇಂಡಿಯಾ ಪರ 55 ಏಕದಿನ ಮತ್ತು 6 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಕೊನೆಯ ಬಾರಿಗೆ 2019 ರಲ್ಲಿ ಭಾರತವನ್ನು ಪ್ರತಿನಿಧಿಸಿದರು. 2023 ರಲ್ಲಿ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದರು.
ರಾಯುಡು ಅವರು ಭಾರತದ ಪರ ಏಕದಿನ ಪಂದ್ಯಗಳಲ್ಲಿ 47.1 ರ ಸರಾಸರಿಯಲ್ಲಿ 1694 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು ಮತ್ತು 10 ಅರ್ಧಶತಕಗಳು ಸೇರಿವೆ. ಅವರು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 42 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 204 ಪಂದ್ಯಗಳನ್ನು ಆಡಿದ್ದು, 28.2 ರ ಸರಾಸರಿಯಲ್ಲಿ 4348 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 22 ಅರ್ಧಶತಕಗಳು ಸೇರಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net