ಮುಂಬೈನ ಕಾಮಾ ಮತ್ತು ಅಲ್ಬ್ಲೆಸ್ ಆಸ್ಪತ್ರೆಯ (Cama Hospital) ಮೇಲೆ ಉಗ್ರರು ದಾಳಿ ಮಾಡಿದಾಗ, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸುಮಾರು 400 ಕ್ಕೂ ಹೆಚ್ಚು ರೋಗಿಗಳ ಜೀವ ಉಳಿಸಿದ ನರ್ಸ್‌ಗಳು ಹಾಗೂ ವೈದ್ಯಕೀಯ ಸಿಬ್ಬಂದಿಯ ಧೈರ್ಯ ಮತ್ತು ಸಾಹಸದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಮನೋಜ್ ತಪಾಡಿಯಾ ನಿರ್ದೇಶಿಸಿರುವ ಈ ಚಿತ್ರದಲ್ಲಿ ಕಂಗನಾ ರಣಾವತ್ ಒಬ್ಬ ಧೈರ್ಯಶಾಲಿ ನರ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರೊಂದಿಗೆ ಗಿರಿಜಾ ಓಕ್, ಸ್ಮಿತಾ ತಾಂಬೆ ಮತ್ತು ಈಶಾ ಡೇ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ, (ಏಜನ್ಸೀಸ್).