ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ? ಕೆ.ಎಲ್​. ರಾಹುಲ್​ ದಂಪತಿಗೆ ಕಿರುಕುಳ, ವಿಡಿಯೋ ವೈರಲ್​! KL Rahul

ಟೀಮ್​ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಪತ್ನಿ ಅತಿಯಾ ಶೆಟ್ಟಿ
ಟೀಮ್​ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಪತ್ನಿ ಅತಿಯಾ ಶೆಟ್ಟಿ
Published on

ಪ್ರಮುಖ ಮುಖ್ಯಾಂಶಗಳು

  • ಅಭಿಮಾನ ಇರಬೇಕು ಆದರೆ ಆ ಅಭಿಮಾನ ಅತಿರೇಕವಾಗಿ ಇರಬಾರದು
  • ಟೀಮ್​ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಪತ್ನಿ ಅತಿಯಾಗೆ ಕಿರುಕುಳ
  • ಅಭಿಮಾನಿಗಳ ವರ್ತನೆ ನೋಡಿದರೆ ಇದೆಂಥಾ ಹುಚ್ಚಾಟ ಎನಿಸದೇ ಇರದು
ಮುಂಬೈ: ಅಭಿಮಾನ ಇರಬೇಕು ಆದರೆ, ಆ ಅಭಿಮಾನ ಅತಿರೇಕವಾಗಿ ನೆಚ್ಚಿನ ವ್ಯಕ್ತಿಯನ್ನೇ ಭಯಕ್ಕೆ ದೂಡುವಂತಿರಬಾರದು. ಇತ್ತೀಚೆಗೆ ವೈರಲ್​ ಆಗಿರುವ ಟೀಮ್​ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ( KL Rahul ) ಅವರ ವಿಡಿಯೋ ಇದಕ್ಕೆ ತಾಜಾ ಉದಾಹರಣೆಯಂತಿದೆ. ಅಭಿಮಾನಿಗಳ ವರ್ತನೆ ನೋಡಿದರೆ ಇದೆಂಥಾ ಹುಚ್ಚಾಟ ಎನಿಸದೇ ಇರದು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.
ದಕ್ಷಿಣ ಆಫ್ರಿಕಾ ಮತ್ತು ಟೀಮ್ ಇಂಡಿಯಾ ನಡುವಿನ ಏಕದಿನ ಸರಣಿ ಇತ್ತೀಚಿಗೆ ಮುಗಿದಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ಈ ಸರಣಿಗೆ ಕೆಎಲ್ ರಾಹುಲ್, ಹಂಗಾಮಿ ನಾಯಕರಾಗಿ ಜವಾಬ್ದಾರಿ ಹೊತ್ತಿದ್ದರು. ಅಲ್ಲದೆ, ಅಷ್ಟೇ ಅಚ್ಚುಕಟ್ಟಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ರಾಹುಲ್​, 2-1 ಅಂತರದಿಂದ ಸರಣಿಯನ್ನು ಗೆಲ್ಲಿಸಿಕೊಟ್ಟರು. ಏಕದಿನ ಸರಣಿ ಮುಗಿದ ನಂತರ, ಕೆಎಲ್ ರಾಹುಲ್ ಅವರು ತಮ್ಮ ಎಲ್ಲ ಸಮಯವನ್ನು ತಮ್ಮ ಕುಟುಂಬಕ್ಕೆ ಮೀಸಲಿಟ್ಟಿದ್ದಾರೆ.
