ದಾಖಲೆ ಬರೆದ ಶಮಿ... 19 ವರ್ಷದ IPL ಇತಿಹಾಸದಲ್ಲಿ ಈ ಸಾಧನೆ ಮಾಡಿದ ಏಕೈಕ ಬೌಲರ್​ ಎಂಬ ಹೆಗ್ಗಳಿಕೆ! Mohammed Shami

ಇತಿಹಾಸ ಬರೆದ ಶಮಿ... 19 ವರ್ಷದ IPL ಇತಿಹಾಸದಲ್ಲಿ ಈ ಸಾಧನೆ ಮಾಡಿದ ಏಕೈಕ ಬೌಲರ್​ ಎಂಬ ಹೆಗ್ಗಳಿಕೆ! Mohammed Shami
ಇತಿಹಾಸ ಬರೆದ ಶಮಿ... 19 ವರ್ಷದ IPL ಇತಿಹಾಸದಲ್ಲಿ ಈ ಸಾಧನೆ ಮಾಡಿದ ಏಕೈಕ ಬೌಲರ್​ ಎಂಬ ಹೆಗ್ಗಳಿಕೆ! Mohammed Shami
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾದ ಅನುಭವಿ ಆಟಗಾರ ಮೊಹಮ್ಮದ್ ಶಮಿ ಐಪಿಎಲ್‌ನಲ್ಲಿ ಅಪರೂಪದ ಸಾಧನೆ
  • ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಕೆ.ಎಲ್​. ರಾಹುಲ್​ ವಿಕೆಟ್​ ಪಡೆಯುವ ಮೂಲಕ ಇತಿಹಾಸ ಸೃಷ್ಟಿ
  • ಐಪಿಎಲ್​ನಲ್ಲಿ ಮೊದಲ ಎಸೆತದಲ್ಲೇ 5 ಬಾರಿ ವಿಕೆಟ್ ಪಡೆದ ಏಕೈಕ ಬೌಲರ್ ಎಂಬ ಹೆಗ್ಗಳಿಕೆಗೆ ಶಮಿ ಪಾತ್ರ
Mohammed Shami : ಟೀಮ್ ಇಂಡಿಯಾದ ಅನುಭವಿ ಆಟಗಾರ ಮೊಹಮ್ಮದ್ ಶಮಿ ಐಪಿಎಲ್‌ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ನಿನ್ನೆ (ಏಪ್ರಿಲ್​ 01) ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ತಾವು ಎಸೆದ ತಮ್ಮ ಮೊದಲನೇ ಓವರ್​ನ ಮೊದಲ​ ಎಸೆತದಲ್ಲೇ ಕೆ.ಎಲ್​. ರಾಹುಲ್​ ಅವರನ್ನು ಔಟ್​ ಮಾಡಿದರು. ಈ ಮೂಲಕ ಮೊದಲ ಎಸೆತದಲ್ಲೇ 5 ಬಾರಿ ವಿಕೆಟ್ ಪಡೆದ ಏಕೈಕ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 
ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಇನ್ನಿಂಗ್ಸ್​ ವೇಳೆ ಕೆ.ಎಲ್​. ರಾಹುಲ್​ ಹಾಗೂ ಪಥುಮ್ ನಿಸ್ಸಾನ್ ಅವರು ಆರಂಭಿಕರಾಗಿ ಕಣಕ್ಕಿಳಿದರು. ಈ ವೇಳೆ ಪಥಮ್​ ನಾನ್​ ಸ್ಟ್ರೈಕರ್​ ಎಂಡ್​ಗೆ ಹೋದರೆ, ರಾಹುಲ್​ ಅವರು ಸ್ಟ್ರೈಕರ್​ ತುದಿಯಲ್ಲಿ ಬ್ಯಾಟಿಂಗ್​ ಆರಂಭಿಸಿದರು. ಎಲ್​ಎಸ್​ಜಿ ಪರ ಮೊದಲ ಓವರ್​ ಎಸೆದ ಶಮಿ, ತಮ್ಮ ಮೊದಲ ಎಸೆತದಲ್ಲೇ ರಾಹುಲ್​ ಅವರನ್ನು ಔಟ್​ ಮಾಡಿದರು. ಈ ಮೂಲಕ ಐದನೇ ಬಾರಿಗೆ ತಮ್ಮ ಮೊದಲ ಎಸೆತದಲ್ಲೇ ವಿಕೆಟ್​ ಪಡೆದ ಅಪರೂಪದ ಸಾಧನೆ ಮಾಡಿದರು.
