ಕ್ಷಮೆಯೇ ಇಲ್ಲ... ನಮ್ಮ ಹೀನಾಯ ಸೋಲಿಗೆ ಅದೇ ನಿಜವಾದ ಕಾರಣ ಎಂದ KKR ನಾಯಕ ಅಜಿಂಕ್ಯ ರಹಾನೆ! Ajinkya Rahane

ಕ್ಷಮೆಯೇ ಇಲ್ಲ... ನಮ್ಮ ಹೀನಾಯ ಸೋಲಿಗೆ ಅದೇ ನಿಜವಾದ ಕಾರಣ ಎಂದ KKR ನಾಯಕ ಅಜಿಂಕ್ಯ ರಹಾನೆ! Ajinkya Rahane
ಕ್ಷಮೆಯೇ ಇಲ್ಲ... ನಮ್ಮ ಹೀನಾಯ ಸೋಲಿಗೆ ಅದೇ ನಿಜವಾದ ಕಾರಣ ಎಂದ KKR ನಾಯಕ ಅಜಿಂಕ್ಯ ರಹಾನೆ! Ajinkya Rahane
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಕೆಕೆಆರ್​ ತಂಡಕ್ಕೆ ಮತ್ತೊಂದು ಸೋಲು
  • ಈಡನ್ ಗಾರ್ಡನ್ಸ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ( SRH ) ತಂಡವ ವಿರುದ್ಧ ಸೋಲುಂಡಿದ ಕೋಲ್ಕತ್ತ
  • ತಮ್ಮ ತಂಡದ ಹೀನಾಯ ಸೋಲಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ವೈಫಲ್ಯವೇ ಕಾರಣ ಎಂದ ರಹಾನೆ
Ajinkya Rahane : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಕೋಲ್ಕತ ನೈಟ್​ ರೈಡರ್ಸ್​ ( KKR ) ತಂಡ ಬ್ಯಾಕ್​ ಟು ಬ್ಯಾಕ್​ ಸೋಲನ್ನು ಅನುಭವಿಸಿದೆ. ಗುರುವಾರ (ಏಪ್ರಿಲ್​ 02) ಈಡನ್ ಗಾರ್ಡನ್ಸ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ( SRH ) ತಂಡವ ವಿರುದ್ಧ ನಡೆದ ಪಂದ್ಯದಲ್ಲಿ ಕೆಕೆಆರ್​ 65 ರನ್‌ಗಳ ಸೋಲನ್ನು ಅನುಭವಿಸಿತು. ಈ ಮೂಲಕ ಈ ಟೂರ್ನಿಯಲ್ಲಿ ಸತತ ಎರಡನೇ ಸೋಲುಂಡಿತು. ತಮ್ಮ ತಂಡದ ಈ ಕಳಪೆ ಪ್ರದರ್ಶನಕ್ಕೆ ಕಾರಣ ಏನು ಅನ್ನೋದನ್ನು ನಾಯಕ ಅಂಜಿಕ್ಯಾ ರಹಾನೆ ಬಿಚ್ಚಿಟ್ಟಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 226 ರನ್ ಗಳಿಸಿತು. ಎಸ್​ಆರ್​ಎಚ್​ ಪರ ಪರ ಹೆನ್ರಿಚ್ ಕ್ಲಾಸೆನ್ (52 ರನ್​, 35 ಎಸೆತ, 4 ಬೌಂಡರಿಗಳು, 1 ಸಿಕ್ಸರ್) ಅರ್ಧಶತಕ ಗಳಿಸಿದರು. ಅಭಿಷೇಕ್ ಶರ್ಮಾ (48 ರನ್​, 21 ಎಸೆತ, 4 ಬೌಂಡರಿ, 4 ಸಿಕ್ಸರ್‌), ಟ್ರಾವಿಸ್ ಹೆಡ್ (46 ರನ್​, 21 ಎಸೆತ, 6 ಬೌಂಡರಿ, 3 ಸಿಕ್ಸರ್‌) ಮತ್ತು ನಿತೀಶ್ ಕುಮಾರ್ ರೆಡ್ಡಿ (39 ರನ್​, 24 ಎಸೆತ, 4 ಬೌಂಡರಿ, 1 ಸಿಕ್ಸರ್) ಮಿಂಚಿದರು. ಕೆಕೆಆರ್ ಬೌಲರ್‌ಗಳಲ್ಲಿ ಬ್ಲೆಸ್ಸಿಂಗ್ ಮುಜರಬಾನಿ ನಾಲ್ಕು ವಿಕೆಟ್ ಪಡೆದರೆ, ವೈಭವ್ ಅರೋರಾ ಎರಡು ವಿಕೆಟ್ ಪಡೆದರು. ಕಾರ್ತಿಕ್ ತ್ಯಾಗಿ ಮತ್ತು ಅನುಕುಲ್ ರಾಯ್ ತಲಾ ಒಂದು ವಿಕೆಟ್ ಪಡೆದರು.
227 ರನ್‌ಗಳ ಬೃಹತ್​ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತ ನೈಟ್ ರೈಡರ್ಸ್ 16 ಓವರ್‌ಗಳಲ್ಲಿ 161 ರನ್‌ಗಳಿಗೆ ಆಲೌಟ್ ಆಯಿತು. ಕೆಕೆಆರ್ ಪರ ಅಂಗ್​ಕ್ರೀಶ್​ ರಘುವಂಶಿ (52 ರನ್​, 29 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ರಿಂಕು ಸಿಂಗ್ (35 ರನ್​, 25 ಎಸೆತ, 4 ಬೌಂಡರಿ, 1 ಸಿಕ್ಸರ್) ಉತ್ತಮ ಆಟ ಪ್ರದರ್ಶಿಸಿದರು. ಸನ್‌ರೈಸರ್ಸ್ ಪರ ಜಯದೇವ್ ಉನಾದ್ಕತ್ ಮೂರು ವಿಕೆಟ್ ಪಡೆದರೆ, ಮಾಲಿಂಗ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ ಎರಡು ವಿಕೆಟ್ ಪಡೆದರು. ಹರ್ಷ್ ದುಬೆ ಒಂದು ವಿಕೆಟ್ ಪಡೆದರು.
ಈ ಪಂದ್ಯದ ಬಳಿಕ ಮಾತನಾಡಿದ ಕೆಕೆಆರ್ ನಾಯಕ ರಹಾನೆ, ಈ ಸೋಲು ತಮಗೆ ನಿರಾಶೆ ತಂದಿದೆ ಎಂದರು. ದೊಡ್ಡ ಗುರಿಗಳನ್ನು ಬೆನ್ನಟ್ಟುವಾಗ ಜತೆಯಾಟಗಳು ತುಂಬಾ ಮುಖ್ಯ ಎಂದು ಹೇಳಿದರು. ನಾವು ಇನ್ನೂ ಎರಡು ದೊಡ್ಡ ಜತೆಯಾಟಗಳನ್ನು ಆಡಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಆದರೆ, ನಮ್ಮಿಂದ ಜತೆಯಾಟ ಸಾಧ್ಯವಾಗಲಿಲ್ಲ ಎಂದು ರಹಾನೆ ಹೇಳಿದರು.
ಸನ್‌ರೈಸರ್ಸ್ ಬ್ಯಾಟ್ಸ್‌ಮನ್‌ಗಳು ನೀಡಿದ ಆರಂಭವನ್ನು ನೋಡಿದರೆ, ಅವರು ಮೊದಲ 10 ಓವರ್‌ಗಳಲ್ಲೇ 130 ರಿಂದ 140 ರನ್ ಗಳಿಸುತ್ತಾರೆ ಎಂಬ ಭಾವಿಸಿದ್ದೆವು. ಆದಾಗ್ಯೂ, ನಮ್ಮ ಬೌಲರ್‌ಗಳು ಅದ್ಭುತವಾಗಿ ಚೇತರಿಸಿಕೊಂಡರು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಚೆಂಡು ಸ್ವಲ್ಪ ನಿಂತು ಬರುತ್ತಿತ್ತು. ಮೊದಲ ಇನ್ನಿಂಗ್ಸ್‌ಗೆ ಹೋಲಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ನಿಧಾನಗತಿಯ ಚೆಂಡುಗಳು ಹೆಚ್ಚು ಹಿಡಿತ ಸಾಧಿಸಿದವು. ನಮ್ಮ ವಿಕೆಟ್​ಗಳು ಸುಧಾರಿಸುತ್ತವೆ ಎಂದು ಭಾವಿಸಿದ್ದೆ ಆದರೆ, ಅದು ಆಗಲಿಲ್ಲ. ಸೋಲಿಗೆ ಇದನ್ನೆಲ್ಲ ನೆಪವಾಗಿ ಬಳಸುತ್ತಿಲ್ಲ ಎಂದು ರಹಾನೆ ತಿಳಿಸಿದರು.
ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ತಮ್ಮ ತಂಡವು ಉತ್ತಮ ಆರಂಭವನ್ನು ಪಡೆಯಿತು. ಮೊದಲ ಆರು ಓವರ್‌ಗಳಲ್ಲಿ 78 ರನ್ ಗಳಿಸಿದೆವು. ಆದರೆ, ಗ್ರೀನ್ ರನೌಟ್ ಆದಾಗ ನಾವು ಹೆಚ್ಚುವರಿ ವಿಕೆಟ್ ಕಳೆದುಕೊಂಡೆವು. ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ವೈಫಲ್ಯವೇ ನಮ್ಮ ತಂಡದ ಸೋಲಿಗೆ ಪ್ರಮುಖ ಕಾರಣ. ಇದರಲ್ಲಿ ಯಾವುದೇ ಕ್ಷಮೆ ಇಲ್ಲ ಎಂದು ರಹಾನೆ ಅವರು ಹೇಳಿದರು.
ತವರಿನ ಪಂದ್ಯಗಳನ್ನು ಗೆಲ್ಲುವುದು ಬಹಳ ಮುಖ್ಯ. ಹೀಗಾಗಿ ನಾವು ನಮ್ಮ ಕಾರ್ಯತಂತ್ರಗಳನ್ನು ಮತ್ತೊಮ್ಮೆ ಚರ್ಚಿಸುತ್ತೇವೆ. ಅಂತಿಮ ತಂಡದಲ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್‌ಗಳನ್ನು ತೆಗೆದುಕೊಳ್ಳಬೇಕೇ? ಅಥವಾ ಬೌಲರ್‌ರನ್ನು ತೆಗೆದುಕೊಳ್ಳಬೇಕೇ? ಎಂಬುದರ ಬಗ್ಗೆ ನಾವು ಯೋಚಿಸುತ್ತೇವೆ. ಮುಂದಿನ ಪಂದ್ಯಕ್ಕೆ ಇನ್ನೂ ಮೂರರಿಂದ ನಾಲ್ಕು ದಿನಗಳಿವೆ ಆದ್ದರಿಂದ, ಈ ಪಂದ್ಯದ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ. ಎಲ್ಲವೂ ಸರಿಯಾಗುತ್ತದೆ ಎಂದು ಭಾವಿಸುತ್ತೇನೆ ಎಂದು ರಹಾನೆ ಹೇಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net