ತಮ್ಮ ತಮ್ಮ ಇನ್ಸ್ಟಾಗ್ರಾಂನಲ್ಲಿ ಏಕಕಾಲದಲ್ಲಿ ನಿನ್ನೆ (ಡಿ.07) ಸ್ಟೋರಿ ಪೋಸ್ಟ್ ಮಾಡಿದ ಸ್ಮೃತಿ ಮತ್ತು ಪಲಾಶ್, ತಮ್ಮ ಮದುವೆ ಮುರಿದು ಬಿದ್ದಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದರು. ಅಲ್ಲದೆ, ತಮ್ಮ ವೈಯಕ್ತಿಕ ಜೀವನವನ್ನು ಗೌರವಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಇದರೊಂದಿಗೆ, ಕಳೆದ ಕೆಲವು ವಾರಗಳಿಂದ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದ್ದ ಸ್ಮೃತಿ-ಪಲಾಶ್ ಅವರ ವಿವಾಹಕ್ಕೆ ಕೊನೆಗೂ ಒಂದು ಉತ್ತರ ಸಿಕ್ಕಿದೆ. ಕಳೆದ ಒಂದು ವರ್ಷದಿಂದ ಭಾರಿ ಸುದ್ದಿಯಲ್ಲಿರುವ ಸ್ಮೃತಿ ಮತ್ತು ಪಲಾಶ್ ನಡುವಿನ ಪ್ರೀತಿ, ಪ್ರೇಮ ನಿವೇದನೆ, ಮದುವೆ ಹಾಗೂ ಬ್ರೇಕ್ಅಪ್ ಕತೆಯ ಕಂಪ್ಲೀಟ್ ಚಿತ್ರಣದ ಟೈಮ್ ಲೈನ್ ಅನ್ನು ನಾವೀಗ ವಿವರವಾಗಿ ತಿಳಿದುಕೊಳ್ಳೋಣ.