ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ (PSL) ಅಂದ್ರೆ ಸಾಕು, ಅಲ್ಲಿ ಕ್ರಿಕೆಟ್ಗಿಂತ ವಿವಾದಗಳೇ ಹೆಚ್ಚು ಸದ್ದು ಮಾಡುತ್ತವೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. 2026ರ ಪಿಎಸ್ಎಲ್ (PSL 2026 )ಸೀಸನ್ ಆರಂಭವಾಗಿ ಕೇವಲ ಒಂದು ವಾರ ಕಳೆದಿದೆ, ಅಷ್ಟರಲ್ಲೇ ಈ ಲೀಗ್ ಸೋಶಿಯಲ್ ಮೀಡಿಯಾದಲ್ಲಿ ಮೀಮ್ ಮೆಟೀರಿಯಲ್ ಆಗಿ ಬದಲಾಗಿದೆ. ಮೈದಾನದಲ್ಲಿ ಸಿಕ್ಸರ್-ಬೌಂಡರಿಗಳ ಅಬ್ಬರಕ್ಕಿಂತ ಟ್ರೋಲರ್ಗಳ ಕೇಕೆಯೇ ಹೆಚ್ಚಾಗಿ ಕೇಳಿಸುತ್ತಿದೆ.