ಗಂಭೀರ್ ಹೇಳಿದ್ದೇ ಸರಿ... ಸರಣಿ ಗೆದ್ರೂ ಟೀಮ್ ಇಂಡಿಯಾ ವಿಚಾರದಲ್ಲಿ ಕೋಚ್ ಮಾತಿಗೆ​ ತಲೆದೂಗಿದ ರವಿಶಾಸ್ತ್ರಿ | Gautam Gambhir

Gautam Gambhir
ಗಂಭೀರ್ ಹೇಳಿದ್ದೇ ಸರಿ... ಸರಣಿ ಗೆದ್ರೂ ಟೀಮ್ ಇಂಡಿಯಾ ವಿಚಾರದಲ್ಲಿ ಕೋಚ್ ಮಾತಿಗೆ​ ತಲೆದೂಗಿದ ರವಿಶಾಸ್ತ್ರಿ | Gautam Gambhir
Published on: 

ನವದೆಹಲಿ: ಮೊನ್ನೆಯಷ್ಟೇ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 3-1 ಅಂತರದಲ್ಲಿ ಟೀಮ್ ಇಂಡಿಯಾ ಗೆಲುವನ್ನು ಸಾಧಿಸಿತು. ಇದರೊಟ್ಟಿಗೆ, ಟಿ20 ಸರಣಿಯನ್ನು ಗೆದ್ದಿರುವ ಭಾರತಕ್ಕೆ ಮಾಜಿ ಕ್ರಿಕೆಟಿಗರು ಮೆಚ್ಚಿ ಮಾತನಾಡಿದರು. ಆದರೆ, ಹೆಡ್​ ಕೋಚ್​ ಗೌತಮ್ ಗಂಭೀರ್​ ಮಾತ್ರ ಟೀಮ್ ಇಂಡಿಯಾದ ಬ್ಯಾಟಿಂಗ್ ಬಲದ ಬಗ್ಗೆ ಹೇಳಿದ ಮಾತು ಸದ್ಯ ಕ್ರಿಕೆಟ್​ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನಾಲ್ಕನೇ ಏಕದಿನ ಪಂದ್ಯದಲ್ಲಿ ಕೇವಲ 89 ರನ್‌ಗೆ ಆಲೌಟ್ ಆಗಿ ಭಾರೀ ಮುಖಭಂಗ ಅನುಭವಿಸಿದ್ದ ಭಾರತ, ಐದನೇ ಪಂದ್ಯದಲ್ಲಿ ಗೆದ್ದು ಸರಣಿಯನ್ನು 3-1 ಅಂತರದಲ್ಲಿ ತನ್ನದಾಗಿಸಿಕೊಂಡಿತು. ಆದರೆ, ಈ ಗೆಲುವಿನ ನಡುವೆಯೂ ಭಾರತದ ಬ್ಯಾಟಿಂಗ್ ದೌರ್ಬಲ್ಯದ ಬಗ್ಗೆ ಚರ್ಚೆ ಮುಂದುವರಿದಿದೆ. ಬ್ಯಾಟರ್​ಗಳ ವೈಫಲ್ಯತೆಯನ್ನು ಎತ್ತಿಹಿಡಿದ ಗಂಭೀರ್ ಮಾತಿಗೆ ಇದೀಗ ಮಾಜಿ ಕೋಚ್ ರವಿಶಾಸ್ತ್ರಿ ಕೂಡ ತಲೆದೂಗಿದ್ದಾರೆ.

ಬ್ಯಾಟರ್​ಗಳ ವೈಫಲ್ಯ

ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಸ್ವಿಂಗ್ ಮತ್ತು ಸೀಮ್‌ಗೆ ಹೇಳಿ ಮಾಡಿಸಿದ್ದ ಪಿಚ್‌ನಲ್ಲಿ ಭಾರತದ ಬ್ಯಾಟರ್‌ಗಳು ನ್ಯೂಜಿಲೆಂಡ್ ಬೌಲರ್‌ಗಳ ಎದುರು ಹೆಣಗಾಡಿದರು. ಪರಿಣಾಮ, ತಂಡ ಕೇವಲ 89 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು. ಐದನೇ ಪಂದ್ಯದಲ್ಲೂ ಬ್ಯಾಟಿಂಗ್‌ನಲ್ಲಿ ಭಾರತ ದೊಡ್ಡ ಮೊತ್ತ ಗಳಿಸಲು ವಿಫಲವಾಯಿತು. ತಂಡ 209 ರನ್‌ಗಳನ್ನು ಮಾತ್ರ ಕಲೆಹಾಕಿತ್ತು. ಬೌಲರ್‌ಗಳ ಅದ್ಭುತ ಪ್ರದರ್ಶನದಿಂದ ತಂಡವು 22 ರನ್‌ಗಳ ಗೆಲುವು ಸಾಧಿಸಿತು ಎಂದು ಗೌತಿ ಹೇಳಿದರು.

ಗಂಭೀರ್ ಹೇಳಿದ್ದೇ ಸರಿ!