ಇತ್ತೀಚೆಗೆ ಕೆ.ಎಲ್​. ರಾಹುಲ್​ ಅವರು ತಮ್ಮ ಪತ್ನಿ ಅತಿಯಾ ಶೆಟ್ಟಿಯನ್ನು ಮುಂಬೈನ ರೆಸ್ಟೋರೆಂಟ್‌ಗೆ ಕರೆದೊಯ್ದರು. ಭಾನುವಾರವಾದ್ದರಿಂದ, ಸ್ಟಾರ್​ ದಂಪತಿ ಒಂದೊಳ್ಳೆ ಸಮಯ ಕಳೆಯಲು ರೆಸ್ಟೋರೆಂಟ್​ಗೆ ಹೋಗಿದ್ದರು. ಬಳಿಕ ಇಬ್ಬರು ವಾಪಸ್ಸು ಬರುವಾಗ ರೆಸ್ಟೋರೆಂಟ್​ ಮುಂದೆ ಹೈಡ್ರಾಮ ನಡೆಯಿತು. ಸೆಲ್ಫಿ ಮುಗಿಬಿದ್ದ ಅಭಿಮಾನಿಗಳು ಸ್ಥಳದಲ್ಲಿ ಬಿಗುವಿನ ವಾತಾವರಣ ಮೂಡಿಸಿದರು.
ರೆಸ್ಟೊರೆಂಟ್​ ಹೊರಗೆ ಜಮಾಯಿಸಿದ್ದ ಅಭಿಮಾನಿಗಳು ಕೆ.ಎಲ್. ರಾಹುಲ್ ಮತ್ತು ಅವರ ಪತ್ನಿಯ ಸೆಲ್ಫಿ ಮತ್ತು ಫೋಟೋಗಳಿಗಾಗಿ ಮುಗಿಬಿದ್ದರು. ಬೇಡ, ನಮ್ಮನ್ನು ಹೋಗಲು ಬಿಡಿ ಎಂದು ಬೇಡಿಕೊಂಡರು. ಒಂದೇ ಒಂದು ಸೆಲ್ಫಿ ಎಂದು ಕೇಳುತ್ತಾ ಕೆ.ಎಲ್​. ರಾಹುಲ್​ ಹಿಂದೆಯೇ ಬಿದ್ದರು. ಈ ವೇಳೆ ರಾಹುಲ್​ ಭಯ ಬಿದ್ದಿದ್ದು ಅವರ ಮುಖದಲ್ಲಿ ವ್ಯಕ್ತವಾಯಿತು. ತಮ್ಮ ಪತ್ನಿಗೆ ಹಿಂಸೆ ಕೊಡುತ್ತಾರೇನೋ ಅನ್ನೋ ಚಿಂತೆ ರಾಹುಲ್​ ಅವರಿಗೆ ಕಾಡಿತು.
ಸೆಲ್ಫಿಗಾಗಿ ಅಭಿಮಾನಿಗಳು ಅತಿಯಾ ಶೆಟ್ಟಿ ಅವರ ಹಿಂದೆಯೂ ಬಿದ್ದರು. ಇದರಿಂದ ರಾಹುಲ್ ಸಹನೆ ಕಳೆದುಕೊಂಡು, ಕೋಪದಿಂದಲೇ ಆ ಸ್ಥಳದಿಂದ ಹೊರಟುಹೋದರು. ಈ ವಿಡಿಯೋ ವೈರಲ್ ಆದ ನಂತರ ಕೆ.ಎಲ್. ರಾಹುಲ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ಪರ ಸಹಾನುಭೂತಿ ತೋರಿದ್ದಾರೆ. ಜನರು ಸೆಲ್ಫಿಗಾಗಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯಬಹುದೇ? ಎಂದು ಕಿಡಿಕಾರುತ್ತಿದ್ದಾರೆ.
ಅಂದಹಾಗೆ, ಬಹಳ ದಿನಗಳಿಂದ ಕೆ.ಎಲ್. ರಾಹುಲ್ ಅವರನ್ನು ಭಾರತೀಯ ಟಿ20 ತಂಡಕ್ಕೆ ಆಯ್ಕೆ ಮಾಡಬೇಕೆಂಬ ಬೇಡಿಕೆ ಇದೆ. ಗಿಲ್ ವಿಫಲವಾಗುತ್ತಿರುವ ಈ ಸಮಯದಲ್ಲಿ, ಕೆಎಲ್ ರಾಹುಲ್​ಗೆ ಅವಕಾಶ ನೀಡಬೇಕು ಎಂದು ಹೇಳಲಾಗುತ್ತಿದೆ. ಟಿ20 ವಿಶ್ವಕಪ್ 2026 ರಂತಹ ಟೂರ್ನಿಯಲ್ಲಿ ಕೆಎಲ್ ರಾಹುಲ್ ಅವರ ಸೇವೆ ತಂಡಕ್ಕೆ ತುಂಬಾ ಅಗತ್ಯವಿದೆ ಎಂದು ಹೇಳಲಾಗುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net