ಸಚಿನ್ ಬಗ್ಗೆ ಕೇಳಿದ್ದಾರೆ, ಇವನ ಆಟ ನೋಡ್ತಿದ್ದಾರೆ! ಭಾರತ ತಂಡಕ್ಕೆ ಆಯ್ಕೆಯಾಗುವುದು ತಮಾಷೆಯಲ್ಲ; ವೈಭವ್​ ಸೂರ್ಯವಂಶಿಯನ್ನು ಹೊಗಳಿದ ಜೋಸ್​ ಬಟ್ಲರ್​​! Jos Buttler on Vaibhav Suryavanshi

ವೈಭವ್ ಆಟವನ್ನು ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿ ಜೋಸ್ ಬಟ್ಲರ್ ಹೇಳಿದ್ದೇನು?
ವೈಭವ್ ಆಟವನ್ನು ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿ ಜೋಸ್ ಬಟ್ಲರ್ ಹೇಳಿದ್ದೇನು?
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟ ವೈಭವ್ ಸೂರ್ಯವಂಶಿ
  • ವೈಭವ್ ಆಟವನ್ನು ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿ ಜೋಸ್ ಬಟ್ಲರ್ ಹೇಳಿದ್ದೇನು?
  • ಸಚಿನ್​ ಬಗ್ಗೆ ಜನ ಕೇಳಿದ್ದರು, ವೈಭವ್​ನ ಆಟವನ್ನು ನೋಡುತ್ತಿದ್ದಾರೆ
ಇಂಗ್ಲೆಂಡ್​: ಈ ವರ್ಷದ ಐಪಿಎಲ್​ನಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾದ ಹೆಸರೆಂದರೆ ಅದು ಖಂಡಿತವಾಗಿ ವೈಭವ್​ ಸೂರ್ಯವಂಶಿಯದ್ದಾಗಿದೆ. ಕೇವಲ 15 ವರ್ಷದ ಈ ಬಾಲಕ, ಅಂತಾರಾಷ್ಟ್ರೀಯ ಖ್ಯಾತಿಯ ಬೌಲರ್​ಗಳನ್ನು ಎದುರಿಸಿ, 776 ರನ್​ ಗಳಿಸುವ ಮೂಲಕ ಆರೆಂಜ್​ ಕ್ಯಾಪ್​ ಜೊತೆ ಇತರೆ 4 ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾನೆ.
ಐಪಿಎಲ್​ನಲ್ಲಿ ಶ್ರೇಷ್ಟ ಪ್ರದರ್ಶನ ನೀಡಿದ ಹಿನ್ನಲೆ ಇವನನ್ನು ಈಗ ಇಂಗ್ಲೆಂಡ್​ ಮತ್ತು ಐರ್ಲೆಂಡ್​ ವಿರುದ್ಧ ನಡೆಯಲಿರುವ ಟಿ-20 ಟೂರ್ನಿಗೆ ಆಯ್ಕೆ ಮಾಡಲಾಗಿದೆ. ಇದರೊಟ್ಟಿಗೆ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಅತಿ ಕಡಿಮೆ ವಯಸ್ಸಿನ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್​ ಪಾತ್ರನಾಗಿದ್ದಾನೆ.

ಸಚಿನ್​ ಬಗ್ಗೆ ಜನ ಕೇಳಿದ್ದರು, ವೈಭವ್​ನನ್ನು ನೋಡಿದ್ದಾರೆ!

