ಪಂದ್ಯ ಸೋತರು ಹೃದಯ ಗೆದ್ದ ರನ್​ ಮೆಷಿನ್​: ತಮ್ಮನ್ನು ಔಟ್ ಮಾಡಿದ ಬೌಲರ್‌ಗೇ ಜೆರ್ಸಿ ಗಿಫ್ಟ್ ಕೊಟ್ಟ ಕಿಂಗ್​ ಕೊಹ್ಲಿ! Virat Kohli

Virat Kohli congratulated Kiwi pacer Matt Henry, who delivered a brilliant bowling performance, by gifting him a Team India jersey signed by himself.
ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಕಿವೀಸ್ ವೇಗಿ ಮ್ಯಾಟ್ ಹೆನ್ರಿ ಅವರಿಗೆ ತಮ್ಮ ಸಹಿಯುಳ್ಳ ಟೀಮ್ ಇಂಡಿಯಾ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿ ಅಭಿನಂದಿಸಿದ ವಿರಾಟ್ ಕೊಹ್ಲಿ.
Published on: 

ನ್ಯೂಜಿಲೆಂಡ್​: ಕ್ರಿಕೆಟ್ ಅನ್ನು ಜಂಟಲ್‌ಮನ್ ಗೇಮ್ ಎಂದು ಸುಮ್ಮನೆ ಕರೆಯುವುದಿಲ್ಲ. ಮೈದಾನದಲ್ಲಿ ಎಷ್ಟೇ ದೊಡ್ಡ ಸೋಲು ಎದುರಾದರೂ, ಎದುರಾಳಿ ಆಟಗಾರನ ಪ್ರತಿಭೆಯನ್ನು ಮನಸ್ಪೂರ್ತಿಯಾಗಿ ಮೆಚ್ಚಿಕೊಳ್ಳುವುದೇ ನಿಜವಾದ ಕ್ರೀಡಾಸ್ಫೂರ್ತಿ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಟೀಮ್​ ಇಂಡಿಯಾದ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ದೊಡ್ಡ ಗುಣದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ, ಭಾರತದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ತಮ್ಮನ್ನು ಔಟ್ ಮಾಡಿದ ಕಿವೀಸ್ ವೇಗಿ ಮ್ಯಾಟ್ ಹೆನ್ರಿ ಅವರಿಗೆ ಟೀಮ್ ಇಂಡಿಯಾ ಜೆರ್ಸಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸೋಲಿನ ನೋವಿನಲ್ಲೂ ಕೊಹ್ಲಿಯ ಹೃದಯವಂತಿಕೆ!

ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯ ಭಾರತೀಯ ಅಭಿಮಾನಿಗಳಿಗೆ ನಿಜಕ್ಕೂ ಕಹಿ ನೆನಪಾಗಿ ಉಳಿಯಿತು. ಪಂದ್ಯ ಮುಗಿದ ಬಳಿಕ ಇಡೀ ಭಾರತೀಯ ಪಾಳಯದಲ್ಲಿ ಸೋಲಿನ ನಿರಾಸೆ ಮನೆಮಾಡಿತ್ತು. ಆದರೆ, ಈ ಬೇಸರವನ್ನೆಲ್ಲಾ ಬದಿಗಿಟ್ಟ ವಿರಾಟ್ ಕೊಹ್ಲಿ, ನೇರವಾಗಿ ನ್ಯೂಜಿಲೆಂಡ್ ಬೌಲರ್ ಮ್ಯಾಟ್ ಹೆನ್ರಿ ಬಳಿ ತೆರಳಿದ್ದಾರೆ.

