ಆರ್‌ಸಿಬಿ ಕ್ಯಾಂಪ್‌ನಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಅತಿ ಹೆಚ್ಚು ಅಚ್ಚರಿ ಮೂಡಿಸಿದ ಸಂಗತಿ ಬಹಿರಂಗಪಡಿಸಿದ ಕಿವೀಸ್ ವೇಗಿ ಜೇಕಬ್ ಡಫಿ! | Jacob Duffy

ಆರ್‌ಸಿಬಿ ಕ್ಯಾಂಪ್‌ನಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಅತಿ ಹೆಚ್ಚು ಅಚ್ಚರಿ ಮೂಡಿಸಿದ ಸಂಗತಿ ಬಹಿರಂಗಪಡಿಸಿದ ಕಿವೀಸ್ ವೇಗಿ ಜೇಕಬ್ ಡಫಿ! | Jacob Duffy
Published on: 

Jacob Duffy: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಐಪಿಎಲ್ ಟ್ರೋಫಿ ಗೆಲುವಿನ ಅನುಭವವನ್ನು ಹಂಚಿಕೊಂಡಿರುವ ನ್ಯೂಜಿಲೆಂಡ್‌ನ ಯುವ ವೇಗಿ ಜೇಕಬ್ ಡಫಿ, ಭಾರತೀಯ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಅವರ ಸರಳತೆ ಮತ್ತು ಬದ್ಧತೆ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಕ್ರಿಕ್‌ಬಜ್ ಜತೆಗೆ ಮಾತನಾಡಿದ ಜೇಕಬ್ ಡಫಿ, ಭಾರತದಲ್ಲಿ ಕೊಹ್ಲಿ ಧಾರ್ಮಿಕ ವ್ಯಕ್ತಿ ಸ್ಥಾನದಲ್ಲಿದ್ದರೂ ಸಹ ಅವರು ಎಷ್ಟು ವಿನಮ್ರರಾಗಿದ್ದಾರೆ ಮತ್ತು ವಿದೇಶಿ ಆಟಗಾರರನ್ನು ಎಷ್ಟು ಪ್ರೀತಿಯಿಂದ ಸ್ವಾಗತಿಸಿದರು ಎಂಬುದನ್ನು ಡಫಿ ಸ್ಮರಿಸಿದ್ದಾರೆ. ಮುಂಬರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯಲ್ಲಿ ಕೊಹ್ಲಿ ವಿರುದ್ಧ ಕಣಕ್ಕಿಳಿಯಲು ತಾವು ಕಾತರದಿಂದ ಕಾಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಆರ್‌ಸಿಬಿ ಡ್ರೆಸ್ಸಿಂಗ್ ರೂಮ್ ಅನುಭವ ಹಂಚಿಕೊಂಡ ಡಫಿ

ನಾನು ನಿನ್ನೆ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾದೆ. ಅವರು ಜಿಮ್‌ನಲ್ಲಿದ್ದಾಗ ಅವರನ್ನು ಭೇಟಿಯಾದದ್ದು ತುಂಬಾ ಖುಷಿಯಾಯಿತು ಮತ್ತು ಅವರು ನನ್ನೊಂದಿಗೆ ಬಹಳ ಪ್ರೀತಿಯಿಂದ ವರ್ತಿಸಿದರು ಎಂದಿದ್ದಾರೆ. ಭಾರತದಲ್ಲಿ ಕೊಹ್ಲಿ ಹೊಂದಿರುವ ಅತಿ ದೊಡ್ಡ ಸೆಲೆಬ್ರಿಟಿ ಸ್ಟೇಟಸ್ ಹಾಗೂ ಜನಪ್ರಿಯತೆಯನ್ನು ಉಲ್ಲೇಖಿಸಿದ ಅವರು, ಭಾರತದಲ್ಲಿ ಅವರು ಅಕ್ಷರಶಃ ಒಬ್ಬ ಧಾರ್ಮಿಕ ವ್ಯಕ್ತಿಯಂತೆ ಆರಾಧಿಸಲ್ಪಡುತ್ತಾರೆ ಎಂದರು.