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಇಂಗ್ಲೆಂಡ್​ ತಂಡದ ಮಾಜಿ ನಾಯಕ ಜೋಸ್​ ಬಟ್ಲರ್ (Jos Buttler on Vaibhav Suryavanshi)​​, 15 ವರ್ಷದ ವೈಭವ್​ ಸೂರ್ಯವಂಶಿ ಒಬ್ಬ ಉತ್ತಮ ಬ್ಯಾಟ್ಸ್​ಮನ್​ ಆಗಿದ್ದಾನೆ. ಭಾರತ ತಂಡದಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಸ್ಥಾನ ಪಡೆಯುವುದು ಕಡಿಮೆ ಸಾಧನೆ ಅಲ್ಲವೇ ಅಲ್ಲ ಎಂದಿದ್ದಾರೆ.
ತಾವು ಗುಜರಾತ್​ ಟೈಟಾನ್ಸ್​​ ತಂಡದಲ್ಲಿ ಆಡುತ್ತಿದ್ದಾಗ, ಸಹಾಯಕ ಕೋಚ್​ ಆಗಿದ್ದ ಆಶಿಶ್​ ಕಪೂರ್​, ಕ್ರಿಕೆಟ್​ ದೇವರೆಂದೇ ಖ್ಯಾತರಾಗಿರುವ ಸಚಿನ್​ ತೆಂಡೂಲ್ಕರ್​ ಮತ್ತು ವೈಭವ್​ ಸೂರ್ಯವಂಶಿಯನ್ನು ಹೋಲಿಸಿ ಹೀಗೆ ಹೇಳಿದ್ದರಂತೆ.
ಸಚಿನ್​ ತೆಂಡೂಲ್ಕರ್​ ಮತ್ತು ವೈಭವ್​ ಸೂರ್ಯವಂಶಿ ಇಬ್ಬರು ವಯಸ್ಸಿಗೆ ಮೀರಿದ ಪ್ರದರ್ಶನ ನೀಡಿದ್ದಾರೆ. ಆದರೆ ಈಗ ಸೋಷಿಯಲ್​ ಮೀಡಿಯಾ ಸಾಕಷ್ಟು ಬೆಳೆದಿರುವ ಕಾರಣ ವೈಭವ್​ ಸೂರ್ಯವಂಶಿ ಎಲ್ಲರಿಗೂ ಗೊತ್ತು, ಅವನ ಆಟವನ್ನು ಹೆಚ್ಚು ಕಡಿಮೆ ಎಲ್ಲರೂ ವೀಕ್ಷಿಸಿದ್ದಾರೆ.
ಆದರೆ ಸಚಿನ್​ ತೆಂಡೂಲ್ಕರ್​​ ತನ್ನ ಉತ್ತುಂಗದಲ್ಲಿದ್ದಾಗ, ಯಾವುದೇ ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಸಚಿನ್​ ಬಗ್ಗೆ ನ್ಯೂಸ್​ ಪೇಪರ್​ನಲ್ಲಿ ಪ್ರಕಟವಾದ ಲೇಖಗಳಲ್ಲಿ ಅವನ ಆಟದ ಚಿತ್ರಣ ದೊರೆಯುತ್ತಿತ್ತು. ಹೆಚ್ಚಿನ ಜನರಿಗೆ ಸಚಿನ್​ ಕಥೆಗಳ ಮೂಲಕವೇ ಪರಿಚಿತನಾಗಿದ್ದ, ಬಹಳ ಕಡಿಮೆ ಜನ ಸಚಿನ್​ನ ಆಟವನ್ನು ನೋಡಿದ್ದರು. ಆ ಸಮಯದಲ್ಲಿ ಸೋಷಿಯಲ್​ ಮೀಡಿಯಾ ಇದ್ದಿದ್ದರೆ ಸಚಿನ್​ ತೆಂಡೂಲ್ಕರ್​ ಕ್ರಿಕೆಟ್​ ಲೋಕದ ಖಾಯಂ ಅನಭಿಷಕ್ತ ದೊರೆಯಾಗಿರುತ್ತಿದ್ದ ಎಂದು ಕೋಚ್​ ಆಶಿಶ್ ಕಪೂರ್​ ಹೇಳಿದ್ದರಂತೆ.
ವೈಭವ್​ನನ್ನು ಶ್ಲಾಘಿಸಿದ ಬಟ್ಲರ್​!
ಈ ಭಾರಿಯ ಐಪಿಎಲ್​ನಲ್ಲಿ ವೈಭವ್​ ಸೂರ್ಯವಂಶಿ ಬಹಳ ಶ್ರೇಷ್ಟವಾದ ಆಟವನ್ನು ಪ್ರದರ್ಶಿಸಿದ್ದಾನೆ. ಅಂತಾರಾಷ್ಟ್ರೀಯ ಬೌಲರ್​ಗಳನ್ನು ಎದುರಿಸಿ 776 ರನ್​ ಗಳಿಸುವುದು ಸುಲಭದ ಮಾತಲ್ಲ. ಘಟಾನುಘಟಿ ಬ್ಯಾಟ್ಸ್​ಮನ್​ಗಳ ಜೊತೆ ಪೈಪೋಟಿ ನಡೆಸಿ ಆರೆಂಜ್​ ಕ್ಯಾಪ್​ ಪಡೆದಿರುವುದು ಸಾಧನೆಯೇ ಸರಿ ಎಂದು ಹೊಗಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net