* ಮೊಹಮ್ಮದ್ ಶಮಿ - 5 ಬಾರಿ
* ಪ್ರವೀಣ್ ಕುಮಾರ್ - 3 ಬಾರಿ
* ಉಮೇಶ್ ಯಾದವ್ - 3 ಬಾರಿ
* ಟ್ರೆಂಟ್ ಬೌಲ್ಟ್ - 3 ಬಾರಿ
* ಲಸಿತ್ ಮಾಲಿಂಗ - 3 ಬಾರಿ
* ಭುವನೇಶ್ವರ್ ಕುಮಾರ್ - 3 ಬಾರಿ
* ಅಶೋಕ್ ದಿಂಡಾ - 3 ಬಾರಿ
* ಪ್ಯಾಟ್ ಕಮ್ಮಿನ್ಸ್ - 3 ಬಾರಿ
ಅಂದಹಾಗೆ, ಶಮಿ ಅವರು 2013 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಅವರು ಇಲ್ಲಿಯವರೆಗೆ 121 ಪಂದ್ಯಗಳನ್ನು ಆಡಿದ್ದಾರೆ ಮತ್ತು 8.62 ರ ಎಕಾನಮಿ ದರದಲ್ಲಿ 134 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಎರಡು ಬಾರಿ ನಾಲ್ಕು ವಿಕೆಟ್‌ಗಳ ಗೊಂಚಲೂ ಸೇರಿದೆ.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ಬುಧವಾರ (ಏಪ್ರಿಲ್​ 01) ಲಖನೌದ ಏಕನಾ ಸ್ಟೇಡಿಯಂನಲ್ಲಿ ನಡೆದ ಐದನೇ ಪಂದ್ಯದಲ್ಲಿ ಲಖನೌ ಸೂಪರ್​ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿತು.​ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಎಲ್​ಎಸ್​ಜಿ, 18.4 ಓವರ್​ಗೆ ಕೇವಲ 141 ರನ್​ ಕಲೆಹಾಕಿತು. 
ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಅಕ್ಷರ್​ ಪಡೆಗೆ ಆರಂಭಿಕ ಆಘಾತ ಎದುರಾಯಿತು. ಓಪನರ್​ಗಳಾದ ಕೆ.ಎಲ್.​ ರಾಹುಲ್ ಡಕ್​ ಔಟ್​ ಆದರೆ, ಪತ್ತಮ್​ ನಿಸ್ಸಂಕಾ ಒಂದು ರನ್​ಗೆ ಪೆವಿಲಿಯನ್ ಹಾದಿ ಹಿಡಿದರು. ಆರಂಭಿಕರ ಬಳಿಕ ಬಂದ ನಿತೀಶ್​ ರಾಣಾ 15 ರನ್ ಬಾರಿಸಿದರೆ,​ ಅಕ್ಷರ್​ ಪಟೇಲ್​ ಶೂನ್ಯಕ್ಕೆ ಔಟ್​ ಆದರು. ಪವರ್​ಪ್ಲೇ ಹಂತದಲ್ಲಿ ಕೇವಲ 33 ರನ್​ಗೆ 4 ಬಹುಮುಖ್ಯ ವಿಕೆಟ್​ಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್​ಗೆ ಆಸರೆಯಾಗಿದ್ದು ಸಮೀರ್ ರಿಜ್ವಿ ಮತ್ತು ಟ್ರಿಸ್ಟನ್​ ಸ್ಟಬ್ಸ್​ ಅವರ ಭರ್ಜರಿ ಇನ್ನಿಂಗ್ಸ್​. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್​ 17.1 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ ಗುರಿ ಮುಟ್ಟಿತು. ಈ ಮೂಲಕ ಡೆಲ್ಲಿ ಶುಭಾರಂಭ ಮಾಡಿತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net