ಇತ್ತೀಚೆಗೆ ಸಂದರ್ಶನವೊಂದರಲ್ಲಿ ಎರಸ್ಮಾಸ್ ಅವರಿಗೆ ಒಂದು ಪ್ರಶ್ನೆ ಎದುರಾಯಿತು. ಅದೇನೆಂದರೆ, ಭಾರತ ವಿರುದ್ಧದ ಪಂದ್ಯದಲ್ಲಿ ನಿಮಗೆ ಯಾವ ರೀತಿಯ ಒತ್ತಡ ಇರುತ್ತದೆ? ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಎರಾಸ್ಮಸ್, ಹೌದು, ಅದು ನಿಜ. ಭಾರತ ತುಂಬಾ ದೊಡ್ಡ ತಂಡ ಮತ್ತು ಭಾರತ ತಂಡವು ಅತ್ಯಂತ ಬಲಿಷ್ಠವಾಗಿದೆ. ಅವರು ಹಾಲಿ ಚಾಂಪಿಯನ್ ಕೂಡ ಹೌದು. ಆದರೆ, ನಮ್ಮ ಮೇಲೆ ಯಾವುದೇ ಒತ್ತಡವಿರುವುದಿಲ್ಲ. ತವರಿನಲ್ಲಿ ಆಡುವಾಗ, ಒತ್ತಡ ಭಾರತದ ಮೇಲೆ ಇರುತ್ತದೆ. ನಾವು ಭಾರತಕ್ಕೆ ಒಂದು ಇಂಚು ಅವಕಾಶ ಕೂಡ ಬಿಟ್ಟುಕೊಡುವುದಿಲ್ಲ ಎಂದು ಸವಾಲು ಹಾಕಿದ್ದಾರೆ.