ಜಾಗತಿಕ ಕ್ರಿಕೆಟ್ ರಕ್ಷಿಸಲು ಜೈ ಶಾ ಸಮರ್ಥ ವ್ಯಕ್ತಿ: ಐಸಿಸಿ ಬಾಸ್​ನನ್ನು ಮುಕ್ತ ಕಂಠದಿಂದ ಹೊಗಳಿದ ಲಲಿತ್​ ಮೋದಿ! Lalit Modi on Jay Shah

ಐಸಿಸಿ ಬಾಸ್ ಜೈ ಶಾರನ್ನು ಮುಕ್ತಕಂಠದಿಂದ ಶ್ಲಾಘಿಸಿದ ಲಲಿತ್ ಮೋದಿ!
ಐಸಿಸಿ ಬಾಸ್ ಜೈ ಶಾರನ್ನು ಮುಕ್ತಕಂಠದಿಂದ ಶ್ಲಾಘಿಸಿದ ಲಲಿತ್ ಮೋದಿ!
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್ ಅಬ್ಬರದ ನಡುವೆ ಜಾಗತಿಕ ಕ್ರಿಕೆಟ್ ಇಕ್ಕಟ್ಟಿನಲ್ಲಿದೆ
  • ಜಾಗತಿಕ ಕ್ರಿಕೆಟ್ ಉಳಿಸಲು ಐಸಿಸಿ ಅಧ್ಯಕ್ಷ ಜೈ ಶಾ ಸಮರ್ಥ ವ್ಯಕ್ತಿ
  • ಐಸಿಸಿ ಬಾಸ್ ಜೈ ಶಾರನ್ನು ಮುಕ್ತಕಂಠದಿಂದ ಶ್ಲಾಘಿಸಿದ ಲಲಿತ್ ಮೋದಿ!
ಲಂಡನ್​: ಐಪಿಎಲ್​ನ ಪ್ರಭಾವದಿಂದ ಜಾಗತಿಕ ಕ್ರಿಕೆಟ್​ನ್ನು ಉಳಿಸುವ ಶಕ್ತಿ ಕೇವಲ ಐಸಿಸಿ ಅಧ್ಯಕ್ಷನಾಗಿರುವ ಜೈ ಶಾ ಅವರಿಗೆ ಮಾತ್ರ ಇದೆ ಎಂದು ಬಿಸಿಸಿಐ ನ ಮಾಜಿ ಉಪಾಧ್ಯಕ್ಷ ಹಾಗೂ ಐಪಿಎಲ್​​ನ ಸ್ಥಾಪಕ ಲಲಿತ್​ ಮೋದಿ (Lalit Modi on Jay Shah) ಹೇಳಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಲಲಿತ್​ ಮೋದಿ, ಜಾಗತಿಕ ಕ್ರಿಕೆಟ್​ನ ಬೆಳವಣಿಗೆಯಲ್ಲಿ ಶಾ ಅವರ ಕೊಡುಗೆ ಮಹತ್ವದಾಗಿದ್ದು, ಐಪಿಎಲ್​​ನ ಅಪಾಯಕಾರಿ ಕ್ರೇಜ್​ ನಡುವೆ ಅಂತಾರಾಷ್ಟ್ರೀಯ ಕ್ರಿಕೆಟ್​ನ್ನು ಅವರು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಶ್ಲಾಘನಾರ್ಹ ಎಂದಿದ್ದಾರೆ.

ಇವರೊಬ್ಬರೇ ಸಮರ್ಥ ವ್ಯಕ್ತಿ!

ಐಪಿಎಲ್​ ಈಗ ಈಡೀ ಕ್ರಿಕೆಟ್​ನ್ನೇ ತಿಂದು ಹಾಕುವ ಮಟ್ಟಿಗೆ ಬೆಳೆದಿದೆ. ಐಪಿಎಲ್​ನ ಪ್ರಭಾವ ಕೇವಲ ಭಾರತದ ಕ್ರಿಕೆಟ್​ ಮೇಲೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಟೂರ್ನಿಗಳ ಮೇಲೆ ಕೂಡ ಅಡ್ಡ ಪರಿಣಾಮ ಬೀರುತ್ತಿದೆ. ಇಂತಹ ಸಂದರ್ಭದಲ್ಲಿ ಜೈ ಶಾ ಐಸಿಸಿಯನ್ನು ಮುನ್ನಡೆಸುತ್ತಿರುವುದು ಕಡಿಮೆ ಸಾಹಸದ ಕೆಲಸ ಅಲ್ಲವೇ ಅಲ್ಲ ಎಂದು ಹೇಳಿದ್ದಾರೆ.
ಅದೇ ರೀತಿ ರಾಜ್ಯದ ಕ್ರಿಕೆಟ್​ ಅಸೋಸಿಯೇಷನ್​ಗಳನ್ನು ಅಭಿವೃದ್ಧಿ ಪಡಿಸುವತ್ತ ಜೈ ಶಾ ಕಾರ್ಯಪ್ರವೃತ್ತರಾಗಿದ್ದಾರೆ. ಇದರಿಂದ ಭಾರತ ಕ್ರಿಕೆಟ್​ ಜಗತ್ತಿನ ಅನಭಿಷಕ್ತ ದೊರೆಯಾಗಬಹುದು ಎಂದು ಲಲಿತ್​ ಮೋದಿ ಹೇಳಿದ್ದಾರೆ.
ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಲವಾರು ಸುಧಾರಣೆಗಳ ಅಗತ್ಯವಿದೆ. ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಜೈ ಶಾ ಹೇಳಿ ಮಾಡಿಸಿದ ವ್ಯಕ್ತಿಯಾಗಿದ್ದು, ಪ್ರಸ್ತುತ ಅವರಿಂಗ ಸಮರ್ಥ ನಾಯಕ ಐಸಿಸಿ ವಲಯದಲ್ಲಿ ಇಲ್ಲ ಎಂದು ಹೇಳಬಹುದೆಂದು ಉದ್ಯಮಿ ಲಲಿತ್​ ಮೋದಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net