ಐದನೇ ಪಂದ್ಯ ಮುಗಿದ ಬಳಿಕ ಮಾತನಾಡಿದ ರವಿಶಾಸ್ತ್ರಿ, "ಗೌತಮ್ ಗಂಭೀರ್ ಹೇಳಿದ್ದೇ ಸರಿ. ನ್ಯೂಜಿಲೆಂಡ್‌ನಲ್ಲಿರುವ ಪರಿಸ್ಥಿತಿಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಎದುರಾಗಬಹುದಾದ ಪರಿಸ್ಥಿತಿಗಳಿಗೆ ಹತ್ತಿರವಾಗಿವೆ. ಇಂತಹ ಸಂದರ್ಭಗಳಲ್ಲಿ ಬ್ಯಾಟರ್‌ಗಳಿಂದ ಇನ್ನಷ್ಟು ಉತ್ತಮ ಪ್ರದರ್ಶನ ನಿರೀಕ್ಷೆ ಮಾಡಲಾಗುತ್ತೆ. ಬ್ಯಾಟಿಂಗ್‌ನಲ್ಲಿ ತಾಳ್ಮೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಆಡುವ ಸಾಮರ್ಥ್ಯ ಇರಬೇಕು" ಎಂದರು.

ಎಲ್ಲಾ ಪಂದ್ಯಗಳಲ್ಲೂ 300ರಿಂದ 320 ರನ್ ಗಳಿಸುವ ಗುರಿ ಇಟ್ಟುಕೊಳ್ಳುವುದು ಸರಿಯಲ್ಲ. ಕೆಲವು ಪಿಚ್‌ಗಳಲ್ಲಿ 260ರಿಂದ 270 ರನ್‌ಗಳ ಮೊತ್ತವೂ ಗೆಲುವು ತಂದುಕೊಡಬಹುದು. ಬೌಲರ್‌ಗಳಿಗೆ ನೆರವಾಗುವ ಪರಿಸ್ಥಿತಿಗಳಲ್ಲಿ ಬ್ಯಾಟರ್‌ಗಳು ಸ್ವಲ್ಪ ಸಮಯ ಕ್ರೀಸ್‌ನಲ್ಲಿ ನಿಂತು ಎದುರಾಳಿ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಬೇಕು ಎಂದು ಕಿವಿಮಾತು ನೀಡಿದರು.

Also Read
ಏರ್‌ಪೋರ್ಟ್‌ಗೆ ಬಂದಿಳಿದ ಪತಿ ಸ್ವಾಗತಿಸಲು ಬಂದಿದ್ದು ಮೂವರು ಪತ್ನಿಯರು! ಮೂವರ ಹೆಂಡಿರ ಮುದ್ದಿನ ಗಂಡನ ಪಾಡು... | Three wives
Gautam Gambhir

ಅಷ್ಟಕ್ಕೂ ಗಂಭೀರ್ ಹೇಳಿದ್ದೇನು?

"ನಾವು 90 ರನ್‌ಗಳ ಆಸುಪಾಸಿನಲ್ಲಿ ಆಲೌಟ್ ಆದಾಗ ಕಳವಳವಾಗುವುದು ಸಹಜ. ಇದೇ ಪರಿಸ್ಥಿತಿ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಎದುರಾಗಬಹುದಾದ ಪರಿಸ್ಥಿತಿಗಳಿಗೆ ಹತ್ತಿರವಾಗಿವೆ. ಹೀಗಾಗಿ ಮಾನಸಿಕವಾಗಿ ಮಾತ್ರವಲ್ಲ, ಟೆಕ್ನಿಕಲ್ ಆಗಿಯೂ​ ನಾವು ಸಿದ್ಧರಿರಬೇಕು" ಎಂದಿದ್ದರು.

ತಂಡದಲ್ಲಿನ ದೊಡ್ಡ ಸಮಸ್ಯೆ ಕಡಿಮೆ ರನ್ ಗಳಿಸಿರುವುದಷ್ಟೇ ಅಲ್ಲ. ಅಲ್ಪ ಸಮಯದಲ್ಲೇ ಹೆಚ್ಚು ವಿಕೆಟ್ ಕಳೆದುಕೊಂಡಿರುವುದು. ನಾಲ್ಕನೇ ಪಂದ್ಯದಲ್ಲಿ ಭಾರತ ಸುಮಾರು 26ರಿಂದ 27 ಓವರ್‌ಗಳಲ್ಲೇ ಆಲೌಟ್ ಆಯಿತು. ಹಿಂದಿನ ಪಂದ್ಯದಲ್ಲೂ 111 ರನ್‌ಗೆ ಏಳು ವಿಕೆಟ್ ಕಳೆದುಕೊಂಡಿದ್ದನ್ನು ಗಂಭೀರ್ ನೆನಪಿಸಿ, ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳ ಬ್ಯಾಟಿಂಗ್ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು,(ಏಜೆನ್ಸೀಸ್).