ಸೋಫಿ ಶೈನ್ ಸಾಮಾಜಿಕ ಜಾಲತಾಣದಲ್ಲಿಯೂ ಉತ್ತಮ ಫಾಲೋವರ್ಸ್ ಹೊಂದಿದ್ದಾರೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಸುಮಾರು 3.41 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಕೆಲವು ಸಮಯದಿಂದ, ಶಿಖರ್ ಧವನ್ ಜತೆಗಿನ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಲವು ಬಾರಿ ಒಟ್ಟಿಗೆ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವ ಮೂಲಕ ವದಂತಿ ಹರಡಲು ಕಾರಣವಾಗಿದ್ದರು. ಇತ್ತೀಚೆಗೆ ಶಿಖರ್, ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಘೋಷಿಸುವ ಮೂಲಕ ವದಂತಿಗೆ ತೆರೆಎಳೆದರು. ಅಂತಿಮವಾಗಿ ಈ ಜೋಡಿ ವಿವಾಹದೊಂದಿಗೆ ಒಂದಾಗಲಿದೆ. ಗಬ್ಬರ್, ಭಾರತಕ್ಕಾಗಿ 34 ಟೆಸ್ಟ್, 167 ಏಕದಿನ ಮತ್ತು 68 ಟಿ20ಐಗಳನ್ನು ಆಡಿದ್ದಾರೆ, (ಏಜೆನ್ಸೀಸ್).