ಅಷ್ಟು ದೊಡ್ಡ ಸ್ಟಾರ್ ಆಗಿದ್ದರೂ, ಅವರು ಅತ್ಯಂತ ಸರಳ ಸ್ವಭಾವದವರು. ಆರ್‌ಸಿಬಿ ತಂಡದಲ್ಲಿದ್ದ ನಮ್ಮಂತಹ ವಿದೇಶಿ ಆಟಗಾರರನ್ನು ಅವರು ತುಂಬಾ ಹತ್ತಿರದಿಂದ ಸ್ವಾಗತಿಸಿ ಗೌರವಿಸಿದರು. ಅದಕ್ಕಾಗಿ ನಾನು ಅವರಿಗೆ ಸದಾ ಕೃತಜ್ಞನಾಗಿರುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಷ್ಟು ದಿನ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ಅವರ ವಿರುದ್ಧ ಈಗ ಎದುರಾಳಿಯಾಗಿ ಆಡುವುದು ಅತ್ಯಂತ ರೋಮಾಂಚನಕಾರಿಯಾಗಿರಲಿದೆ ಎಂದು ಡಫಿ ಅಭಿಪ್ರಾಯಪಟ್ಟಿದ್ದಾರೆ.

Also Read
ಇನ್ಮುಂದೆ ವಾಂಖೆಡೆಯಲ್ಲಿ ಕೆಂಪು, ಹಳದಿ ಕಾಣಬಾರ್ದು...ಮುಂಬೈ ಇಂಡಿಯನ್ಸ್ ನೂತನ ಹೆಡ್ ಕೋಚ್ ಪೊಲಾರ್ಡ್ ಶಾಕಿಂಗ್‌ ಹೇಳಿಕೆ! | Kieron Pollard
ಆರ್‌ಸಿಬಿ ಕ್ಯಾಂಪ್‌ನಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಅತಿ ಹೆಚ್ಚು ಅಚ್ಚರಿ ಮೂಡಿಸಿದ ಸಂಗತಿ ಬಹಿರಂಗಪಡಿಸಿದ ಕಿವೀಸ್ ವೇಗಿ ಜೇಕಬ್ ಡಫಿ! | Jacob Duffy

ನೆಟ್ಸ್‌ನಲ್ಲಿ ಕೊಹ್ಲಿ ಜೊತೆಗಿನ ಅಭ್ಯಾಸ!

ಐಪಿಎಲ್ ವೇಳೆಯಲ್ಲಿ ನೆಟ್ಸ್‌ನಲ್ಲಿ ವಿರಾಟ್ ಕೊಹ್ಲಿಗೆ ನಿರಂತರವಾಗಿ ಬೌಲಿಂಗ್ ಮಾಡುತ್ತಿದ್ದ ಅನುಭವವನ್ನು ಹಂಚಿಕೊಂಡಿರುವ ಡಫಿ, ಕೊಹ್ಲಿ ಅವರ ಶ್ರಮದ ಸಂಸ್ಕೃತಿಯನ್ನು ಕೊಂಡಾಡಿದ್ದಾರೆ. ಅವರಿಗೆ ಅದ್ಭುತವಾದ ವರ್ಕ್ ಎತಿಕ್ ಇದೆ. ನಾನು ನೆಟ್ಸ್‌ನಲ್ಲಿ ಅವರಿಗೆ ಸಾಕಷ್ಟು ಬೌಲಿಂಗ್ ಮಾಡಿದ್ದೇನೆ, ಏಕೆಂದರೆ ಅವರು ಯಾವಾಗಲೂ ಮೊದಲು ಬ್ಯಾಟಿಂಗ್ ಮಾಡಲು ಬರುತ್ತಿದ್ದರು ಮತ್ತು ನಾನು ಮೊದಲೇ ಬೌಲಿಂಗ್ ಮಾಡಲು ಸಿದ್ಧನಿರುತ್ತಿದ್ದೆ. ನಾವು ನೆಟ್ಸ್‌ನಲ್ಲಿ ಪರಸ್ಪರ ಎದುರಿಸುತ್ತಾ ಸಾಕಷ್ಟು ಸಮಯ ಕಳೆದಿದ್ದೇವೆ. ಇದರಿಂದಾಗಿ ನಮ್ಮಿಬ್ಬರ ಆಟದ ಶೈಲಿ ಪರಸ್ಪರ ಚೆನ್ನಾಗಿ ಅರ್ಥವಾಗಿದೆ. ಈಗ ಅವರು ನನ್ನ ಬೌಲಿಂಗ್ ಶೈಲಿಯನ್ನು ಚೆನ್ನಾಗಿ ನೋಡಿದ್ದಾರೆ, ಹಾಗಾಗಿ ಅವರು ಕೂಡ ಮುಂಬರುವ ಸರಣಿಗೆ ಉತ್ತಮವಾಗಿ ಸಿದ್ಧರಾಗಿರುತ್ತಾರೆ ಎಂದು ತಿಳಿಸಿದರು.

