ಪ್ರಸ್ತುತ ಭಾರತ ತಂಡದಲ್ಲಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ರಂತಹ ಪ್ರಮುಖ ಆರಂಭಿಕ ಆಟಗಾರರಿದ್ದಾರೆ. ಇದೀಗ ಸೂರ್ಯವಂಶಿ ಎಂಟ್ರಿಯಾದರೆ, ಈ ಮೂವರಲ್ಲಿ ಒಬ್ಬರು ತಂಡದಿಂದ ಹೊರಗುಳಿಯಬೇಕಾಗುತ್ತದೆ. ವೈಭವ್, ಹಿರಿಯ ತಂಡದಲ್ಲಿ ಆಡಲು ಸಂಪೂರ್ಣ ಸಜ್ಜಾಗಿರುವುದು ಬಿಸಿಸಿಐಗೆ ಮನವರಿಕೆಯಾಗಿದೆ. ಆದರೆ, ಇತ್ತೀಚೆಗೆ ಮುಗಿದ ಟಿ20 ವಿಶ್ವಕಪ್ ಫೈನಲ್ನಲ್ಲಿ ಸಂಜು, ಅಭಿ ಮತ್ತು ಇಶಾನ್ ಅರ್ಧ ಶತಕ ಬಾರಿಸಿದ್ದಾರೆ. ಅಲ್ಲದೆ, ಪ್ರಸ್ತುತ ನಡೆಯುತ್ತಿರುವ ಐಪಿಎಲ್ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ, ಅವರನ್ನೂ ಕಡೆಗಣಿಸುವಂತಿಲ್ಲ. ಇದರ ನಡುವೆ ಮತ್ತೊಬ್ಬ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ಅತ್ಯದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ, ಬಿಸಿಸಿಐ ಆಯ್ಕೆ ಸಮಿತಿ ಯಾರನ್ನು ಆಯ್ಕೆ ಮಾಡಬೇಕು? ಯಾರನ್ನು ಬಿಡಬೇಕು? ಎಂಬ ಗೊಂದಲದಲ್ಲಿ ಸಿಲುಕುವುದು ಖಚಿತ ಎನ್ನಲಾಗುತ್ತಿದೆ.