ಮುಂಬೈ: ಬಹುಭಾಷಾ ತಾರೆ, ನ್ಯಾಚ್ಯುರಲ್ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ಸಾಯಿ ಪಲ್ಲವಿ (Sai Pallavi) ಮಾಲಿವುಡ್‌ನಲ್ಲಿ ನಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ತಮ್ಮ ಮೊದಲ ಚಿತ್ರ 'ಪ್ರೇಮಂ' ಮೂಲಕ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡ ನಟಿ, ಮೊದಲ ಸಿನಿಮಾದಲ್ಲೇ ನಟಿಯಾಗಿ ಅಭಿನಯಿಸಿ, ತಮ್ಮನ್ನು ತಾವು ಸಾಬೀತುಪಡಿಸಿಕೊಂಡರು. ಇದಾದ ಬಳಿಕ ತೆಲುಗು ಹಾಗೂ ತಮಿಳಿನಲ್ಲಿ ಅವಕಾಶಗಳ ಸುರಿಮಳೆಯನ್ನೇ ಪಡೆದ ಪಲ್ಲವಿ, ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ನಟಿ ಹಿಂದಿ ಚಿತ್ರೋದ್ಯಮಕ್ಕೆ ಪದಾರ್ಪಣೆ ಮಾಡುತ್ತಿರುವುದು ಅವರ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ.