ಈ ಆರ್​ಸಿಬಿ ಆಟಗಾರನಿಗೆ ಕೊಡಿ ಚಾನ್ಸ್​! 2027ರ ಏಕದಿನ ವಿಶ್ವಕಪ್​ ತಂಡಕ್ಕೆ ಈತ ಬೆಸ್ಟ್​: ಆರ್​. ಅಶ್ವಿನ್​ ​

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆರ್​. ಅಶ್ವಿನ್​
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆರ್​. ಅಶ್ವಿನ್​
Published on

ಪ್ರಮುಖ ಮುಖ್ಯಾಂಶಗಳು

  • ಈ ವರ್ಷದ ಆರ್​ಸಿಬಿ ಗೆಲುವಿಗೆ ಮುಖ್ಯ ಕಾರಣನಾದ ಆಟಗಾರ ಈತ
  • ಆರ್​ಸಿಬಿಯ ಸ್ಟಾರ್​ ವೇಗಿಗೆ 2027ರ ಏಕದಿನ ವಿಶ್ವಕಪ್​ನಲ್ಲಿ ಚಾನ್ಸ್ ಕೊಡಿ
  • ಬಿಸಿಸಿಐಗೆ ಸಲಹೆ ನೀಡಿದ ಮಾಜಿ ಕ್ರಿಕೆಟಿಗ ಆರ್​.ಅಶ್ವಿನ್​
R Ashwin: 2027ರ ಏಕದಿನ ವಿಶ್ವಕಪ್​ ಟೂರ್ನಿಗೆ ಇಡೀ ಕ್ರಿಕೆಟ್​ ಲೋಕವೇ ಕುತೂಹಲದಿಂದ ಕಾಯುತ್ತಿದ್ದರೆ, ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮ, ವಿರಾಟ್​ ಕೊಹ್ಲಿ ಸೇರಿದಂತೆ ಯಾರಿಗೆಲ್ಲ ಅವಕಾಶ ಸಿಗಬಹುದು ಎಂಬ ಚರ್ಚೆಗಳು ಪದೇ ಪದೇ ನಡೆಯುತ್ತಲೇ ಇದೆ. ಈ ಮಧ್ಯೆ, ಭಾರತ ತಂಡದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್, ಐಪಿಎಲ್​ನಲ್ಲಿ ಆರ್​ಸಿಬಿ ಗೆಲುವಿಗೆ ಬಹುಮುಖ್ಯ ಕಾರಣನಾದ ಈ ಆಟಗಾರನಿಗೆ ಚಾನ್ಸ್ ಕೊಡಬೇಕು ಎಂದು ಬಿಸಿಸಿಐಗೆ ಒತ್ತಾಯಿಸಿದ್ದಾರೆ.
2022ರಲ್ಲಿ ಕೊನೆಯ ಬಾರಿಗೆ ಏಕದಿನ ಆಡಿದ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಗೆಲುವಿಗೆ ಕಾರಣರಾದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು 2027ರ ವಿಶ್ವಕಪ್‌ಗೆ ತಂಡಕ್ಕೆ ಆಯ್ಕೆ ಮಾಡಬೇಕು. 19ನೇ ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಪರ ಅವರು 28 ವಿಕೆಟ್‌ಗನ್ನು ಪಡೆದು, ಟೀಮ್​ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಿರುವಾಗ, ಬಿಸಿಸಿಐ ಅವರತ್ತ ಗಮನ ಹರಿಸಬೇಕು ಎಂದು ಅಶ್ವಿನ್ ಹೇಳಿದ್ದಾರೆ.
ಭುವನೇಶ್ವರ್ ಜತೆ ನಾನು ಮಾತನಾಡಿದ್ದೇನೆ. ಪ್ರಥಮ ದರ್ಜೆ ಕ್ರಿಕೆಟ್, ವಿಜಯ್ ಹಜಾರೆ ಟ್ರೋಫಿ, ದಕ್ಷಿಣ ಆಫ್ರಿಕಾ ಸರಣಿ ಸೇರಿದಂತೆ ಎಲ್ಲ ಟೂರ್ನಿ, ಪಂದ್ಯಗಳಲ್ಲಿ ಅವರಿಗೆ ಆಡಲು ಅವಕಾಶ ಕೊಡಬೇಕು. ಇಲ್ಲೆಲ್ಲ ಅವರ ಅಗತ್ಯತೆ ಟೀಮ್ ಇಂಡಿಯಾಗೆ ಹೆಚ್ಚಿದೆ ಎಂದರು. ಇದರೊಟ್ಟಿಗೆ, ಶ್ರೀಲಂಕಾ ವಿರುದ್ಧದ ಆರಂಭಿಕ ಟೆಸ್ಟ್‌ನಲ್ಲಿ ಮೂವರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಲು ಅಶ್ವಿನ್ ಬಿಸಿಸಿಐಗೆ ಸಲಹೆ ನೀಡಿದರು.
ಆಗಸ್ಟ್ 15ರಂದು ಗಾಲೆಯಲ್ಲಿ ನಡೆಯಲಿರುವ ಎರಡು ಪಂದ್ಯಗಳ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಗೆ ತಯಾರಿ ನಡೆಸುತ್ತಿರುವ ಭಾರತ ತಂಡದ ಪ್ಲೇಯಿಂಗ್ ಇಲೆವನ್​ನಲ್ಲಿ ರವೀಂದ್ರ ಜಡೇಜಾ, ಮಾನವ್ ಸುತಾರ್ ಮತ್ತು ಕುಲದೀಪ್ ಯಾದವ್ ಅವರನ್ನು ಮ್ಯಾನೇಜ್​ಮೆಂಟ್​ ಕಣಕ್ಕಿಳಿಸಬೇಕು ಎಂದು ಯೂಟ್ಯೂಬ್​ ಚಾನೆಲ್​ನಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net