ಈ 3 ರಾಶಿಯವರು ಯಶಸ್ಸಿನ ಉತ್ತುಂಗಕ್ಕೇರಿದರು ಕೂಡ ಯಾವುದೇ ಅಹಂ ಇಲ್ಲದೇ ಬದುಕುತ್ತಾರಂತೆ! Zodiac Signs

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ
  • ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯ
  • ಒಬ್ಬ ವ್ಯಕ್ತಿಯ ರಾಶಿಚಕ್ರ ಆತನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ
  • ವ್ಯಕ್ತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಮೇಲೆಯೂ ಜ್ಯೋತಿಷ್ಯ ಪ್ರಭಾವ ಬೀರುತ್ತದೆ
Zodiac Signs : ಈ ಭೂಮಿಯ ಮೇಲೆ ಜನ್ಮ ತಾಳುವ ಪ್ರತಿಯೊಬ್ಬ ಮನುಷ್ಯನಲ್ಲೂ ವಿಶಿಷ್ಟ ಪ್ರತಿಭೆಗಳು ಇದ್ದೇ ಇರುತ್ತವೆ. ಅದೇ ರೀತಿ ಕೆಲವು ಪಾಸಿಟಿವ್​ ಮತ್ತು ನೆಗಿಟಿವ್​ ಗುಣಗಳು ಕೂಡ ಇರುತ್ತವೆ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.
ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜನ್ಮ ರಾಶಿ ಮತ್ತು ನಕ್ಷತ್ರ ಚಿಹ್ನೆಯು ಆತನ ಭವಿಷ್ಯದ ಜೀವನದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ವ್ಯಕ್ತಿಯ ಆರ್ಥಿಕ ಪರಿಸ್ಥಿತಿ, ಪ್ರೇಮ ಜೀವನ, ಮದುವೆ, ದಾಂಪತ್ಯ ಜೀವನ, ಉದ್ಯೋಗ ವಿಶೇಷ ವ್ಯಕ್ತಿತ್ವಗಳು ಮತ್ತು ಅವರ ಗುಣಗಳ ಮೇಲೆ ಜ್ಯೋತಿಷ್ಯದ ಪ್ರಭಾವ ತುಂಬಾ ಇದೆ.
ಅಂದಹಾಗೆ, ಕೆಲವು ರಾಶಿಗಳಲ್ಲಿ ಜನಿಸಿದ ಜನರು ಜೀವನದಲ್ಲಿ ಎಷ್ಟೇ ಯಶಸ್ಸನ್ನು ಸಾಧಿಸಿದರೂ ಅಥವಾ ಕೋಟಿ ಕೋಟಿ ರೂಪಾಯಿಗಳ ಮಾಲೀಕರಾದರೂ, ಅವರು ಇತರರಿಗೆ ನೀಡುವ ಗೌರವ ಎಂದಿಗೂ ಬದಲಾಗುವುದಿಲ್ಲ. ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರಿಯಲ್ಲಿ ಎದ್ದು ಕೊಡೆ ಹಿಡಿದನಂತೆ ಎಂಬ ಗಾದೆ ಮಾತನ್ನು ನೀವು ಕೇಳಿರಬಹುದು. ಇಂದು ಕೈತುಂಬ ಹಣ ಇದ್ರೆ ಸಾಕು ಜೊತೆಗಿರುವವರನ್ನು ದೂರ ಮಾಡಿಬಿಡುತ್ತಾರೆ. ಆದರೆ, ಕೆಲವು ರಾಶಿಯವರ ಗುಣ ಹೇಗಿರುತ್ತದೆ ಅಂದ್ರೆ ಎಷ್ಟೇ ಸಂಪತ್ತು ಬಂದರು ಕೂಡ ಬಂದ ಹಾದಿಯನ್ನು ಅವರು ಮರೆಯುವುದಿಲ್ಲ.
ಹಾಗಾದರೆ, ಅಂತಹ ಸುವರ್ಣ ಗುಣಗಳನ್ನು ಹೊಂದಿರುವ ರಾಶಿಚಕ್ರ ಚಿಹ್ನೆಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ವೃಷಭ

