ಕೊಹ್ಲಿಗಾಗಿ ಅನುಷ್ಕಾರ ಒಂದೇ ಒಂದು ಆರ್ಡರ್​ನಿಂದ ಬದಲಾಯ್ತು 18 ಲಕ್ಷ ಸಾಲದ ಸುಳಿಯಲ್ಲಿದ್ದ ಅಂಗಡಿ ಭವಿಷ್ಯ: ತಿಂಗಳಿಗೆ 2 ಕೋಟಿ ರೂ. ಗಳಿಕೆ! Anushka Sharma chole bhature order

ಜಸ್‌ಪಾಲ್ ಸಿಂಗ್ ಖಾಲ್ಸಾ ಮತ್ತು ಮಹಿಂದರ್ ಸಿಂಗ್ ಖಾಲ್ಸಾ ಹೆಸರಿನ ಸಹೋದರರಿಬ್ಬರು 2021ರ ಅಕ್ಟೋಬರ್‌ನಲ್ಲಿ ‘ದೆಹಲಿ ಸೆ’ (Delhi Se) ಎಂಬ ಸಣ್ಣ ಚೋಲೆ ಭಟೂರೆ ರೆಸ್ಟೋರೆಂಟ್ ಅನ್ನು ಮುಂಬೈನ ಚೆಂಬೂರ್‌ನಲ್ಲಿ ಆರಂಭಿಸಿದರು.
Anushka Sharma chole bhature order
ಚೆಂಬೂರ್ ಚೋಲೆ ಭಟೂರೆ ಅಂಗಡಿ ಯಶೋಗಾಥೆ
Published on: 

ಮುಂಬೈ: ಕೇವಲ ಒಂದೇ ಒಂದು ಇನ್‌ಸ್ಟಾಗ್ರಾಮ್ ಸ್ಟೋರಿ ಮತ್ತು ಬಾಲಿವುಡ್ ನಟಿ ಹಾಗೂ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ವಿರಾಟ್​ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ( Anushka Sharma chole bhature order ) ಅವರ ಒಂದೇ ಒಂದು ಸ್ಪೆಷಲ್​ ಆರ್ಡರ್‌ನಿಂದಾಗಿ ಸಾಲದ ಶೂಲದಲ್ಲಿ ಸಿಲುಕಿದ್ದ ಮುಂಬೈನಲ್ಲಿರುವ ಸಾಧಾರಣ ಚೋಲೆ ಭಟೂರೆ ಅಂಗಡಿಯೊಂದು ಇಂದು ತಿಂಗಳಿಗೆ ಬರೋಬ್ಬರಿ 2 ಕೋಟಿ ರೂ. ವಹಿವಾಟು ನಡೆಸುವ ಯಶಸ್ವಿ ಬ್ರ್ಯಾಂಡ್ ಆಗಿ ಬದಲಾಗಿರುವ ರೋಚಕ ಹಾಗೂ ಸ್ಫೂರ್ತಿದಾಯಕ ಕಥೆ ಇಲ್ಲಿದೆ.

ಜಸ್‌ಪಾಲ್ ಸಿಂಗ್ ಖಾಲ್ಸಾ ಮತ್ತು ಮಹಿಂದರ್ ಸಿಂಗ್ ಖಾಲ್ಸಾ ಹೆಸರಿನ ಸಹೋದರರಿಬ್ಬರು 2021ರ ಅಕ್ಟೋಬರ್‌ನಲ್ಲಿ ‘ದೆಹಲಿ ಸೆ’ (Delhi Se) ಎಂಬ ಸಣ್ಣ ಚೋಲೆ ಭಟೂರೆ ರೆಸ್ಟೋರೆಂಟ್ ಅನ್ನು ಮುಂಬೈನ ಚೆಂಬೂರ್‌ನಲ್ಲಿ ಆರಂಭಿಸಿದರು. ಕೇವಲ 250 ಚದರ ಅಡಿ ವಿಸ್ತೀರ್ಣ, ಮೂರು ಟೇಬಲ್‌ಗಳು ಮತ್ತು ಒಂಬತ್ತು ಆಸನಗಳೊಂದಿಗೆ ಆರಂಭವಾದ ಈ ಸಣ್ಣ ಮಳಿಗೆಯು ಆರಂಭಿಕ ಯಶಸ್ಸಿನ ಬಳಿಕ ನಷ್ಟದ ಹಾದಿ ಹಿಡಿಯಿತು.

