14 ಪಂದ್ಯಗಳಲ್ಲಿ 10 ಸೋಲು, ಅಂಕಪಟ್ಟಿಯಲ್ಲಿ ಕೊನೆ ಸ್ಥಾನ: ಐಪಿಎಲ್​ನಲ್ಲಿ ಕಳಪೆ ಪ್ರದರ್ಶನ; LSG ನಾಯಕ ಸ್ಥಾನದಿಂದ ರಿಷಭ್ ಪಂತ್ ಔಟ್​! Rishabh Pant step down LSG Captaincy

ಲಖನೌ ನಾಯಕತ್ವದಿಂದ ಕೆಳಗಿಳಿದ ರಿಷಭ್​ ಪಂತ್​​
ಲಖನೌ ನಾಯಕತ್ವದಿಂದ ಕೆಳಗಿಳಿದ ರಿಷಭ್​ ಪಂತ್​​
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ 2026 ರಲ್ಲಿ ತಂಡದ ಕಳಪೆ ಪ್ರದರ್ಶನ
  • ಲಖನೌ ನಾಯಕತ್ವದಿಂದ ಕೆಳಗಿಳಿದ ರಿಷಭ್​ ಪಂತ್​​
  • ಸೋಷಿಯಲ್​ ಮೀಡಿಯಾನಲ್ಲಿ ಪೋಸ್ಟ್ ಮಾಡಿದ ಎಲ್​ಎಸ್​ಜಿ ಫ್ರಾಂಚೈಸಿ!
ಲಖನೌ: ಈ ಭಾರಿಯ ಐಪಿಎಲ್​ನಲ್ಲಿ ಅತ್ಯಂತ ನಿರಾಶಾದಾಯಕ ಪ್ರದರ್ಶನ ನೀಡಿದ ಹಿನ್ನಲೆ ಲಖನೌ ಸೂಪರ್​ ಜೈಂಟ್ಸ್​ ತಂಡದ ನಾಯಕ ಸ್ಥಾನದಿಂದ ರಿಷಭ್ ಪಂತ್ ಕೆಳಗಿಳಿಯಲಿದ್ದಾರೆ (Rishabh Pant step down LSG Captaincy) ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆಲ ದಿನಗಳಿಂದ ಇದೊಂದು ಗಾಳಿ ಸುದ್ದಿ ಎಂದು ಪರಿಗಣಿಸಲಾಗಿತ್ತು, ಆದರೆ ಶುಕ್ರವಾರ (ಮೇ.29) ಲಖನೌ ಸೂಪರ್​ ಜೈಂಟ್ಸ್ ತಂಡ ತನ್ನ ಎಕ್ಸ್​​ (ಟ್ವಿಟರ್​) ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.

ಪೋಸ್ಟ್​ನಲ್ಲೇನಿದೆ?

ರಿಷಭ್ ​ ಪಂತ್ ತಮ್ಮನ್ನು ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕತ್ವದಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಫ್ರಾಂಚೈಸಿ ಬಳಿ ವಿನಂತಿಸಿ ಕೊಂಡಿದ್ದು, ಫ್ರಾಂಚೈಸಿ ಈ ವಿನಂತಿಯನ್ನು ಸಮ್ಮತಿಸಿದೆ ಎಂದು ಎಕ್ಸ್​ನಲ್ಲಿ ಪೋಸ್ಟ್​ ಮಾಡಲಾಗಿದೆ.
2025 ರ ಮೆಘಾ ಆಕ್ಷನ್​ನಲ್ಲಿ ರಿಷಬ್​ ಪಂತ್​ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಬರೊಬ್ಬರಿ 27 ಕೋಟಿ ರೂಪಾಯಿಗೆ ಮಾರಾಟವಾಗಿದ್ದರು. ಆದರೆ ಈ ಭಾರಿಯ ಐಪಿಎಲ್​ನಲ್ಲಿ ಲಖನೌ ತಂಡ ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ತಲುಪಿರುವ ಕಾರಣ ಈ ನಿರ್ಧಾರಕ್ಕೆ ರಿಷಬ್​ ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.
ರಿಷಭ್​ ತಮ್ಮ ನಿರ್ಧಾರವನ್ನು ತಿಳಿಸಿದಾಗ ಆ ಕುರಿತು ಪ್ರತಿಕ್ರಿಯಿಸುವುದು ನಮಗೆ ಸುಲಭವಾಗಿರಲಿಲ್ಲ. ಆದರೆ ನಾವು ಅವರ ಮನವಿಯನ್ನು ಗೌರವ ಪೂರಕವಾಗಿ ಸ್ವೀಕರಿಸಿದ್ದವೆ. ಡ್ರೆಸಿಂಗ್​ ರೂಮ್​ಗೆ ರಿಷಭ್​ ತಂದಿರುವ ಖುಷಿ-ದುಃಖವನ್ನು ನಾವು ಸಮಾನವಾಗಿ ಸ್ವೀಕರಿಸಿದ್ದೆವೆ ಎಂದು ಲಖನೌ ತಂಡ ಬರೆದುಕೊಂಡಿದೆ.

2026 ರ ಐಪಿಎಲ್​ನಲ್ಲಿ ಎಲ್​ಎಸ್​ಜಿ!

ಈ ಭಾರಿಯ ಐಪಿಎಲ್​ನಲ್ಲಿ ಲಖನೌ ಸೂಪರ್​ ಜೈಂಟ್ಸ್​ ತಂಡ ನಿರಾಶಾದಾಯಕ ಪ್ರದರ್ಶನ ನೀಡಿದೆ ಎಂದರೆ ಸುಳ್ಳಲ್ಲ. ಆಡಿರುವ 14 ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಸೋಲನ್ನು ಕಂಡು ಕೇವಲ 4 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿ 8 ಅಂಕಗಳೊಂದಿಗೆ ಲಖನೌ ಹತ್ತನೇ ಸ್ಥಾನವನ್ನು ಪಡೆಯುವ ಮೂಲಕ ಈ ಸೀಸನ್​ನ್ನು ಮುಗಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net