ಜನರನ್ನು ಯಾಮಾರಿಸುತ್ತಿದ್ದಾರೆಯೇ? ಬಿಗ್​ ಬಜೆಟ್ ಚಿತ್ರಗಳ ಅಸಲಿಯತ್ತು ಬಿಚ್ಚಿಟ್ಟ ನಟ ಮನೋಜ್ ಬಾಜಪೇಯಿ! Varanasi

ಜನರನ್ನು ಯಾಮಾರಿಸುತ್ತಿದ್ದಾರೆಯೇ? ಬಿಗ್​ ಬಜೆಟ್ ಚಿತ್ರಗಳ ಅಸಲಿಯತ್ತು ಬಿಚ್ಚಿಟ್ಟ ನಟ ಮನೋಜ್ ಬಾಜಪೇಯಿ! Varanasi
ಜನರನ್ನು ಯಾಮಾರಿಸುತ್ತಿದ್ದಾರೆಯೇ? ಬಿಗ್​ ಬಜೆಟ್ ಚಿತ್ರಗಳ ಅಸಲಿಯತ್ತು ಬಿಚ್ಚಿಟ್ಟ ನಟ ಮನೋಜ್ ಬಾಜಪೇಯಿ! Varanasi
Published on
Varanasi : ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ಸ್ಟಾರ್​ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಕಾಂಬಿನೇಷನ್‌ನಲ್ಲಿ 'ವಾರಣಾಸಿ' ಎಂಬ ಬಿಗ್​ ಬಜೆಟ್​ ಸಿನಿಮಾ ಸೆಟ್ಟೇರಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಸುಮಾರು ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಪ್ಯಾನ್-ವರ್ಲ್ಡ್ ಮಟ್ಟದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರವನ್ನು ಹಾಲಿವುಡ್ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಅತ್ಯಂತ ಅದ್ಧೂರಿಯಾಗಿ ನಿರ್ಮಿಸಲಾಗುತ್ತಿದೆ ಎಂಬ ಸುದ್ದಿ ಇದೆ. ಹೇಳಬೇಕೆಂದರೆ, ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಇಂತಹ ನೂರಾರು ಮತ್ತು ಸಾವಿರಾರು ಕೋಟಿ ರೂಪಾಯಿಗಳ ಬಿಗ್​ ಬಜೆಟ್‌ ಸಿನಿಮಾಗಳು ಸಾಮಾನ್ಯವಾಗಿದೆ.
ಆದರೆ, ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಾಗಿ ಘೋಷಿಸಲಾಗುತ್ತಿರುವ ಇಂತಹ ನೂರಾರು-ಸಾವಿರಾರು ಕೋಟಿ ರೂಪಾಯಿಗಳ ಬಜೆಟ್‌ಗಳೆಲ್ಲವೂ ಸಂಪೂರ್ಣ ಸುಳ್ಳು ಮತ್ತು ನಕಲಿ ಎಂದು ಬಾಲಿವುಡ್‌ನ ಖ್ಯಾತ ನಟ ಮನೋಜ್ ಬಾಜಪೇಯಿ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ತಮ್ಮ ಹೊಸ ಸಿನಿಮಾದ ಪ್ರಚಾರದ ಅಂಗವಾಗಿ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಭದಲ್ಲಿ ಅವರು ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ.
