ಶ್ರೇಯಸ್​ ಅಯ್ಯರ್​ ಕ್ಯಾಚ್​ ಹಿಡಿಯುವಾಗ ನೀವಿದನ್ನು ಗಮನಿಸಿದ್ರಾ? ವೈರಲ್​ ವಿಡಿಯೋದಲ್ಲಿದೆ ಅಚ್ಚರಿ ಸಂಗತಿ... Shreyas Iyer

ಶ್ರೇಯಸ್​ ಅಯ್ಯರ್​ ಹಿಡಿದ ಅದ್ಭುತ ಕ್ಯಾಚ್​ಗೆ ತಲೆಬಾಗಿದ ಕ್ರೀಡಾ ಜಗತ್ತು: ರೋಹಿತ್​, ಸೂರ್ಯ ರಿಯಾಕ್ಷನ್​ ವೈರಲ್​...Shreyas Iyer
ಶ್ರೇಯಸ್​ ಅಯ್ಯರ್​ ಹಿಡಿದ ಅದ್ಭುತ ಕ್ಯಾಚ್​ಗೆ ತಲೆಬಾಗಿದ ಕ್ರೀಡಾ ಜಗತ್ತು: ರೋಹಿತ್​, ಸೂರ್ಯ ರಿಯಾಕ್ಷನ್​ ವೈರಲ್​...Shreyas Iyer
Published on

ಪ್ರಮುಖ ಮುಖ್ಯಾಂಶಗಳು

  • 19ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಪಂಜಾಬ್​ ಕಿಂಗ್ಸ್ ತಂಡ
  • ಆಡಿರುವ 5 ಪಂದ್ಯಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಉಳಿದ ನಾಲ್ಕರಲ್ಲಿ ಗೆಲವು
  • ಐಪಿಎಲ್​ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಜಿಗಿದ ಶ್ರೇಯಸ್​ ಅಯ್ಯರ್​ ಪಡೆ
  • ನಿನ್ನೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಭರ್ಜರಿ ಗೆಲುವು
Shreyas Iyer : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಪಂಜಾಬ್​ ಕಿಂಗ್ಸ್ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಉಳಿದ ನಾಲ್ಕರಲ್ಲಿ ಗೆಲವು ಸಾಧಿಸಿ, ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಗುರುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 7 ವಿಕೆಟ್‌ಗಳಿಂದ ಭರ್ಜರಿ ಜಯಗಳಿಸಿತು.
ಈ ಪಂದ್ಯದಲ್ಲಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್​ ಮಾತ್ರವಲ್ಲದೆ, ತಮ್ಮ ಅದ್ಭುತವಾದ ಫೀಲ್ಡಿಂಗ್ ಕೌಶಲ್ಯದಿಂದ ಎಲ್ಲರ ಗಮನ ಸೆಳೆದರು. ಅದರಲ್ಲೂ ವಿಶ್ವಕಪ್​ ವಿಜೇತ ನಾಯಕರಾದ ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಶರ್ಮಾ, ಅಯ್ಯರ್​ ಫೀಲ್ಡಿಂಗ್ ನೋಡಿ ಮೂಕವಿಸ್ಮಿತರಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಡೆದಿದ್ದೇನು?

ಮುಂಬೈ ತಂಡ ಬ್ಯಾಟಿಂಗ್​ ಮಾಡುವಾಗ 18ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಈ ಓವರ್ ಅನ್ನು ಪಂಜಾಬ್ ಬೌಲರ್ ಮಾರ್ಕೊ ಜಾನ್ಸೆನ್ ಬೌಲ್ ಮಾಡಿದರು. ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸ್ಟ್ರೈಕಿಂಗ್ ಎಂಡ್‌ನಲ್ಲಿದ್ದರು. ಪಾಂಡ್ಯ ಮೊದಲ ಎಸೆತವನ್ನು ಸಿಕ್ಸರ್‌ಗೆ ಬಾರಿಸಿದರು. ಎರಡನೇ ಎಸೆತ ಡಾಟ್ ಆಯಿತು. ಮೂರನೇ ಎಸೆತದಲ್ಲಿ ಪಾಂಡ್ಯ ಲಾಂಗ್​ ಆನ್ ಕಡೆಗೆ ಬೃಹತ್ ಶಾಟ್ ಆಡಿದರು. ಈ ವೇಳೆ ಗಾಳಿಯಲ್ಲಿ ಹಾರಿದ ಚೆಂಡು ಇನ್ನೇನು ಬೌಂಡರಿ ಗೆರೆಯನ್ನು ದಾಟಬೇಕು ಎನ್ನುವಷ್ಟರಲ್ಲಿ ಲಾಂಗ್​ಆನ್​ನಲ್ಲಿ ಫೀಲ್ಡಿಂಗ್​ ಮಾಡುತ್ತಿದ್ದ ಅಯ್ಯರ್​, ಗಾಳಿಯಲ್ಲಿ ಹಾರಿ ಚೆಂಡನ್ನು ಹಿಡಿದರು. ಆದರೆ, ಗಾಳಯಲ್ಲಿರುವಾಗಲೇ ಬೌಂಡರಿ ಗೆರಯನ್ನು ದಾಟಿದ್ದರು. ಇದು ಗೊತ್ತಾದ ಕೂಡಲೇ ತಕ್ಷಣ ಚೆಂಡನ್ನು ಮೈದಾನದ ಒಳಗೆ ಎಸೆದು ಕೆಳಗೆ ಬಿದ್ದರು. ಅಷ್ಟರಲ್ಲಿ ಮೈದಾನದ ಒಳಗೆ ಇದ್ದ ಬಾರ್ಟ್ಲೆಟ್, ಸುಲಭವಾಗಿ ಆ ಕ್ಯಾಚ್​ ಹಿಡಿದರು.