ಲೌಕಿಕ ಸುಖಗಳ ಅಧಿಪತಿ ಶುಕ್ರನ ಆಳ್ವಿಕೆಯಲ್ಲಿ ಜನಿಸಿದ ವೃಷಭ ರಾಶಿಯವರು ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಸತ್ಯ ಮತ್ತು ಪ್ರಾಮಾಣಿಕತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಗುಣವನ್ನು ಹೊಂದಿರುತ್ತಾರೆ. ಅವರಿಗೆ ಜೀವನದಲ್ಲಿ ಯಶಸ್ಸು ಮತ್ತು ಸಂಪತ್ತಿನ ಕೊರತೆ ಎಂದಿಗೂ ಇರುವುದಿಲ್ಲ. ಆದಾಗ್ಯೂ, ಅವರು ಯಾವಾಗಲೂ ಇತರರ ಬಗ್ಗೆ ತುಂಬಾ ಸಭ್ಯ ಮತ್ತು ಪ್ರೀತಿಯಿಂದ ವರ್ತಿಸುವ ಗುಣವನ್ನು ಹೊಂದಿರುತ್ತಾರೆ.

ತುಲಾ ರಾಶಿ

ಮೋಡಿ ಮತ್ತು ವಾತ್ಸಲ್ಯ ಗ್ರಹವಾದ ಶುಕ್ರನಿಂದ ಆಳಲ್ಪಡುವ ತುಲಾ ರಾಶಿಯವರು ಯಾವುದೇ ಸಂದರ್ಭದಲ್ಲೂ ಸಂಬಂಧಗಳನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂಬ ದೃಢನಿಶ್ಚಯ ಹೊಂದಿದ್ದಾರೆ. ಸಂತೋಷದಲ್ಲಾಗಲಿ ಅಥವಾ ದುಃಖದಲ್ಲಾಗಲಿ, ಅವರು ಇತರರಿಗೆ ನೀಡುವ ಪ್ರೀತಿ ಮತ್ತು ಗೌರವ ಎಂದಿಗೂ ಬದಲಾಗುವುದಿಲ್ಲ. ಅವರು ತಮ್ಮ ರಾಜತಾಂತ್ರಿಕ ವಿಧಾನದಿಂದ ಇತರರನ್ನು ಗೆಲ್ಲುತ್ತಾರೆ.

ಮಕರ ರಾಶಿ

ಕರ್ಮ, ನಿಯಂತ್ರಣ ಮತ್ತು ದೀರ್ಘಕಾಲೀನ ಯಶಸ್ಸಿನ ಗ್ರಹವಾದ ಶನಿಯು ಮಕರ ರಾಶಿಯನ್ನು ಆಳುತ್ತಾನೆ. ಆದ್ದರಿಂದ, ಅವರು ಸಾಮಾನ್ಯವಾಗಿ ಪ್ರಾಮಾಣಿಕರು ಹಾಗೂ ತಾಳ್ಮೆಯುಳ್ಳವರು. ಸವಾಲುಗಳ ಹೊರತಾಗಿಯೂ ಅವರು ಮತ್ತೆ ಎದ್ದು ನಿಲ್ಲುತ್ತಾರೆ ಮತ್ತು ಮತ್ತೆ ಪ್ರಯತ್ನಿಸುತ್ತಾರೆ. ಪರಿಸ್ಥಿತಿ ಏನೇ ಇರಲಿ ಅವರು ಯಾವಾಗಲೂ ಇತರರಿಗೆ ಅರ್ಹವಾದ ಗೌರವ ಮತ್ತು ಘನತೆಯನ್ನು ನೀಡುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net