ಐಸಿಸಿ ರಿವ್ಯೂನ ಇತ್ತೀಚಿನ ಎಪಿಸೋಡ್ನಲ್ಲಿ ಮಾತನಾಡಿರುವ ರವಿಶಾಸ್ತ್ರಿ, ಅಭಿಷೇಕ್ ಅವರು ಮಾನಸಿಕವಾಗಿ ತೊಂದರೆಗೀಡಾಗಿರುವಂತೆ ಕಾಣುತ್ತಿದ್ದಾರೆ. ಹೇಳಬೇಕೆಂದರೆ, ಅವರಿನ್ನೂ ಸೆಮಿಫೈನಲ್ ಪಂದ್ಯಕ್ಕೆ ಸಿದ್ಧವಾಗಿಲ್ಲ. ಸಾಧ್ಯವಾದರೆ, ಅಭಿಷೇಕ್ ಶರ್ಮಾರನ್ನು ಕೂರಿಸಿ, ಮತ್ತೊಬ್ಬ ಆರಂಭಿಕ ಆಟಗಾರನನ್ನು ಆಯ್ಕೆ ಮಾಡಿಕೊಳ್ಳುವಂತೆ ರವಿಶಾಸ್ತ್ರಿ ಸಲಹೆಗಳನ್ನು ನೀಡಿದ್ದಾರೆ. ಇಲ್ಲದಿದ್ದರೆ, ಟೀಮ್ ಇಂಡಿಯಾ ದೊಡ್ಡ ಅಪಾಯದಲ್ಲಿ ಸಿಲುಕುತ್ತದೆ ಎಂದು ಎಚ್ಚರಿಸಿದ್ದಾರೆ.