ನೀವಿದನ್ನು ಗಮನಿಸಿದ್ರಾ?

ಅಯ್ಯರ್​ ಅವರು ಮುಂಬೈ ಡಗೌಟ್ ಬಳಿ ಕ್ಯಾಚ್​ ಹಿಡಿದರು. ಈ ವೇಳೆ ಅಲ್ಲಿಯೇ ಕುಳಿತಿದ್ದ ರೋಹಿತ್​ ಶರ್ಮಾ ಮತ್ತು ಸೂರ್ಯಕುಮಾರ್​ ಯಾದವ್​ ಒಂದು ಕ್ಷಣ ಹುಬ್ಬೇರಿಸಿದರು. ಎಂಥಾ ಕ್ಯಾಚಿದು ಎಂದು ಮೂಕವಿಸ್ಮಿತರಾದರು. ತಮ್ಮ ಕಣ್ಣುಗಳನ್ನು ಅರಳಿಸಿ ಶ್ರೇಯಸ್​ ಅಯ್ಯರ್​ ಅವರನ್ನೇ ನೋಡಿದರು. ಅತ್ತ ಕ್ರೀಡಾಂಗಣದಲ್ಲೂ ಅಯ್ಯರ್​ ಕ್ಯಾಚ್​ ನೋಡಿ ಎಲ್ಲರು ಅಚ್ಚರಿ ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗುತ್ತಿದ್ದು, ಅಯ್ಯರ್​ ಕ್ಯಾಚ್​ ನೋಡಿವರು ನಿಜಕ್ಕೂ ಇದು ಅದ್ಭುತ ಎಂದು ಕೊಂಡಾಡುತ್ತಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್​ಗೆ ರೋಹಿತ್ ಶರ್ಮ ಅವರ ಅನುಪಸ್ಥಿತಿ ಕಾಡಿತು. ಕ್ವಿಂಟನ್​ ಡಿಕಾಕ್​ (ಅಜೇಯ 59 ಎಸೆತ, 112 ರನ್​) ಮತ್ತು ನಮನ್​ ಧಿರ್​ (31 ಎಸೆತ, 50 ರನ್​) ಅವರ ಭರ್ಜರಿ ಇನ್ನಿಂಗ್ಸ್ ಬಿಟ್ಟರೆ ಇನ್ಯಾರಿಂದಲೂ ಉತ್ತಮ ಬ್ಯಾಟಿಂಗ್​ ಪ್ರದರ್ಶನ ಬರಲಿಲ್ಲ. 20 ಓವರ್ ಅಂತ್ಯಕ್ಕೆ ಎಂಐ 195 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಶ್ರೇಯಸ್​ ಪಡೆ 3 ವಿಕೆಟ್​ ನಷ್ಟಕ್ಕೆ ಸುಲಭ ಗೆಲುವು ಸಾಧಿಸಿತು.
ಆರಂಭದಲ್ಲೇ ಸುಲಭ ಕ್ಯಾಚ್​ ಬಿಟ್ಟ ಜಸ್ಪ್ರೀತ್​ ಬುಮ್ರಾ, ಹಾರ್ದಿಕ್​ ಪಾಂಡ್ಯ ಬೌಲಿಂಗ್​ ಈ ಎಡವಟ್ಟು ಮಾಡಿದರು. ಇದೇನಾದರೂ ಮಿಸ್​ ಮಾಡದೆ ಹಿಡಿದಿದ್ದರೆ, ಖಂಡಿತವಾಗಿ ಮುಂಬೈಗೆ ಇಂತಹ ಸೋಲಾಗುತ್ತಿರಲಿಲ್ಲ. ಪಂಜಾಬ್ ಪರ ಪ್ರಭ್​ಸಿಮ್ರನ್​ ಸಿಂಗ್ (80 ರನ್​, 39 ಎಸೆತ) ಮತ್ತು ಶ್ರೇಯಸ್​ ಅಯ್ಯರ್​ (66 ರನ್​, 36 ಎಸೆತ) ಆಡಿದ ಅದ್ಭುತ ಇನ್ನಿಂಗ್ಸ್​ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net