ವಾರಣಾಸಿ ಅಥವಾ ರಾಮಾಯಣದಂತಹ ಬೃಹತ್ ಸಿನಿಮಾಗಳ ನಿರ್ಮಾಪಕರು ತಮ್ಮ ಚಿತ್ರ ನೂರಾರು ಅಥವಾ ಸಾವಿರಾರು ಕೋಟಿ ಬಜೆಟ್‌ನಲ್ಲಿ ಸಿದ್ಧವಾಗುತ್ತಿದೆ ಎಂದು ಪ್ರಚಾರ ಮಾಡುವುದು ಕೇವಲ ಒಂದು ಪಿಆರ್ ಸ್ಟಂಟ್ ಅಷ್ಟೇ. ಕಳೆದ 15 ವರ್ಷಗಳಿಂದಲೂ ಅನೇಕ ಸಿನಿಮಾಗಳ ವಿಷಯದಲ್ಲಿ ನಾವು ಇಂತಹ ಮಾತುಗಳನ್ನು ಕೇಳುತ್ತಲೇ ಬಂದಿದ್ದೇವೆ ಮತ್ತು ಇದು ಈಗ ಒಂದು ಸಾಂಕ್ರಾಮಿಕ ರೋಗದಂತೆ ಚಿತ್ರರಂಗದಲ್ಲಿ ಹರಡಿದೆ ಎಂದು ಮನೋಜ್ ಬಾಜಪೇಯಿ ಅವರು ನೇರವಾಗಿ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಸಿನಿಮಾದ ಬಜೆಟ್ ಮತ್ತು ಕಲೆಕ್ಷನ್ ಎಂಬುದು ಸಂಪೂರ್ಣವಾಗಿ ನಿರ್ಮಾಪಕರಿಗೆ ಸಂಬಂಧಿಸಿದ ವಿಷಯ. ಅದನ್ನು ಹೊರಗಿನವರು ಮತ್ತು ಅಭಿಮಾನಿಗಳು ಚರ್ಚಿಸುವ ಅಗತ್ಯವೇನಿದೆ? ಬಾಕ್ಸ್ ಆಫೀಸ್ ಗಳಿಕೆಯ ಬಗ್ಗೆ ನಿರ್ಮಾಪಕರು ತಲೆಕೆಡಿಸಿಕೊಳ್ಳಬೇಕೆ ಹೊರತು ನೀವೇಕೆ ತಲೆಕೆಡಿಸಿಕೊಳ್ಳುತ್ತೀರಿ? ಅವರಿಗೆ ಬರುವ ನೂರಾರು ಕೋಟಿ ರೂಪಾಯಿಗಳ ಲಾಭದಲ್ಲಿ ನಿಮಗೇನಾದರೂ ಪಾಲನ್ನು ಕೊಡುತ್ತಾರೆಯೇ? ಇತ್ತೀಚೆಗೆ ನನ್ನನ್ನು ಭೇಟಿಯಾಗುವ ಸಾಮಾನ್ಯ ಜನರು ಕೂಡ ಸಿನಿಮಾಗಳ ಬಜೆಟ್ ಮತ್ತು ಕಲೆಕ್ಷನ್ ಬಗ್ಗೆಯೇ ಮಾತನಾಡುತ್ತಾರೆ ಎಂದು ಮನೋಜ್ ಬಾಜಪೇಯಿ ಅವರು ಬೇಸರ ಮತ್ತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ದೊಡ್ಡ ಬಜೆಟ್ ಸಿನಿಮಾಗಳ ಸಾವಿರಾರು ಕೋಟಿ ರೂಪಾಯಿಗಳ ಲೆಕ್ಕಾಚಾರಗಳೆಲ್ಲವೂ ಕೇವಲ ಪಬ್ಲಿಸಿಟಿ ಮತ್ತು ಪ್ರಚಾರಕ್ಕಾಗಿ ಸೃಷ್ಟಿಸುವಂತದ್ದು ಎಂದು ಮನೋಜ್ ಬಾಜಪೇಯಿ ಹೇಳಿರುವುದು ಸದ್ಯ ಚಿತ್ರರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಸ್ಟಾರ್ ನಟರ ಚಿತ್ರಗಳ ಬಜೆಟ್ ಅಂಕಿ-ಅಂಶಗಳ ಹಿಂದಿನ ಅಸಲಿ ಸತ್ಯವನ್ನು ಮನೋಜ್ ಅವರು ಬಹಿರಂಗವಾಗಿ ಬಿಚ್ಚಿಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಿನಿಮಾ ವಲಯದಲ್ಲಿ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net