ಒಂದೆಡೆ ವೈಯಕ್ತಿಕ ಜೀವನದ ಕಾನೂನು ಸಮರ ನಡೆಯುತ್ತಿದ್ದರೆ, ಇನ್ನೊಂದೆಡೆ ಕ್ರಿಕೆಟ್ ವೃತ್ತಿಜೀವನದಲ್ಲಿ ಯಶ್ ದಯಾಳ್ ಆರ್.ಸಿ.ಬಿ (RCB) ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. 2023 ರಲ್ಲಿ ರಿಂಕು ಸಿಂಗ್ ಅವರಿಂದ ಐದು ಸಿಕ್ಸರ್ಗಳನ್ನು ಹೊಡೆಸಿಕೊಂಡಾಗ ದಯಾಳ್ ಅವರ ವೃತ್ತಿಜೀವನ ಅಂತ್ಯವಾಯಿತು ಎಂದೇ ಭಾವಿಸಲಾಗಿತ್ತು. ಆದರೆ, ಆ ಬಳಿಕ ಆರ್.ಸಿ.ಬಿ ಸೇರಿ ಅದ್ಭುತವಾಗಿ ಪುಟಿದೆದ್ದ ಅವರು, ಕಳೆದ ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದರು. 2026 ರ ಐಪಿಎಲ್ ಸೀಸನ್ನಲ್ಲೂ ಅವರು ಆರ್.ಸಿ.ಬಿ ಪರ ಆಡಲು ಸಜ್ಜಾಗಿದ್ದಾರೆ,(ಏಜನ್ಸೀಸ್).