Also Read
2026 ಸೆಪ್ಟೆಂಬರ್ 27: ಕ್ರಿಕೆಟ್ ಲೋಕದಲ್ಲಿ 'ಶತಕಗಳ ಮಹಾಪೂರ' ಸೃಷ್ಟಿಸಿದ ದಾಖಲೆಯ ಭಾನುವಾರ..! Six Centuries in One Day
Anushka Sharma chole bhature order

2022ರ ಜನವರಿಯಿಂದಲೇ ರೆಸ್ಟೋರೆಂಟ್‌ನ ವ್ಯಾಪಾರವು ತೀವ್ರವಾಗಿ ಕುಸಿಯಲಾರಂಭಿಸಿತು. 2022ರ ಸೆಪ್ಟೆಂಬರ್ ಹೊತ್ತಿಗೆ ಪರಿಸ್ಥಿತಿ ಎಷ್ಟು ಹದಗೆಟ್ಟಿತೆಂದರೆ, ಅಂಗಡಿಯು ಬರೋಬ್ಬರಿ 18 ಲಕ್ಷ ರೂಪಾಯಿಗಳಷ್ಟು ಸಾಲದ ಸುಳಿಗೆ ಸಿಲುಕಿತ್ತು. ಕೇವಲ ದಿನಸಿ ಹಾಗೂ ಬಾಡಿಗೆ ಹಣ ನೀಡಿ ಅಂಗಡಿಯನ್ನು ಶಾಶ್ವತವಾಗಿ ಮುಚ್ಚಿಬಿಡಲು ಸಹೋದರರು ನಿರ್ಧರಿಸಿದ್ದರು.

ಆದರೆ, ಸೆಪ್ಟೆಂಬರ್ 11ರಂದು ಗಣಪತಿ ವಿಸರ್ಜನೆಯ ದಿನದಂದು ಭಗವಂತನಲ್ಲಿ ಮೊರೆ ಇಟ್ಟಿದ್ದ ಇವರ ಕಷ್ಟದ ದಿನಗಳಿಗೆ ಅಚ್ಚರಿಯ ತಿರುವು ಸಿಕ್ಕಿತು. ಸೆಪ್ಟೆಂಬರ್ 13ರಂದು ಪ್ರಸಿದ್ಧ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಅಭಿಷೇಕ್ ಉಪಮನ್ಯು ಈ ಅಂಗಡಿಗೆ ಭೇಟಿ ನೀಡಿ ಚೋಲೆ ಭಟೂರೆ ಸವಿದು, ಅದರ ರುಚಿಯನ್ನು ಮೆಚ್ಚಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.

ಅಭಿಷೇಕ್ ಉಪಮನ್ಯು ಅವರ ಈ ಸಣ್ಣ ಇನ್​ಸ್ಟಾ ಸ್ಟೋರಿ ಪವಾಡವನ್ನೇ ಸೃಷ್ಟಿಸಿತು. ಸೆಪ್ಟೆಂಬರ್ 14 ಮತ್ತು 15ರ ವೇಳೆಗೆ ಅಂಗಡಿಗೆ ಗ್ರಾಹಕರ ನೂಕುನುಗ್ಗಲು ಆರಂಭವಾಯಿತು. ಉಪಮನ್ಯು ಅವರ ಪೋಸ್ಟ್ ಮುಂಬೈನಲ್ಲಿ ಅಚ್ಚರಿಯ ತಿನಿಸುಗಳನ್ನು ಹುಡುಕುತ್ತಿದ್ದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಕಣ್ಣಿಗೂ ಬಿತ್ತು.

