ಕಿವೀಸ್​ ವಿರುದ್ಧದ ಟೆಸ್ಟ್​ನಲ್ಲಿ ಜಸ್ಪ್ರೀತ್ ಇತಿಹಾಸ! ಜಾವಗಲ್​ ಶ್ರೀನಾಥ್ ದಾಖಲೆ ಮುರಿದ ಬೂಮ್​ ಬೂಮ್​ ಬುಮ್ರಾ | Jasprit Bumrah

Jasprit Bumrah
ಕಿವೀಸ್​ ವಿರುದ್ಧದ ಟೆಸ್ಟ್​ನಲ್ಲಿ ಜಸ್ಪ್ರೀತ್ ಇತಿಹಾಸ! ಜಾವಗಲ್​ ಶ್ರೀನಾಥ್ ದಾಖಲೆ ಮುರಿದ ಬೂಮ್​ ಬೂಮ್​ ಬುಮ್ರಾ | Jasprit Bumrah
Published on: 

ನವದೆಹಲಿ: ಇಂದಿನಿಂದ ಆರಂಭಗೊಂಡಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ದಿಗ್ಗಜ ಕ್ರಿಕೆಟಿಗನ ದಾಖಲೆಯನ್ನು ಮುರಿದು ಇದೀಗ ತಮ್ಮದೇ ಹೊಸ ರೆಕಾರ್ಡ್​ ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಅಗ್ರ 10ರ ಪಟ್ಟಿಗೆ ಬುಮ್ರಾ ಸೇರ್ಪಡೆಯಾಗಿದ್ದಾರೆ.

ಕಿವೀಸ್​ ವಿರುದ್ಧದ ಮೊದಲ ಟೆಸ್ಟ್

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಈ ಸಾಧನೆಗೈದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಅವರನ್ನು ಡಕ್ ಔಟ್ ಮಾಡಿದ ಬುಮ್ರಾ, ನಂತರ ಡ್ಯಾರಿಲ್ ಮಿಚೆಲ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಊಟದ ಬ್ರೇಕ್​ ನಂತರ ಟಾಮ್ ಬ್ಲಂಡೆಲ್ ಅವರ ವಿಕೆಟ್​ ಪಡೆದರು. ಈ ಮೂಲಕ ಅವರು ಇದುವರೆಗೆ 236 ವಿಕೆಟ್ ಪಡೆದಿರುವ ಜಾವಗಲ್ ಶ್ರೀನಾಥ್ ಅವರನ್ನು ಹಿಂದಿಕ್ಕಿದ್ದಾರೆ.

14 ಪಂದ್ಯ ಕಡಿಮೆ

ಜಾವಗಲ್ ಶ್ರೀನಾಥ್ ಅವರು ಟೀಮ್ ಇಂಡಿಯಾ ಪರ ಆಡಿರುವ 67 ಟೆಸ್ಟ್‌ಗಳಲ್ಲಿ ಒಟ್ಟು 236 ವಿಕೆಟ್‌ಗಳನ್ನು ಪಡೆದಿದ್ದರೆ, ಜಸ್ಪ್ರೀತ್ ಬುಮ್ರಾ ಕೇವಲ 53 ಟೆಸ್ಟ್‌ಗಳಲ್ಲಿ 237 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶ್ರೀನಾಥ್‌ಗಿಂತ 14 ಪಂದ್ಯಗಳನ್ನು ಕಡಿಮೆ ಆಡುವ ಮೂಲಕ ಬುಮ್ರಾ ಈ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಅವರು ಭಾರತೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನವನ್ನು ತಲುಪಿದ್ದಾರೆ.

ಬುಮ್ರಾ ಈಗಾಗಲೇ ಟಾಪ್-10 ಪ್ರವೇಶಿಸಿದ್ದು, ಶೀಘ್ರದಲ್ಲೇ ಮತ್ತೊಂದು ಸ್ಥಾನವನ್ನು ಏರುವ ಸಾಧ್ಯತೆಯಿದೆ. ಸದ್ಯ 242 ವಿಕೆಟ್ ಪಡೆದು ಒಂಬತ್ತನೇ ಸ್ಥಾನದಲ್ಲಿರುವ ಭಾಗವತ್ ಚಂದ್ರಶೇಖರ್ ಅವರನ್ನು ಮೀರಿಸಲು ಬುಮ್ರಾ ಇನ್ನೂ ಆರು ವಿಕೆಟ್‌ಗಳನ್ನು ಕಬಳಿಸಬೇಕು ಅಷ್ಟೇ. ಈಗ ತೋರಿರುವ ಫಾರ್ಮ್ ಅನ್ನೇ ಮುಂದುವರಿಸಿದರೆ, ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯ ಅಂತ್ಯದೊಳಗೆ ಬುಮ್ರಾ ಮತ್ತೊಂದು ಮೈಲಿಗಲ್ಲು ಸಾಧಿಸುವ ಎಲ್ಲ ಲಕ್ಷಣಗಳಿವೆ.

Also Read
ಪಾಕ್​ನಲ್ಲೇ ದಾವೂದ್ ಇಬ್ರಾಹಿಂ? 3 ರಹಸ್ಯ ನೆಲೆ, ಸೇನಾ ಭದ್ರತೆ, ಲಕ್ಸುರಿ ಲೈಫ್​​ ಬಗ್ಗೆ ಮಾಜಿ FBI ಅಧಿಕಾರಿ ಸ್ಫೋಟಕ ಹೇಳಿಕೆ!
Jasprit Bumrah

ಭಾರತ ಪರ ಅತ್ಯಧಿಕ ಟೆಸ್ಟ್ ವಿಕೆಟ್ ಪಡೆದ ಬೌಲರ್ಸ್​

♦ ಅನಿಲ್ ಕುಂಬ್ಳೆ - 619 ವಿಕೆಟ್

♦ ರವಿಚಂದ್ರನ್ ಅಶ್ವಿನ್ - 537 ವಿಕೆಟ್

♦ ಕಪಿಲ್ ದೇವ್ - 434 ವಿಕೆಟ್

♦ ಹರ್ಭಜನ್ ಸಿಂಗ್ - 417 ವಿಕೆಟ್

♦ ರವೀಂದ್ರ ಜಡೇಜಾ - 356 ವಿಕೆಟ್​

♦ ಜಹೀರ್ ಖಾನ್ – 311 ವಿಕೆಟ್‌

♦ ಇಶಾಂತ್ ಶರ್ಮಾ - 311 ವಿಕೆಟ್‌

♦ ಬಿಷನ್ ಸಿಂಗ್ ಬೇಡಿ - 266 ವಿಕೆಟ್

♦ ಭಾಗವತ್ ಚಂದ್ರಶೇಖರ್ - 242 ವಿಕೆಟ್

♦ ಜಸ್ಪ್ರೀತ್ ಬುಮ್ರಾ - 237 ವಿಕೆಟ್