ಇದಕ್ಕೆ ಉತ್ತರಿಸಿದ್ದ ಕೋಚ್ ವೆಟ್ಟೋರಿ, ಮಾಲೀಕರಿಗೆ ಈ ಯುವ ಆಟಗಾರನೆಂದರೆ ತುಂಬಾ ಇಷ್ಟ, ಹೀಗಾಗಿ ಕಮಿನ್ಸ್ ವಾಪಸ್ ಬಂದ ಮೇಲೂ ನಾವು ನಮ್ಮ ಕಾಂಬಿನೇಷನ್ ಬದಲಾಯಿಸುವುದಿಲ್ಲ ಎಂದು ನೇರವಾಗಿ ಲಿವಿಂಗ್ಸ್ಟೋನ್ಗೆ ತಿಳಿಸಿದ್ದರು. ಯಾರಾದರೂ ಗಾಯಗೊಂಡರೆ ಮಾತ್ರ ನನಗೆ ಅವಕಾಶ ಸಿಗುತ್ತದೆ ಎಂಬುದು ಇದರಿಂದ ಸ್ಪಷ್ಟವಾಗಿತ್ತು. ಇದೇ ಸಂದರ್ಭದಲ್ಲಿ ಪಾಡ್ಕಾಸ್ಟ್ನಲ್ಲಿದ್ದ ಕ್ರಿಕೆಟ್ ತಜ್ಞ ಡೇವಿಡ್ ಲಾಯ್ಡ್, ಈ ಮಾಲೀಕರಿಗೆ ಕ್ರಿಕೆಟ್ನ ಯಾವ ಪರಿಣತಿ ಇರುತ್ತದೆ? ಎಂದು ಪ್ರಶ್ನಿಸಿದಾಗ, ಮತ್ತೊಬ್ಬ ಮಾಜಿ ನಾಯಕ ಅಲಸ್ಟೇರ್ ಕುಕ್, ಅವರ ಬಳಿ ಭಾರಿ ಪ್ರಮಾಣದ ಹಣವಿರುತ್ತದೆ ಎಂದು ಲೇವಡಿ ಮಾಡಿದ್ದಾರೆ. ಮಾಲೀಕರು ಸಂಪೂರ್ಣ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೂ, ಆಟಗಾರರ ಆಯ್ಕೆಯಲ್ಲಿ ಖಂಡಿತವಾಗಿಯೂ ತಮ್ಮ ಪ್ರಭಾವ ಬೀರುತ್ತಾರೆ ಎಂಬುದು ಲಿವಿಂಗ್ಸ್ಟೋನ್ ಅವರ ಅಭಿಪ್ರಾಯವಾಗಿದೆ.