ಡಿಎಂಕೆ ನಾಯಕರು ಚುನಾವಣೆ ಮೂಲಕ ಜನರಿಂದ ಆಯ್ಕೆಯಾಗಿದ್ದಾರೆ. ಕೇವಲ ವಂಶಾವಳಿಯಿಂದ ರಾಜಕಾರಣ ಮಾಡ್ತಿಲ್ಲ ಎಂದ ಅವರು, ಬಿಜೆಪಿ ಒಂದು ರೀತಿಯ ವಾಷಿಂಗ್ ಮಿಷನ್ ಇದ್ದಂತೆ. ನೀವು ಅವರೊಂದಿಗೆ ಮೈತ್ರಿ ಮಾಡಿಕೊಂಡ ತಕ್ಷಣ, ಬಿಜೆಪಿ ಸೇರಿದ ಬಳಿಕ ನಿಮ್ಮನ್ನು ಆ ದೊಡ್ಡ ವಾಷಿಂಗ್ ಮಿಷನ್ ಹಾಕುತ್ತಾರೆ. ಆ ಬಳಿಕ ನೀವು ಪರಿಶುದ್ಧರಾಗಿ ಹೊರಬರುತ್ತೀರಿ. ಹಾಗಾಗಿ ಬೇರೊಬ್ಬರನ್ನು ಭ್ರಷ್ಟ ಎಂದು ಕರೆಯುವ ನೈತಿಕತೆ ಬಿಜೆಪಿಗಿಲ್ಲ ಎಂದು ಕಿಡಿಕಾರಿದ್ದಾರೆ.