ಇಡೀ ಕ್ರೆಡಿಟ್​ ಅವರಿಗೆ... ಕಿವೀಸ್​ ಎದುರು ಏಕದಿನ ಸರಣಿ ಗೆದ್ದ ಬೆನ್ನಲ್ಲೇ ಶ್ರೇಯಸ್​ ಅಯ್ಯರ್​ ಮಾತು | Shreyas Iyer

ಇಡೀ ಕ್ರೆಡಿಟ್​ ಅವರಿಗೆ... ಕಿವೀಸ್​ ಎದುರು ಏಕದಿನ ಸರಣಿ ಗೆದ್ದ ಬೆನ್ನಲ್ಲೇ ಶ್ರೇಯಸ್​ ಅಯ್ಯರ್​ ಮಾತು |  Shreyas Iyer
ಇಡೀ ಕ್ರೆಡಿಟ್​ ಅವರಿಗೆ... ಕಿವೀಸ್​ ಎದುರು ಏಕದಿನ ಸರಣಿ ಗೆದ್ದ ಬೆನ್ನಲ್ಲೇ ಶ್ರೇಯಸ್​ ಅಯ್ಯರ್​ ಮಾತು | Shreyas Iyer
Published on: 

Shreyas Iyer: ನ್ಯೂಜಿಲೆಂಡ್ ಪ್ರವಾಸದಲ್ಲಿ ಟಿ20 ಹಾಗೂ ಏಕದಿನ ಸರಣಿಗಳನ್ನು ಗೆದ್ದಿರುವ ಭಾರತ ತಂಡದ ಒಟ್ಟಾರೆ ಪ್ರದರ್ಶನದ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ಸಂತಸ ವ್ಯಕ್ತಪಡಿಸಿದ್ದಾರೆ. ಹವಾಮಾನ ವೈಪರೀತ್ಯ, ಬದಲಾಗುತ್ತಿದ್ದ ಪಿಚ್ ಪರಿಸ್ಥಿತಿಗಳು ಹಾಗೂ ಸ್ಟಾರ್​ ಆಟಗಾರರ ಅಲಭ್ಯತೆಯ ಸವಾಲುಗಳ ನಡುವೆಯೂ ಎರಡೂ ಸರಣಿಗಳನ್ನು ಗೆದ್ದಿರುವುದು ತಂಡದ ಒಗ್ಗಟ್ಟು ಮತ್ತು ಆತ್ಮವಿಶ್ವಾಸಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.

ಐದು ಪಂದ್ಯಗಳ ಏಕದಿನ ಸರಣಿಯನ್ನು 3-1 ಅಂತರದಲ್ಲಿ ಗೆದ್ದು ಬೀಗಿದ ಬೆನ್ನಲ್ಲೇ ಖುಷಿ ಹಂಚಿಕೊಂಡಿರುವ ಶ್ರೇಯಸ್ ಅಯ್ಯರ್, ಐದನೇ ಏಕದಿನ ಮ್ಯಾಚ್​ನಲ್ಲಿ ಬ್ಯಾಟಿಂಗ್ ಮೂಲಕ ನಿರೀಕ್ಷಿತ ರನ್ ಗಳಿಸಲು ಸಾಧ್ಯವಾಗದಿದ್ದರೂ, ಯಾವುದೇ ಕ್ಷಣದಲ್ಲಿ ಪಂದ್ಯದ ದಿಕ್ಕನ್ನು ಬದಲಿಸುವ ಸಾಮರ್ಥ್ಯ ತಂಡಕ್ಕಿದೆ ಎಂಬ ವಿಶ್ವಾಸ ಆಟಗಾರರಲ್ಲಿದೆ. ಗೆಲುವಿನ ಕ್ರೆಡಿಟ್​ ಬೌಲರ್​ಗಳಿಗೆ ಸಲ್ಲುತ್ತೆ. ಜತೆಗೆ ತಂಡದ ಪ್ರತಿಯೊಬ್ಬರೂ ಒಂದೇ ಗುರಿಯೊಂದಿಗೆ ಯೋಚಿಸುತ್ತಿದ್ದು, ಹಾಕಿಕೊಂಡ ಪ್ಲ್ಯಾನ್​ಗಳನ್ನು ಸಮರ್ಥವಾಗಿ ಮಾಡಿರುವುದಕ್ಕೆ ಸಂತಸವಿದೆ ಎಂದಿದ್ದಾರೆ.

