ರೈಲು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ! ಶೌಚಾಲಯದ ನೀರಿನಲ್ಲಿ ಪಾತ್ರೆ ತೊಳೆದ IRCTC ಸಿಬ್ಬಂದಿ; ವಿಡಿಯೋ ವೈರಲ್​!Viral Video

ರೈಲಿನ ಶೌಚಾಲಯದ ನೀರಿನಲ್ಲೇ ಊಟದ ಪಾತ್ರೆ ತೊಳೆಯುತ್ತಿದ್ದ IRCTC ಸಿಬ್ಬಂದಿ
ರೈಲಿನ ಶೌಚಾಲಯದ ನೀರಿನಲ್ಲೇ ಊಟದ ಪಾತ್ರೆ ತೊಳೆಯುತ್ತಿದ್ದ IRCTC ಸಿಬ್ಬಂದಿ
Published on

ಪ್ರಮುಖ ಮುಖ್ಯಾಂಶಗಳು

  • ರೈಲಿನಲ್ಲಿ ಊಟ ಆರ್ಡರ್ ಮಾಡುವ ಮುನ್ನ ಈ ವಿಡಿಯೋ ನೋಡಿ!
  • ರೈಲಿನ ಶೌಚಾಲಯದ ನೀರಿನಲ್ಲೇ ಊಟದ ಪಾತ್ರೆ ತೊಳೆಯುತ್ತಿದ್ದ IRCTC ಸಿಬ್ಬಂದಿ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​!
ವೈರಲ್​: ದಿನನಿತ್ಯ ಲಕ್ಷಾಂತರ ಜನ ಭಾರತೀಯರು ಸಾರಿಗೆ ಸೌಕರ್ಯ ಮೂಲವಾಗಿ ಭಾರತೀಯ ರೈಲಿನ ಮೇಲೆ ಅವಲಂಬಿತರಾಗಿದ್ದಾರೆ. ಹಾಗೆಯೇ IRCTC ಸಹ ಗುಣಮಟ್ಟದ ಪ್ರಯಾಣದ ಜೊತೆಗೆ ಶುಚಿ-ರುಚಿಯಾದ ಆಹಾರವನ್ನು ವದಗಿಸುವುದಾಗಿ ಹೇಳಿಕೊಳ್ಳುತ್ತದೆ.
ಆದರೆ ಇತ್ತೀಚೆಗೆ IRCTC ಸಿಬ್ಬಂದಿಯೊಬ್ಬ ರೈನಿನಲ್ಲಿ ಊಟಕ್ಕೆಂದು ನೀಡುವ ಪಾತ್ರೆಗಳನ್ನು ಶೌಚಾಲಯದ ನೀರಿನಲ್ಲಿ ತೊಳೆಯುತ್ತಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಭಾರಿ ಸಂಚಲನ (Viral Video) ಕ್ಕೆ ಕಾರಣವಾಗಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋನಲ್ಲಿ IRCTC ಸಿಬ್ಬಂದಿಯೊಬ್ಬ ರೈಲಿನ ಶೌಚಾಲಯದ ಒಳೆಗೆ ಕುಳಿತುಕೊಂಡು ಪಾತ್ರೆಗಳನ್ನು ತೊಳೆಯುತ್ತಿರುವುದನ್ನು ವಿಡಿಯೋನಲ್ಲಿ ಕಾಣಬಹುದು.
ನಂತರ ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಶೌಚಾಲಯದಲ್ಲಿ ಕುಳಿತಿರುವ ವಿಡಿಯೋ ಮಾಡುತ್ತಿದ್ದರೂ ಆತ ಕ್ಯಾರೆ ಎನ್ನದೆ ತನ್ನ ಕೆಲಸದಲ್ಲಿ ತಾನು ನಿರತನಾಗಿದ್ದಾನೆ. ಆಮೇಲೆ ವಿಡಿಯೋ ಮಾಡುವ ವ್ಯಕ್ತಿ ನಿನ್ನ ಹೆಸರೇನೆಂದು ಕೇಳಿದಾಗ ಸುರೇಶ್​ ಎಂದು ಉತ್ತರಿಸಿದ್ದಾನೆ.
ಅವನ ಪಕ್ಕದಲ್ಲೇ ನಿಂತಿದ್ದ ರೈಲ್ವೆ ಮೇಲ್ವಿಚಾರಕನ ಬಳಿ ನಿಮಗೆ ಇದರ ಬಗ್ಗೆ ತಿಳಿದಿದ್ದವೇ? ಎಂದು ಪ್ರಶ್ನಿಸಿದಾಗ, ನಾನು ಕೂಡ ಇವತ್ತೇ ಇದನ್ನು ನೋಡಿದ್ದು ಎಂದು ಹೇಳಿದ್ದಾನೆ. ಆಗ ಕುಪಿತನಾದ ವ್ಯಕ್ತಿ, ನಿಮ್ಮ ಸಿಬ್ಬಂದಿ ಪ್ರಯಾಣಿಕರಿಗೆ ಊಟಕ್ಕೆ ನೀಡುವ ಪಾತ್ರೆಗಳನ್ನು ಶೌಚಾಲಯದ ನೀರಿನಲ್ಲಿ ತೊಳೆಯುತ್ತಿದ್ದಾನೆ, ನೀವು ಈ ರೀತಿ ಮಾತನಾಡುತ್ತಿರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರ ಪಿತ್ತ ನೆತ್ತಿಗೇರಿದೆ. ಅದಕ್ಕೆ ನಾನು ರೈಲ್ವೆಯಲ್ಲಿ ಪ್ರಯಾಣ ಮಾಡುವಾಗ ಏನನ್ನು ತಿನ್ನಲು ಹೋಗುವುದೇ ಇಲ್ಲ ಎಂದು ಒಬ್ಬ ಬಳಕೆದಾರರು ಕಮೆಂಟ್​ ಮಾಡಿದ್ದಾರೆ.
ಆ ಸಿಬ್ಬಂದಿಯನ್ನು ಕೂಡಲೇ ಕೆಲಸದಿಂದ ಅಮಾನತ್​​ ಮಾಡಬೇಕು, ಹೀಗೆ ಪ್ರಯಾಣಿಕರ ಜೀವನದ ಜೊತೆ ಆಟವಾಡುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೈಲ್ವೆಗಳಲ್ಲಿ ಈ ರೀತಿಯ ಘಟನೆಗಳು ಪದೆ-ಪದೆ ನಡೆಯುತ್ತಿದೆ, ಸರ್ಕಾರ ಈ ಕುರಿತು ಏನಾದರೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮತ್ತೊಬ್ಬರು ಒತ್ತಾಯಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net