RR vs GT: ಸೋಲಿನ ಬೆನ್ನಲ್ಲೇ ಕಣ್ಣೀರು ಹಾಕಿದ ವೈಭವ್ ಸೂರ್ಯವಂಶಿ; ಕ್ಯಾಮೆರಾದಲ್ಲಿ ಸೆರೆಯಾಯ್ತು ಭಾವುಕ ದೃಶ್ಯ! Vaibhav Suryavanshi
ರಾಜಸ್ಥಾನ್ ಸೋತ ಹಿನ್ನಲೆ ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಿನ್ನೆ ನಡೆದಿದ್ದ ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್ ಪಂದ್ಯ
ಗುಜರಾತ್ ಹಾಗೂ ರಾಸ್ಥಾನ್ ನಡುಬೆ ನಡೆದಿದ್ದ ಪಂದ್ಯ
ರಾಜಸ್ಥಾನ್ ಸೋತ ಹಿನ್ನಲೆ ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ
ರಾಜಸ್ಥಾನ್ ತಂಡವನ್ನು ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟ ಗುಜರಾತ್ ತಂಡ
ರವಿವಾರ ಆರ್ಸಿಬಿಯನ್ನು ಎದುರಿಸಲಿದೆ ಗುಜರಾತ್ ಟೈಟಾನ್ಸ್ ತಂಡ
ಚಂಡೀಗಢ: ಶುಕ್ರವಾರ (ಮೇ.29) ರಂದು ಪಂಜಾಬ್ನ ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ.
ಭಾನುವಾರ (ಮೇ.31) ರಂದು ಗುಜರಾತಿನ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯಾವಳಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.
ನಿನ್ನೆ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಅಮೋಘ ಪ್ರದರ್ಶನ ನೀಡಿದ್ದ ವೈಭವ್ ಸೂರ್ಯವಂಶಿ (Vaibhav Suryavanshi) ಪಂದ್ಯದ ನಂತರ ಭಾವುಕರಾದ ದೃಶ್ಯ ಕ್ಯಾಮರಾದ ಕಣ್ಣಲ್ಲಿ ಸೆರೆಯಾಗಿದೆ.
ಈ ಭಾರಿಯ ಐಪಿಎಲ್ನಲ್ಲಿ ಅತ್ಯಂತ ಹೆಚ್ಚು ಚರ್ಚೆಯಾದ ಹೆಸರೆಂದರೆ ಅದು ವೈಭವ್ ಸೂರ್ಯವಂಶಿಯದ್ದಾಗಿದೆ. ನಮ್ಮ ಅಮೋಘವಾದ ಬ್ಯಾಂಟಿಂಗ್ ಶೈಲಿ ಮೂಲಕವೇ ಬೌಲರ್ಗಳನ್ನು ಬೆಂಡೆತ್ತಿ ಕ್ರಿಕೆಟ್ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಸಹ ವೈಭವ್ ಸೂರ್ಯವಂಶಿ 47 ಎಸೆತಗಳ 96 ರನ್ಗಳಿಸುವ ಮೂಲಕ ಇನ್ನೊಮ್ಮೆ ಶತಕ ವಂಚಿತರಾದರೂ ಸಹ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ತಂಡಕ್ಕೆ ತಮ್ಮ ಸಂಪೂರ್ಣ ಕೊಡುಗೆ ನೀಡಿದರೂ ಸಹ ರಾಜಸ್ಥಾನ್ ತಂಡ ಸೋಲುಂಡಿದ ಕಾರಣ ವೈಭವ್ ಸೂರ್ಯವಂಶಿ ಕಣ್ಣೀರಿಟ್ಟಿದ್ದಾರೆ.
ಗುಜರಾತ್ V/s ರಾಜಸ್ಥಾನ್
ಶುಕ್ರವಾರ (ಮೇ.29) ಪಂಜಾಬ್ನಲ್ಲಿ ನಡೆದ ಎರಡನೇ ಕ್ವಾಲಿಫೈಯರ್ನಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಎದುರಾಗಿದ್ದವು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಆರ್ ಪರವಾಗಿ ಓಪನರ್ ವೈಭವ್ ಸೂರ್ಯವಂಶಿ 47 ಎಸೆತಗಳಲ್ಲಿ 96 ರನ್ಗಳಿಸಿದರೆ ರವೀಂದ್ರ ಜಡೇಜಾ 35 ಎಸೆತಗಳಲ್ಲಿ 45 ರನ್ ಬಾರಿಸಿದರು. ಕೊನೆಯ ಓವರ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ ಡೊನೊವನ್ ಫೆರೀರಾ (11 ಎಸೆತ 38 ರನ್) ಸಹಾಯದಿಂದ ರಾಜಸ್ಥಾನ್ ತಂಡ 20 ಓವರ್ಗಳಲ್ಲಿ 214 ರನ್ ಪೇರಿಸಿತು.
215 ರನ್ ಗುರಿಯನ್ನು ಬೆನ್ನತ್ತಿದ್ದ ಗುಜರಾತ್ ತಂಡದ ಪರವಾಗಿ ಓಪನರ್ಗಳಾದ ಸಾಯಿ ಸುದರ್ಶನ್ 32 ಎಸೆತಗಳಲ್ಲಿ 58 ರನ್ ಗಳಿಸಿದೆ ನಾಯಕ ಶುಭಮನ್ ಗಿಲ್ 53 ಎಸೆತಗಳಲ್ಲಿ 104 ರನ್ಗಳ ಶತಕದಾಟದ ಸಹಾಯದಿಂದ 18.4 ಓವರ್ಗಳಲ್ಲಿ ಗುರಿಯನ್ನು ತಲುಪಿ ಫೈನಲ್ ಪ್ರವೇಶಿಸಿತು, (ಏಜನ್ಸೀಸ್).