ಸರಣಿಯ ಆರಂಭಿಕ ಟಿ20 ಪಂದ್ಯಗಳಲ್ಲಿ ಅಧಿಕ ರನ್ ಬಿಟ್ಟುಕೊಟ್ಟರೂ, 4ನೇ ಟಿ20 ಪಂದ್ಯದಲ್ಲಿ ಅದ್ಭುತವಾಗಿ ಕಮ್​ಬ್ಯಾಕ್ ಮಾಡಿ 4 ವಿಕೆಟ್ ಗೊಂಚಲು ಪಡೆದು ನ್ಯೂಜಿಲೆಂಡ್ ಗೆಲುವಿಗೆ ಕಾರಣರಾಗಿದ್ದ ಡಫಿ, ಏಕದಿನ ಕ್ರಿಕೆಟ್‌ನ ಸವಾಲುಗಳನ್ನು ಎದುರಿಸಲು ತಾವು ಉತ್ಸುಕರಾಗಿರುವುದಾಗಿ ಹೇಳಿದರು. ನವೆಂಬರ್ 4ರಿಂದ ಆಕ್ಲೆಂಡ್‌ನಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಏಕದಿನ ಸರಣಿಗಾಗಿ ಉಭಯ ತಂಡಗಳು ತಯಾರಾಗುತ್ತಿವೆ.

2027ರ ಏಕದಿನ ವಿಶ್ವಕಪ್ ಗುರಿ!

ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ 2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಈಗಿನಿಂದಲೇ ಸಿದ್ಧತೆಗಳು ಆರಂಭವಾಗಿದ್ದು, ಈ ಕುರಿತು ಮಾತನಾಡಿರುವ ಡಫಿ, ಮುಂದಿನ ವರ್ಷ ಇದೇ ವೇಳೆಗೆ ವಿಶ್ವಕಪ್ ನಡೆಯಲಿದೆ. ಇದು ನಮ್ಮ ತಂಡದ ಪ್ರಮುಖ ಗುರಿಯಾಗಿದೆ. 2015 ಮತ್ತು 2019ರ ವಿಶ್ವಕಪ್‌ಗಳನ್ನು ನೋಡುತ್ತಾ ಬೆಳೆದ ನನಗೆ, ವಿಶ್ವಕಪ್‌ನಲ್ಲಿ ಆಡುವುದೇ ಅತಿ ದೊಡ್ಡ ಕನಸು. ವಿಶ್ವಕಪ್‌ಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಇರುವುದರಿಂದ, ಮುಂಬರುವ ಏಕದಿನ ಸರಣಿಗಳು ನಮ್ಮ ಆಯ್ಕೆಗೆ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತವೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ನಾವೆಲ್ಲರೂ ಕಠಿಣ ಪ್ರಯತ್ನ ನಡೆಸುತ್ತಿದ್ದೇವೆ ಎಂದು ತಿಳಿಸಿದರು(ಏಜೆನ್ಸೀಸ್​).