ರನ್​​ ಮಳೆ ಹರಿಸೋ ಭಾರತೀಯರ ಬ್ಯಾಟ್​ಗಳಲ್ಲಿ ವಿಶೇಷ ರಬ್ಬರ್ ಪದರಗಳಿವೆಯೇ? ಅಸಲಿ ಸತ್ಯ ಏನು? Indian players​

ಭಾರತೀಯ ಆಟಗಾರರಾದ ( Indian players  ) ಅಭಿಷೇಕ್​ ಶರ್ಮ, ಸೂರ್ಯಕುಮಾರ್​ ಯಾದವ್​ ಮತ್ತು ಇಶಾನ್​ ಕಿಶನ್​
ಭಾರತೀಯ ಆಟಗಾರರಾದ ( Indian players ) ಅಭಿಷೇಕ್​ ಶರ್ಮ, ಸೂರ್ಯಕುಮಾರ್​ ಯಾದವ್​ ಮತ್ತು ಇಶಾನ್​ ಕಿಶನ್​
Published on

ಪ್ರಮುಖ ಮುಖ್ಯಾಂಶಗಳು

  • ತೊಂಬತ್ತರ ದಶಕದಲ್ಲಿ ವಿಶ್ವದ ಅತ್ಯುತ್ತಮ ಕ್ರಿಕೆಟಿಗರ ಬಗ್ಗೆ ವಿಚಿತ್ರ ಆರೋಪಗಳು ಸಾಮಾನ್ಯವಾಗಿ ಕೇಳಿಬರುತ್ತಿದ್ದವು
  • ಶ್ರೀಲಂಕಾದ ಜಯಸೂರ್ಯ, ಆಸ್ಟ್ರೇಲಿಯಾದ ಹೇಡನ್ ಮತ್ತು ಗಿಲ್‌ಕ್ರಿಸ್ಟ್ ಬಗ್ಗೆ ಆರೋಪಗಳು ಸಾಮಾನ್ಯವಾಗಿತ್ತು
  • ಈ ಆಟಗಾರರ ಸ್ಫೋಟಕ ಆಟ ನೋಡಿ ಬ್ಯಾಟ್​ನಲ್ಲಿ ಸ್ಪ್ರಿಂಗ್​ ಅಥವಾ ರಬ್ಬರ್​ ಇದೆ ಎನ್ನುವ ಆರೋಪಗಳನ್ನು ಮಾಡುತ್ತಿದ್ದರು
  • ಇದೀಗ ಅಂಥದ್ದೇ ಆರೋಪಗಳು ನಮ್ಮ ಭಾರತೀಯ ಆಟಗಾರರ ವಿರುದ್ಧ ಕೇಳಿಬರುತ್ತಿದ್ದು, ಇದು ಎಷ್ಟರ ಮಟ್ಟಿಗೆ ಸತ್ಯ?
Indian players : ತೊಂಬತ್ತರ ದಶಕದಲ್ಲಿ ವಿಶ್ವದ ಅತ್ಯುತ್ತಮ ಕ್ರಿಕೆಟಿಗರ ಬಗ್ಗೆ ವಿಚಿತ್ರವಾದ ಆರೋಪಗಳು ಸಾಮಾನ್ಯವಾಗಿ ಕೇಳಿಬರುತ್ತಿದ್ದವು. ಆಗ, ಶ್ರೀಲಂಕಾದ ಸನತ್​ ಜಯಸೂರ್ಯ, ಪಾಕಿಸ್ತಾನದ ಶಾಹಿದ್ ಅಫ್ರಿದಿ ಮತ್ತು ಆಸ್ಟ್ರೇಲಿಯಾದ ಸೂಪರ್‌ಸ್ಟಾರ್‌ಗಳಾದ ಹೇಡನ್ ಮತ್ತು ಗಿಲ್‌ಕ್ರಿಸ್ಟ್ ಅವರ ಬಗ್ಗೆ ದಿನಕ್ಕೊಂದು ವಿಚಿತ್ರ ಕತೆಗಳು ಹರಿದಾಡುತ್ತಿದ್ದವು. ಆದರೆ, ಇಂತಹದ್ದನ್ನೆಲ್ಲ ಸಾಮಾನ್ಯ ಜನರು ಮಾತ್ರ ಮಾತನಾಡುತ್ತಿದ್ದರು. ಆದರೆ, ಈಗ ಕ್ರಿಕೆಟಿಗರೇ ಇಂತಹ ವಿಚಿತ್ರ ಆರೋಪಗಳನ್ನು ಮಾಡುತ್ತಿರುವುದು ನಿಜಕ್ಕೂ ಸೋಜಿಗದ ಸಂಗತಿಯಾಗಿದೆ.
ಹೌದು, ಶ್ರೀಲಂಕಾದ ಕ್ರಿಕೆಟಿಗ ಭಾನುಕ ರಾಜಪಕ್ಸೆ ಅವರು ಭಾರತೀಯ ಆಟಗಾರರ ಬಗ್ಗೆ ಮಾಡಿರುವ ವಿಚಿತ್ರ ಆರೋಪಗಳು ಇದೀಗ ಎಲ್ಲಡೆ ಚರ್ಚೆಯಾಗುತ್ತಿವೆ.
ಅಷ್ಟಕ್ಕೂ ರಾಜಪಕ್ಸೆ ಹೇಳಿದ್ದೇನೆಂದರೆ, ಭಾರತೀಯ ಆಟಗಾರರು ರನ್ ಗಳಿಸಲು ತಮಗೆ ಸಹಾಯವಾಗುವಂತೆ ತಮ್ಮ ಬ್ಯಾಟ್‌ಗಳ ಮೇಲೆ ವಿಚಿತ್ರವಾದ ರಬ್ಬರ್ ಪದರವನ್ನು ಹೊಂದಿರುತ್ತಾರೆ ಎಂದಿದ್ದಾರೆ. ಭಾರತೀಯ ಆಟಗಾರರು ನಮಗಿಂತ ಉತ್ತಮವಾದ ಬ್ಯಾಟ್‌ಗಳನ್ನು ಪಡೆಯುತ್ತಾರೆ. ಆ ಬ್ಯಾಟ್‌ಗಳ ಮೇಲೆ ವಿಶೇಷ ರಬ್ಬರ್ ಪದರವಿದೆ ಎಂದು ತೋರುತ್ತದೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನನಗೆ ತಿಳಿದಿಲ್ಲ. ಬೇರೆ ಯಾವುದೇ ಆಟಗಾರನು ಈ ಬ್ಯಾಟ್ ಅನ್ನು ಖರೀದಿಸಲು ಸಾಧ್ಯವಿಲ್ಲ. ಇದು ಎಲ್ಲರಿಗೂ ತಿಳಿದಿದೆ ಎಂದು ರಾಜಪಕ್ಸೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಭಾರಿ ವಿವಾದ

