ಅಮೆರಿಕದ ಮತ್ತೊಬ್ಬ ಕ್ರಿಕೆಟಿಗ ಶೆಹನ್ ಜಯಸೂರ್ಯ. ಅವರು 2010ರ ದಶಕದ ದ್ವಿತೀಯಾರ್ಧದಲ್ಲಿ ಶ್ರೀಲಂಕಾ ತಂಡದ ಭಾಗವಾಗಿದ್ದರು. 34 ವರ್ಷದ ಜಯಸೂರ್ಯ, ಇನ್ನೂ ಅಮೆರಿಕ ಪರ ಪಾದಾರ್ಪಣೆ ಮಾಡಿಲ್ಲ. ಆದರೆ, ಅವರು 30 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಎಲ್ಲವೂ ಶ್ರೀಲಂಕಾ ಪರ. 2016 ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಜಯಸೂರ್ಯ ಅವರು ಎರಡು ಪಂದ್ಯಗಳನ್ನು ಆಡಿದರು. ತಮ್ಮ ಏಕೈಕ ಇನ್ನಿಂಗ್ಸ್ನಲ್ಲಿ ಮೂರು ಎಸೆತಗಳಲ್ಲಿ ಒಂದು ರನ್ ಗಳಿಸಿದರು. ಒಟ್ಟಾರೆಯಾಗಿ, ಶೆಹಾನ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 436 ರನ್ ಗಳಿಸಿದ್ದು, 6 ವಿಕೆಟ್ಗಳನ್ನು ಪಡೆದಿದ್ದಾರೆ.