ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿ, ಹಾರ್ದಿಕ್ ಕ್ಯಾಚ್ ನೀಡಿದರು. ರಿಂಕು ಜೊತೆ ಹೊಂದಾಣಿಕೆಯ ಕೊರತೆಯಿಂದಾಗಿ ದುಬೆ ರನೌಟ್ ಆದರು. ಅದರ ನಂತರ, ಅಕ್ಷರ್ ಮತ್ತು ರಿಂಕು ಸಿಂಗ್ ಬೇಗನೆ ಔಟಾದರು. ಕೊನೆಯಲ್ಲಿ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಿದ್ದರೆ, ಭಾರತ 250ರ ಗಡಿ ದಾಟುತ್ತಿತ್ತು. ಆದರೆ, ಬ್ಯಾಟರ್‌ಗಳು ಸತತವಾಗಿ ವಿಫಲರಾದರು. ಇದು ಮುಂದಿನ ಪಂದ್ಯಕ್ಕೆ ಒಂದು ಎಚ್ಚರಿಕೆ ಗಂಟೆ ಎಂದು ಹೇಳಬಹುದು. ಏಕೆಂದರೆ, ಮುಂದಿನ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆಯಲಿದೆ. ನಮೀಬಿಯಾ ವಿರುದ್ಧ ಆಡಿದಂತೆ ಪಾಕ್ ವಿರುದ್ಧ ಆಡಲಾದು. ಹೀಗಾಗಿ, ಭಾರತೀಯ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಆರಂಭಿಕರು ಆಡದಿದ್ದರೆ ಟೀಮ್ ಇಂಡಿಯಾ ಬಹುಬೇಗ ಕುಸಿತ ಕಾಣುತ್ತದೆ ಅನ್ನೋದು ಭಾರತೀಯ ಚಿಂತೆಯಾಗಿದೆ.