ಯಾವಾಗ ರಾಜಪಕ್ಷೆ ಈ ಮಾತನ್ನು ಆಡಿದರೋ ಅದು ವಿವಾದದ ಸ್ವರೂಪ ಪಡೆದುಕೊಂಡಿತು. ಅನೇಕ ಮಂದಿ ರಾಜಪಕ್ಷೆ ಹೇಳಿಕೆಯನ್ನು ಖಂಡಿಸಿ, ಅವರನ್ನು ಟೀಕಿಸುತ್ತಿದ್ದಾರೆ. ಭಾರತೀಯರ ಪ್ರತಿಭೆಯನ್ನು ಅನುಮಾನಿಸಬೇಡಿ ಎಂದು ಖಡಕ್​ ತಿರುಗೇಟುಗಳನ್ನು ನೀಡುತ್ತಿದ್ದಾರೆ. ಯಾವಾಗ ತಮ್ಮ ಮಾತು ತಮಗೇ ತಿರುಗುಬಾಣವಾಯಿತೋ, ಅದರಿಂದ ಹೆದರಿದ ರಾಜಪಕ್ಷೆ ಇದೀಗ ಸ್ಪಷ್ಟನೆಯನ್ನು ನೀಡಿದ್ದಾರೆ.

ರಾಜಪಕ್ಸೆ ಸ್ಪಷ್ಟನೆ ಏನು?

ಭಾರತದಲ್ಲಿನ ವ್ಯವಸ್ಥೆಗಳು, ಅವುಗಳ ಗುಣಮಟ್ಟ ಮತ್ತು ಮೂಲಸೌಕರ್ಯಗಳು ಬಹಳಷ್ಟು ಅಭಿವೃದ್ಧಿ ಹೊಂದಿದೆ. ಭಾರತೀಯ ಬ್ಯಾಟ್ ತಯಾರಕರು ವಿಶ್ವದಲ್ಲೇ ಅತ್ಯುತ್ತಮರು. ಭಾರತೀಯ ಆಟಗಾರರ ಬ್ಯಾಟ್‌ಗಳು ಶ್ರೀಲಂಕಾ ಆಟಗಾರರ ಬ್ಯಾಟ್‌ಗಳಿಗಿಂತ ಎರಡು ಪಟ್ಟು ಉತ್ತಮವಾಗಿವೆ. ಇದನ್ನು ಬಹಳ ಗೌರವದಿಂದ ಹೇಳಲಾಗುತ್ತಿದೆ. ನಮ್ಮಲ್ಲಿ ಸಾಕಷ್ಟು ಹಣವಿದ್ದರೂ, ನಾವು ಉತ್ತಮ ಬ್ಯಾಟ್‌ಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದು ರಾಜಪಕ್ಸೆ ಸ್ಪಷ್ಟಪಡಿಸಿದರು.
ಅಂದಹಾಗೆ, ಇಂತಹ ಆರೋಪಗಳು ಹೊಸದೇನಲ್ಲ. ಇತ್ತೀಚೆಗೆ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್​ ಉಲ್​ ಹಕ್ ಸೇರಿದಂತೆ ಅಲ್ಲಿನ ಅನೇಕ ಮಾಜಿ ಕ್ರಿಕೆಟಿಗರು ಭಾರತೀಯರ ಆಟದ ಬಗ್ಗೆ ಅನುಮಾನ ಹೊರಹಾಕಿದರು. ಅದಕ್ಕೆ ಕಾರಣ ಟೀಮ್​ ಇಂಡಿಯಾದ ಆಟಗಾರರಾದ ಅಭಿಷೇಕ್​ ಶರ್ಮ ಮತ್ತು ಇಶಾನ್​ ಕಿಶಾನ್​ ನ್ಯೂಜಿಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ಮಾಡಿದರು. ಒಂದು ಹಂತದಲ್ಲಿ ಕಿವೀಸ್​ ಆಟಗಾರರು ಅಭಿಷೇಕ್​ ಶರ್ಮರ ಬ್ಯಾಟ್​ ಕೂಡ ಚೆಕ್​ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ವೈರಲ್​ ಆಗಿತ್ತು. ಆದರೆ, ಇದೆಲ್ಲ ಕೇವಲ ಆರೋಪಗಳಷ್ಟೇ, ಭಾರತೀಯರ ಬ್ಯಾಟ್​ಗಳಲ್ಲಿ ಅಂತಹ ರಬ್ಬರ್​ ಪದರಗಳಾಗಲಿ ಅಥವಾ ಸ್ಪ್ರಿಂಗ್​ಗಳಾಗಲಿ ಇಲ್ಲ. ನಮ್ಮ ಆಟಗಾರರಲ್ಲಿ ಇರುವುದು ಅದ್ಭುತ ಪ್ರತಿಭೆ ಎನ್ನಬಹುದು.

ನಿವೃತ್ತಿ ವಾಪಸ್​

ಅಂದಹಾಗೆ, 2022 ರಲ್ಲಿ 30 ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದ ರಾಜಪಕ್ಸೆ ನಂತರ ತಂಡಕ್ಕೆ ಮತ್ತೆ ಮರಳಿದರು. ಅವರು ಶ್ರೀಲಂಕಾ ಪರ 45 ಟಿ20 ಪಂದ್ಯಗಳು ಮತ್ತು ಐದು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ, ಈ ಬಾರಿಯ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿಲ್ಲ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net