ಪಾಕ್ ವಿರುದ್ಧ ರೋಚಕ ಗೆಲುವು: ಟೀಮ್​ ಇಂಡಿಯಾ ಆಟಗಾರರ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ ಶೋಯೆಬ್ ಅಖ್ತರ್..! U19 Asia Cup 2026

ನಾನು ಆಡುವ ದಿನಗಳಲ್ಲಿ ಎದುರಾಳಿಗಳಾಗಿದ್ದ ಭಾರತೀಯ ಆಟಗಾರರೊಂದಿಗೆ ಇಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಸಚಿನ್ ತೆಂಡೂಲ್ಕರ್ ವಿಶ್ವದ ಶ್ರೇಷ್ಠ ಬ್ಯಾಟರ್ ಎಂದು ನಾನು ಇಂದಿಗೂ ಹೇಳುತ್ತೇನೆ. ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ನನ್ನ ಉತ್ತಮ ಸ್ನೇಹಿತರು. ನಾವೆಂದೂ ಮೈದಾನದಲ್ಲಿ ಈ ರೀತಿ ವರ್ತಿಸಿರಲಿಲ್ಲ ಎಂದು ಅಖ್ತರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
U19 Asia Cup 2026
ಪಾಕ್ ವಿರುದ್ಧ ರೋಚಕ ಗೆಲುವು: ಟೀಮ್​ ಇಂಡಿಯಾ ಆಟಗಾರರ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ ಶೋಯೆಬ್ ಅಖ್ತರ್..!
Published on: 

ಇಸ್ಲಮಾಬಾದ್​​: ಒಮನ್​ನ ಅಲ್ ಅಮೆರಾತ್‌ ನಗರದಲ್ಲಿ ನಡೆದ 2026ರ ಅಂಡರ್-19 ಏಷ್ಯಾಕಪ್ ( U19 Asia Cup 2026 ) ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 1 ವಿಕೆಟ್‌ನಿಂದ ಮಣಿಸುವ ಮೂಲಕ ಭಾರತ ದಾಖಲೆಯ 9ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ಕೊನೆಯ ಹಂತದಲ್ಲಿ ಜತೆಯಾದ ಮೋಹಿತ್ ಉಲ್ವಾ ಮತ್ತು ಮನಲ್ ಚೌಹಾಣ್ ಕೇವಲ 35 ಎಸೆತಗಳಲ್ಲಿ 57 ರನ್‌ಗಳ ನಿರ್ಣಾಯಕ ಜೊತೆಯಾಟವಾಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ಚೌಹಾಣ್ 32 ಎಸೆತಗಳಲ್ಲಿ 47 ರನ್ ಗಳಿಸಿದರೆ, ಮೋಹಿತ್ ಉಲ್ವಾ ಕೇವಲ 26 ಎಸೆತಗಳಲ್ಲಿ ಅಜೇಯ 49 ರನ್ ಸಿಡಿಸಿ, ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಭಾರತಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟರು.

ಪಂದ್ಯದ ಕೊನೆಯ ಎಸೆತದಲ್ಲಿ ಮೋಹಿತ್ ಉಲ್ವಾ ಗೆಲುವಿನ ರನ್ ಬಾರಿಸುತ್ತಿದ್ದಂತೆ ಮೈದಾನದಲ್ಲಿ ಭಾವನೆಗಳು ಕಟ್ಟೆಯೊಡೆದವು. ಈ ವೇಳೆ ಭಾರತೀಯ ಆಟಗಾರರು ಪಾಕಿಸ್ತಾನ ತಂಡಕ್ಕೆ ಅತ್ಯಂತ ಆಕ್ರಮಣಕಾರಿಯಾಗಿ ಬೀಳ್ಕೊಡುಗೆ (ಸೆಂಡ್-ಆಫ್) ನೀಡುವ ಮೂಲಕ ಸಂಭ್ರಮಿಸಿದರು. ಭಾರತೀಯ ಯುವ ಆಟಗಾರರ ಈ ವರ್ತನೆಯು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಯುವ ಆಟಗಾರರ ಈ ಆಕ್ರಮಣಕಾರಿ ಮನೋಭಾವವನ್ನು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಕ್ರೀಡಾಸ್ಫೂರ್ತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

Also Read
ಇಡೀ ಕ್ರೆಡಿಟ್​ ಅವರಿಗೆ... ಕಿವೀಸ್​ ಎದುರು ಏಕದಿನ ಸರಣಿ ಗೆದ್ದ ಬೆನ್ನಲ್ಲೇ ಶ್ರೇಯಸ್​ ಅಯ್ಯರ್​ ಮಾತು | Shreyas Iyer
U19 Asia Cup 2026

