ಜಿಂಬಾಬ್ವೆ: ಬುಲವಾಯೊದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಐಸಿಸಿ ಅಂಡರ್-19 ವಿಶ್ವಕಪ್ 2026 ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಒಂದು ಕುತೂಹಲಕಾರಿ ಬೆಳವಣಿಗೆ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ, ಅಟ್ಟಹಾಸ, ಬರ್ಬರ ಕೊಲೆ ಪ್ರಕರಣಗಳು ಭಾರತೀಯರನ್ನು ಕೆರಳಿಸಿದೆ. ಇದು ಎರಡೂ ದೇಶಗಳ ಮಧ್ಯೆ ಉದ್ವಿಗ್ನತೆಗೆ ಸಾಕ್ಷಿಯಾಗಿದೆ. ಈ ನೆರಳು ಕ್ರೀಡೆ ಮೇಲೂ ಬಿದ್ದಿದ್ದು, ಮೈದಾನದಲ್ಲಿ ಟಾಸ್ಗೆ ಬಂದ ಎರಡೂ ತಂಡಗಳ ನಾಯಕರು ಕೈಕುಲಕದೆ ಹೊರಟಿರುವುದು ಸದ್ಯ ಹಲವರ ಹುಬ್ಬೇರಿಸಿದೆ.