ತಮ್ಮ ಸಹಿಯುಳ್ಳ ಭಾರತೀಯ ತಂಡದ ಜೆರ್ಸಿಯನ್ನು ಹೆನ್ರಿ ಕೈಗಿತ್ತ ಕೊಹ್ಲಿ, ಅವರ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ಬೆನ್ನುತಟ್ಟಿ ಅಭಿನಂದಿಸಿದ್ದಾರೆ. ಫಲಿತಾಂಶ ಏನೇ ಇರಲಿ, ಎದುರಾಳಿ ಆಟಗಾರನಿಗೆ ಗೌರವ ನೀಡುವ ಕೊಹ್ಲಿಯ ಈ ನಡೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು "ಕಿಂಗ್ ಕೊಹ್ಲಿ ಯಾವಾಗಲೂ ಗ್ರೇಟ್" ಎಂದು ಕೊಂಡಾಡುತ್ತಿದ್ದಾರೆ.

Also Read
ಮೈದಾನದ ಹೊರಗೂ ವಿಶ್ವದಾಖಲೆ ಬರೆದ ಕೌರ್​: ಮೇಣದ ಪ್ರತಿಮೆಯಲ್ಲಿ ಮಿಂಚಿದ ಹರ್ಮನ್‌ಪ್ರೀತ್! Harmanpreet Kaur
Virat Kohli congratulated Kiwi pacer Matt Henry, who delivered a brilliant bowling performance, by gifting him a Team India jersey signed by himself.

ಭಾರತಕ್ಕೆ ಮರ್ಮಾಘಾತ ನೀಡಿದ ಮ್ಯಾಟ್ ಹೆನ್ರಿ!

ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದೇ ಮ್ಯಾಟ್ ಹೆನ್ರಿ. ನ್ಯೂಜಿಲೆಂಡ್ ನೀಡಿದ್ದ 334 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಕಣಕ್ಕಿಳಿದ ಭಾರತಕ್ಕೆ ಹೆನ್ರಿ ಆರಂಭದಲ್ಲೇ ಸಿಡಿಲಿನಂತೆ ಎರಗಿದ್ದರು. ಪಂದ್ಯದ ಆರಂಭಿಕ ಓವರ್‌ಗಳಲ್ಲೇ ಭಾರತದ ಘಟಾನುಘಟಿ ಬ್ಯಾಟರ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಶೂನ್ಯಕ್ಕೆ ಪೆವಿಲಿಯನ್‌ಗೆ ಅಟ್ಟುವ ಮೂಲಕ ಹೆನ್ರಿ ಭಾರತಕ್ಕೆ ಮರ್ಮಾಘಾತ ನೀಡಿದ್ದರು. ಕೇವಲ 27 ರನ್ ನೀಡಿ ಪ್ರಮುಖ 6 ವಿಕೆಟ್ ಕಬಳಿಸಿದ ಹೆನ್ರಿ, ಭಾರತದ ರನ್ ಚೇಸ್‌ಗೆ ಆರಂಭದಲ್ಲೇ ಬ್ರೇಕ್ ಹಾಕಿದ್ದರು.

ಇತಿಹಾಸದಲ್ಲೇ ಭಾರತಕ್ಕೆ ಎರಡನೇ ಅತಿ ದೊಡ್ಡ ಸೋಲು!

ಮ್ಯಾಟ್ ಹೆನ್ರಿ ಅವರ ಮಾರಕ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಬ್ಯಾಟಿಂಗ್ ಲೈನ್‌ಅಪ್ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. 334 ರನ್‌ಗಳ ಸವಾಲಿನ ಗುರಿ ಮುಂದೆ ಭಾರತ ಕೇವಲ 89 ರನ್‌ಗಳಿಗೆ ಆಲೌಟ್ ಆಗುವ ಮೂಲಕ ತೀವ್ರ ಮುಖಭಂಗ ಅನುಭವಿಸಿತು. ಇದರೊಂದಿಗೆ ನ್ಯೂಜಿಲೆಂಡ್ ತಂಡ ಬರೋಬ್ಬರಿ 244 ರನ್‌ಗಳ ಭರ್ಜರಿ ಜಯ ಸಾಧಿಸಿತು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಅನುಭವಿಸಿದ ಎರಡನೇ ಅತ್ಯಂತ ಭಾರೀ ಅಂತರದ ಸೋಲು ಇದಾಗಿದೆ, (ಏಜೆನ್ಸೀಸ್​).