ಇದೀಗ ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್, ಮೈದಾನದಲ್ಲಿ ಆಟದ ಜತೆಗೆ ಮೌಲ್ಯಗಳನ್ನೂ ಗೌರವಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ. ನಾವು ಕೇವಲ ಕ್ರಿಕೆಟ್ ಆಡಿದರೆ ಸಾಲದು, ಕ್ರೀಡಾ ಮೌಲ್ಯಗಳನ್ನೂ ಪಾಲಿಸಬೇಕು. ನಾನು ಆಡುವ ದಿನಗಳಲ್ಲಿ ಎದುರಾಳಿಗಳಾಗಿದ್ದ ಭಾರತೀಯ ಆಟಗಾರರೊಂದಿಗೆ ಇಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಸಚಿನ್ ತೆಂಡೂಲ್ಕರ್ ವಿಶ್ವದ ಶ್ರೇಷ್ಠ ಬ್ಯಾಟರ್ ಎಂದು ನಾನು ಇಂದಿಗೂ ಹೇಳುತ್ತೇನೆ. ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ನನ್ನ ಉತ್ತಮ ಸ್ನೇಹಿತರು. ನಾವೆಂದೂ ಮೈದಾನದಲ್ಲಿ ಈ ರೀತಿ ವರ್ತಿಸಿರಲಿಲ್ಲ ಎಂದು ಅಖ್ತರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದೇ ವೇಳೆ ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಹೇಳಿಕೆ ನೀಡಿರುವ ಅಖ್ತರ್, ಇಡೀ ಟೂರ್ನಿಯಲ್ಲಿ ಪಾಕಿಸ್ತಾನವೇ ಅತ್ಯಂತ ಬಲಿಷ್ಠ ತಂಡವಾಗಿತ್ತು ಆದರೆ, ಫೈನಲ್‌ನಲ್ಲಿ ಒತ್ತಡ ನಿಭಾಯಿಸಲು ವಿಫಲವಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಅಂಡರ್-19 ಹುಡುಗರಿಗೆ ನನ್ನ ಸಂದೇಶವಿಷ್ಟೇ, ಖಂಡಿತವಾಗಿಯೂ ಆಕ್ರಮಣಕಾರಿ ಆಟವಾಡಿ, ಅದು ನನಗೆ ಇಷ್ಟವಾಯಿತು. ಆದರೆ, ಇಡೀ ಟೂರ್ನಿಯಲ್ಲಿ ಪಾಕಿಸ್ತಾನವು ಭಾರತಕ್ಕಿಂತ ಎಷ್ಟೋ ಪಟ್ಟು ಬಲಿಷ್ಠ ಹಾಗೂ ಶ್ರೇಷ್ಠ ತಂಡವಾಗಿತ್ತು. ದುರದೃಷ್ಟವಶಾತ್ ನಿರ್ಣಾಯಕ ಹಂತದಲ್ಲಿ ಒತ್ತಡವನ್ನು ನಿಭಾಯಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.

Also Read
ಮೊದಲ ಬ್ಯಾಟ್‌ನ ಮಾತೇ ಬೇರೆ...ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು 37 ವರ್ಷ ಪೂರೈಸಿದ ನಿಮಿತ್ತ ಭಾವುಕ ಪೋಸ್ಟ್ ಹಂಚಿಕೊಂಡ ಸಚಿನ್! | Sachin Tendulkar
U19 Asia Cup 2026

ಅಂತಿಮವಾಗಿ ಭಾರತ ತಂಡದ ಗೆಲುವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಶೋಯೆಬ್ ಅಖ್ತರ್, ಒತ್ತಡದ ಸನ್ನಿವೇಶಗಳನ್ನು ಭಾರತ ಯಾವಾಗಲೂ ಚೆನ್ನಾಗಿ ನಿಭಾಯಿಸುತ್ತದೆ ಎಂದು ಒಪ್ಪಿಕೊಂಡಿದ್ದಾರೆ. ಭಾರತ ತಂಡಕ್ಕೆ ಅಭಿನಂದನೆಗಳು, ಅವರು ಅದ್ಭುತ ಕ್ರಿಕೆಟ್ ಆಡಿದರು. ಪಂದ್ಯವನ್ನು ಗೆಲ್ಲಿಸಿಕೊಡುವಂತಹ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಅತ್ಯುತ್ತಮ ಫಿನಿಶರ್‌ಗಳು ಭಾರತದಲ್ಲಿದ್ದರು. ಎಂದಿನಂತೆ ಭಾರತೀಯರು ನಿರ್ಣಾಯಕ ಕ್ಷಣಗಳಲ್ಲಿ ಒತ್ತಡವನ್ನು ಹೇಗೆ ನಿಭಾಯಿಸಬೇಕೆಂದು ಕರಗತ ಮಾಡಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಭಾರತದ ಐತಿಹಾಸಿಕ ಗೆಲುವನ್ನು ಕೊಂಡಾಡಿದ್ದಾರೆ, (ಏಜೆನ್ಸೀಸ್​).