ಪ್ರವಾಸಿಗರನ್ನು ಆಕರ್ಷಿಸಲು ದುಬೈ ಸರ್ಕಾರ 'ಎ ದುಬೈ ಇನ್ವೈಟ್' (A Dubai Invite) ಎಂಬ ವಿಶೇಷ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು, ಉಡುಗೊರೆಗಳ ಸುರಿಮಳೆಯನ್ನೇ ಹರಿಸಲು ಸಜ್ಜಾಗಿದೆ. ಯುಎಇಯಲ್ಲಿ ವಾಸಿಸುತ್ತಿರುವ ನಾಗರಿಕರು ಮತ್ತು ನಿವಾಸಿಗಳು ವಿದೇಶದಲ್ಲಿರುವ ತಮ್ಮ ಕುಟುಂಬದ ಸದಸ್ಯರು ಅಥವಾ ಸ್ನೇಹಿತರನ್ನು ದುಬೈಗೆ ಭೇಟಿ ಕೊಡುವಂತೆ ಆಹ್ವಾನಿಸಿದರೆ, ಅವರಿಗೆ 3,000 ಎಇಡಿ (ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 78,300 ರೂ.) ಮೌಲ್ಯದ ರಿವಾರ್ಡ್ ಪ್ಯಾಕೇಜ್ಗಳು ದೊರೆಯಲಿದೆ.