ಏರ್‌ಪೋರ್ಟ್‌ಗೆ ಬಂದಿಳಿದ ಪತಿ ಸ್ವಾಗತಿಸಲು ಬಂದಿದ್ದು ಮೂವರು ಪತ್ನಿಯರು! ಮೂವರ ಹೆಂಡಿರ ಮುದ್ದಿನ ಗಂಡನ ಪಾಡು... | Three wives

 Three wives
ಏರ್‌ಪೋರ್ಟ್‌ಗೆ ಬಂದಿಳಿದ ಪತಿ ಸ್ವಾಗತಿಸಲು ಬಂದಿದ್ದು ಮೂವರು ಪತ್ನಿಯರು! ಮೂವರ ಹೆಂಡಿರ ಮುದ್ದಿನ ಗಂಡನ ಪಾಡು... | Three wives
Published on: 

ಢಾಕಾ: ಮಲೇಷ್ಯಾದಿಂದ ತವರಿಗೆ ವಾಪಾಸ್​ ಆದ ವ್ಯಕ್ತಿಯನ್ನು ಮನೆಗೆ ಕರೆದೊಯ್ಯಲು ಏರ್​ಪೋರ್ಟ್​ಗೆ ಬಂದ ಮೂವರು ಮಹಿಳೆಯರು, ಅವನು ನನ್ನ ಗಂಡ ಎಂದು ಹೇಳಿ, ಪರಸ್ಪರ ಕಿತ್ತಾಡಿಕೊಳ್ಳುವ ಮೂಲಕ ಸೃಷ್ಟಿಸಿದ ಹೈಡ್ರಾಮಾ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಪತಿಯನ್ನು ಸ್ವಾಗತಿಸಲು ಮೂವರು ಮಹಿಳೆಯರು ಒಂದೇ ಸಮಯದಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಲ್ಲದೇ, ತಮ್ಮ ಗಂಡನನ್ನು ಇನ್ನೊಬ್ಬರು ಹಂಚಿಕೊಂಡಿದ್ದಾರೆ ಎಂಬ ವಿಷಯ ತಿಳಿದು ಭಾರಿ ಶಾಕ್​ಗೆ ಒಳಗಾಗಿದ್ದಾರೆ. ಪತಿಗೆ ನೀವು ಯಾರ ಜತೆ ಹೋಗ್ತೀರಿ? ಎಂದು ಪ್ರಶ್ನಿಸಿದ ಪತ್ನಿಯರು, ಇದೇ ವಿಚಾರಕ್ಕೆ ಜೋರು ಜೋರಾಗಿ ಮಾತಿನ ಚಕಮಕಿ ನಡೆಸಿದ್ದಾರೆ.

ಮೂವರ ನಡುವಿನ ಮಾತು ತಾರಕಕ್ಕೇರಿದ ಬೆನ್ನಲ್ಲೇ ಮಹಿಳೆಯರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಬಾಂಗ್ಲಾದೇಶದ ಢಾಕಾ ಏರ್​ಪೋರ್ಟ್​ನಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಷ್ಟಕ್ಕೂ ಆ ಮೂವರು ಮಹಿಳೆಯರು ಅವನ ಹೆಂಡತಿಯರೇನಾ ಎಂಬ ಪ್ರಶ್ನೆಗಳು ಕೇಳಿಬಂದಿವೆ. ಕಾರಣ, ಒಬ್ಬರನ್ನು ಬಿಟ್ಟರೆ ಇನ್ನಿಬ್ಬರು ತನಗೆ ಗೊತ್ತಿಲ್ಲ ಎನ್ನುವಂತೆ ಆತ ವರ್ತಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

Also Read
ಬಾಟಲಿ ಮೇಲೆ ನೀವಿದನ್ನು ಗಮನಿಸಿದ್ದೀರಾ? ಶುದ್ಧ ನೀರೆಂದ ಮೇಲೂ ಎಕ್ಸ್ಪೈರಿ ಡೇಟ್ ಹಾಕುವುದೇಕೆ ಗೊತ್ತಿದ್ಯಾ? ಇಲ್ಲಿದೆ ಉತ್ತರ | Water Bottle
 Three wives

ಬಾಂಗ್ಲಾದೇಶದ ರಾಜಧಾನಿ ಢಾಕಾದ ಹಜರತ್ ಶಾಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್ 10ರಂದು ಈ ಘಟನೆ ನಡೆದಿದ್ದು, ಮಲೇಷ್ಯಾದಿಂದ ಮನೆಗೆ ಮರಳುತ್ತಿದ್ದ ವ್ಯಕ್ತಿಯನ್ನು ಸ್ವಾಗತಿಸಲು ಆತನ ಮೂವರು ಪತ್ನಿಯರು ಒಂದೇ ಸಮಯದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು ಎನ್ನಲಾಗಿದೆ.

ಈ ವೇಳೆ ಮಹಿಳೆಯೊಬ್ಬರು ಆತನ ಕೈ ಹಿಡಿದುಕೊಂಡೇ ಅಳುತ್ತಿರುವ ದೃಶ್ಯವೂ ಸೆರೆಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಜನರು ಜಮಾಯಿಸಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).