ಒಂದು ದಿನ ಅನುಷ್ಕಾ ಶರ್ಮಾ ಅವರ ಮನೆಯಿಂದ ಜಸ್‌ಪಾಲ್ ಅವರ ಫೋನ್‌ಗೆ ಕರೆ ಬಂದು, ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಿಗಾಗಿ ಎರಡು ತಟ್ಟೆ ಚೋಲೆ ಭಟೂರೆ ಆರ್ಡರ್ ಮಾಡಲಾಯಿತು. ಅಕೌಂಟ್ ಹ್ಯಾಕ್ ಆಗಬಹುದು ಎಂಬ ಭಯದಿಂದ ಜಸ್‌ಪಾಲ್ ಆರಂಭದಲ್ಲಿ ಇದನ್ನು ಅನುಮಾನದಿಂದ ತಮಾಷೆಯ ಕಾಲ್ ಎಂದುಕೊಂಡಿದ್ದರು, ಆದರೆ ಕೊನೆಗೆ ಅದು ನಿಜವಾಗಿಯೂ ವಿರಾಟ್ ಕೊಹ್ಲಿ ಅವರ ಮನೆಯಿಂದಲೇ ಬಂದ ಫೋನ್​ ಕರೆ ಎಂದಾಗ ಜಸ್​ಪಾಲ್​ಗೆ ಅಚ್ಚರಿಯಾಗಿತ್ತು.

Also Read
ಕೂಪರ್​​​ ಕನೋಲಿ ಹಿಡಿದ ಅದ್ಭುತ ಕ್ಯಾಚ್​ಗೆ ತಲೆಬಾಗಿದ ಕ್ರೀಡಾಜಗತ್ತು: ಈ ವಿಡಿಯೋ ನೋಡಿದ್ರೆ ವಾವ್​​​ ಎನ್ನದೇ ಇರಲಾರರಿ! Cooper Connolly
Anushka Sharma chole bhature order

ಅನುಷ್ಕಾ ಶರ್ಮಾ ಅವರು ದೆಹಲಿ ಶೈಲಿಯ ಚೋಲೆ ಭಟೂರೆ ಮುಂಬೈನಲ್ಲಿ ಸಿಕ್ಕ ಖುಷಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕೂಡಲೇ, ಆ ರೆಸ್ಟೋರೆಂಟ್‌ಗೆ ಜನಸಾಗರವೇ ಹರಿದುಬಂತು. ಪರಿಸ್ಥಿತಿ ಹೇಗಿತ್ತೆಂದರೆ, ಕೇವಲ ಅರ್ಧ ಗಂಟೆಯಲ್ಲಿ ಅಂಗಡಿಯಲ್ಲಿದ್ದ ಸಾಮಗ್ರಿಗಳೆಲ್ಲ ಖಾಲಿಯಾದವು ಮತ್ತು ಜನರನ್ನು ನಿಯಂತ್ರಿಸಲು ಪೊಲೀಸರು ಕೂಡ ಸ್ಥಳಕ್ಕೆ ಬರಬೇಕಾಯಿತು.

ಈ ಅನಿರೀಕ್ಷಿತ ಯಶಸ್ಸಿನ ಬಳಿಕ ಹಿಂದೆ ತಿರುಗಿ ನೋಡದ ಈ ಉದ್ಯಮವು ಇಂದು ಮುಂಬೈ ಮತ್ತು ನವಿ ಮುಂಬೈನಲ್ಲಿ ಒಟ್ಟು ನಾಲ್ಕು ಬ್ರ್ಯಾಂಚ್‌ಗಳನ್ನು ಹೊಂದಿದೆ. ಹಿಂದೆ ಕೇವಲ 8 ಕೆ.ಜಿ ಚೋಲೆ ಬಳಸುತ್ತಿದ್ದ ಇವರು, ಇಂದು ಪ್ರತಿದಿನ ಬರೋಬ್ಬರಿ 125 ಕೆ.ಜಿ ಕಡಲೆಕಾಳುಗಳನ್ನು ಬಳಸಿ, ಮೂರು ಸಾವಿರಕ್ಕೂ ಅಧಿಕ ಪ್ಲೇಟ್‌ಗಳನ್ನು ಮಾರಾಟ ಮಾಡುತ್ತಿದ್ದು, ಮಾಸಿಕ ವಹಿವಾಟು 2 ಕೋಟಿ ರೂ. ತಲುಪಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net