ಟೆಸ್ಟ್ ಸರಣಿಯ ಸಿದ್ಧತೆ ಮತ್ತು ಗಾಯದ ಸಮಸ್ಯೆಗಳಿಂದಾಗಿ ಕೆಲವು ಪ್ರಮುಖ ಆಟಗಾರರು ಲಭ್ಯವಿರಲಿಲ್ಲ. ಹೀಗಾಗಿ ತಂಡದಲ್ಲಿ ಕೆಲವು ಬದಲಾವಣೆ ಮಾಡಬೇಕಾಯಿತು. ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು ಆಟಗಾರರಿಗೆ ಸವಾಲಾಗಿದ್ದರೂ, ಯಾರೂ ಯಾವುದೇ ನೆಪ ಹೇಳದೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಿದ್ದಾರೆ. ಹಲವು ಸವಾಲುಗಳ ನಡುವೆಯೂ ತಂಡದ ಆಟಗಾರರು ಒಗ್ಗಟ್ಟಿನಿಂದ ಆಡಿದ್ದು, ನ್ಯೂಜಿಲೆಂಡ್ ಪ್ರವಾಸದಲ್ಲಿ ಎರಡೂ ಸರಣಿಗಳ ಗೆಲುವಿಗೆ ಪ್ರಮುಖ ಕಾರಣವಾಯಿತು ಎಂದು ಹೇಳಿದ್ದಾರೆ.

Also Read
ಕ್ಷಣಾರ್ಧದಲ್ಲಿ ಜನರ ಎದುರೇ ಬದಲಾಗುತ್ತೆ ಮುಖದ ಬಣ್ಣ, ಭಾವನೆ! ಚೀನಾದ 300 ವರ್ಷಗಳ ಕಲೆ ಬಗ್ಗೆ ಇಲ್ಲಿದೆ ರೋಚಕ ಮಾಹಿತಿ
ಇಡೀ ಕ್ರೆಡಿಟ್​ ಅವರಿಗೆ... ಕಿವೀಸ್​ ಎದುರು ಏಕದಿನ ಸರಣಿ ಗೆದ್ದ ಬೆನ್ನಲ್ಲೇ ಶ್ರೇಯಸ್​ ಅಯ್ಯರ್​ ಮಾತು |  Shreyas Iyer

ಪಂದ್ಯದ ವಿವರ

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ಆರಂಭಿಕರಿಂದ ಉತ್ತಮ ಜತೆಯಾಟ ಸಿಗಲಿಲ್ಲ. ರೋಹಿತ್ ಶರ್ಮಾ 7 ರನ್​ ಮತ್ತು ರುತುರಾಜ್ ಗಾಯಕ್ವಾಡ್​ 17ಕ್ಕೆ ಔಟ್​ ಆಗಿ ಪೆವಿಲಿಯನ್ ಸೇರಿದರು. ಇನ್ನು, ಅವರ ನಂತರ ಕ್ರೀಸ್​ಗಿಳಿದ ವಿರಾಟ್​ ಕೊಹ್ಲಿ (5), ಶ್ರೇಯಸ್​ ಅಯ್ಯರ್ (22) ಗಳಿಸಿ, ಬೇಗನೇ ಕಿವೀಸ್ ಬೌಲರ್​ಗಳಿಗೆ ವಿಕೆಟ್​ ಒಪ್ಪಿಸಿದರು. ಇವರ ಬಳಿಕ ಬಂದ ಅಕ್ಸರ್ ಪಟೇಲ್​ (46) ಮತ್ತು ಇಶಾನ್ ಕಿಶನ್​ (46) ಅವರ ಉತ್ತಮ ಇನ್ನಿಂಗ್ಸ್​ ತಂಡದ ಒಟ್ಟು ಮೊತ್ತವನ್ನು 200ರ ಗಡಿದಾಟಿಸಲು ಸಹಾಯ ಮಾಡಿತು. ಅಲ್ಲಿಗೆ, 42.1 ಓವರ್​ಗೆ 209 ರನ್​ಗೆ ಭಾರತ ಆಲ್​ಔಟ್​ ಆಯಿತು.


ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್​ಗೂ ಆರಂಭಿಕ ಬ್ಯಾಟರ್​ಗಳಿಂದ ಅಂತಹ ಉತ್ತಮ ಓಪನಿಂಗ್ ಏನೂ ಸಿಗಲಿಲ್ಲ. ಸ್ಟಾರ್​ ಬ್ಯಾಟರ್​ಗಳೇ ತಮ್ಮ ವೈಯಕ್ತಿಕ ಸ್ಕೋರ್​ ಅನ್ನು 30ಕ್ಕೂ ಅಧಿಕ ಗಳಿಸಲು ತೀರ ಹೆಣಗಾಡಿದರು. ವಿಲ್​ ಯಂಗ್​, ಟಿಮ್​, ಫಿನ್​ ಅಲೆನ್, ಮೈಕಲ್​ ಬ್ರೇಸ್​ವೆಲ್​, ಮಿಚೆಲ್​ ಸ್ಯಾಟ್ನರ್​ನಂತಹ ಸ್ಟಾರ್​ ಬ್ಯಾಟರ್​ಗಳ ತಂಡಕ್ಕೆ ಕೈಕೊಟ್ಟಿದ್ದು ಪಂದ್ಯವನ್ನು ಸೋಲಿಗೆ ದೂಡಿದ್ದು ಮಾತ್ರವಲ್ಲ, ಸರಣಿಯಲ್ಲಿ ಭಾರಿ ಮುಖಭಂಗ ಅನುಭವಿಸಲು ಕಾರಣವಾಯಿತು.