ಇನ್ಮುಂದೆ ವಾಂಖೆಡೆಯಲ್ಲಿ ಕೆಂಪು, ಹಳದಿ ಕಾಣಬಾರ್ದು...ಮುಂಬೈ ಇಂಡಿಯನ್ಸ್ ನೂತನ ಹೆಡ್ ಕೋಚ್ ಪೊಲಾರ್ಡ್ ಶಾಕಿಂಗ್‌ ಹೇಳಿಕೆ! | Kieron Pollard

ಮುಂಬೈ: ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲೊಂದಾದ ಮುಂಬೈ ಇಂಡಿಯನ್ಸ್ ಮುಂಬರುವ ಆವೃತ್ತಿಗೆ ತನ್ನ ನೂತನ ಮುಖ್ಯ ಕೋಚ್ ಆಗಿ ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಕೀರನ್ ಪೊಲಾರ್ಡ್ ( Kieron Pollard) ಅವರನ್ನು ನೇಮಕ ಮಾಡಿದೆ. ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಪೊಲಾರ್ಡ್ ಮುಂಬೈ ಅಭಿಮಾನಿಗಳಿಗೆ ಅತ್ಯಂತ ಸ್ಪಷ್ಟ ಸಂದೇಶವೊಂದನ್ನು ರವಾನಿಸಿದ್ದಾರೆ.
ಇನ್ಮುಂದೆ ವಾಂಖೆಡೆಯಲ್ಲಿ ಕೆಂಪು, ಹಳದಿ ಕಾಣಬಾರ್ದು...ಮುಂಬೈ ಇಂಡಿಯನ್ಸ್ ನೂತನ ಹೆಡ್ ಕೋಚ್ ಪೊಲಾರ್ಡ್ ಶಾಕಿಂಗ್‌ ಹೇಳಿಕೆ! | Kieron Pollard
Published on: 

ಮುಂಬೈ: ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲೊಂದಾದ ಮುಂಬೈ ಇಂಡಿಯನ್ಸ್ ಮುಂಬರುವ ಆವೃತ್ತಿಗೆ ತನ್ನ ನೂತನ ಮುಖ್ಯ ಕೋಚ್ ಆಗಿ ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಕೀರನ್ ಪೊಲಾರ್ಡ್ ( Kieron Pollard) ಅವರನ್ನು ನೇಮಕ ಮಾಡಿದೆ. ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಪೊಲಾರ್ಡ್ ಮುಂಬೈ ಅಭಿಮಾನಿಗಳಿಗೆ ಅತ್ಯಂತ ಸ್ಪಷ್ಟ ಸಂದೇಶವೊಂದನ್ನು ರವಾನಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ತವರು ಮೈದಾನವಾದ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಎಂಐ ಪಂದ್ಯಗಳು ನಡೆಯುವಾಗ ಪ್ರತಿಸ್ಪರ್ಧಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಥವಾ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಜೆರ್ಸಿಗಳು ಮತ್ತು ಧ್ವಜಗಳು ಹೆಚ್ಚಾಗಿ ಕಾಣಸಿಗದ ಹಾಗೆ ಮಾಡ್ತೀವಿ ಎಂದು ಪೊಲಾರ್ಡ್ ಹೇಳಿದ್ದಾರೆ.

ಕಳೆದ ಕೆಲವು ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ ಸತತ ಹಿನ್ನಡೆ ಅನುಭವಿಸಿತ್ತು. ಮುಂಬೈಗೆ ಅಭೇದ್ಯ ಕೋಟೆಯಂತಿದ್ದ ವಾಂಖೆಡೆ ಕ್ರೀಡಾಂಗಣದಲ್ಲೇ ಎದುರಾಳಿ ತಂಡಗಳಿಗೆ ಅಭೂತಪೂರ್ವ ಬೆಂಬಲ ಸಿಗಲು ಪ್ರಾರಂಭವಾಗಿತ್ತು. ಪಂದ್ಯಗಳ ಸಮಯದಲ್ಲಿ ಮುಂಬೈ ಬೆಂಬಲಿಸುವ ನೀಲಿ ಬಣ್ಣದ ಸಮುದ್ರದ ನಡುವೆ ಆರ್‌ಸಿಬಿಯ ಕೆಂಪು ಜೆರ್ಸಿ ಹಾಗೂ ಸಿಎಸ್‌ಕೆಯ ಹಳದಿ ಜೆರ್ಸಿ ಧರಿಸಿದ ಅಭಿಮಾನಿಗಳ ಹರ್ಷೋದ್ಘಾರ ಹಾಗೂ ಘೋಷಣೆಗಳು ಜೋರಾಗಿ ಕೇಳಿಬರುತ್ತಿದ್ದವು.

ಇದನ್ನೂ ಓದಿ:ಒತ್ತಡವೇ ಅವನ ನೈಜ ಶಕ್ತಿ!...ಟೀಮ್ ಇಂಡಿಯಾವನ್ನು ಮುನ್ನಡೆಸುವ ಎಲ್ಲಾ ಲಕ್ಷಣ ತಿಲಕ್‌ನಲ್ಲಿದೆ ಎಂದ ಮಾಜಿ ಆಲ್​ರೌಂಡರ್​ | Tilak Varma

ಮುಂಬೈ ಇಂಡಿಯನ್ಸ್ ಅಧಿಕೃತ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕೀರನ್ ಪೊಲಾರ್ಡ್, ತಮ್ಮ ಮೊದಲ ಆದ್ಯತೆಯು ತಂಡದಲ್ಲಿ ಹಳೆಯ ಚೈತನ್ಯ ಮತ್ತು ವಿಶ್ವಾಸವನ್ನು ಮರಳಿ ತರುವುದಾಗಿದೆ ಎಂದಿದ್ದಾರೆ. ತಂಡದ ನೂತನ ಮುಖ್ಯ ಕೋಚ್ ಆಗಿ ನನ್ನ ಮೊದಲ ಪ್ರಮುಖ ಕಾರ್ಯವೆಂದರೆ ಆ ಹಳೆಯ ಶಕ್ತಿ ಮತ್ತು ಉತ್ಸಾಹವನ್ನು ತಂಡಕ್ಕೆ ಮರಳಿ ತರುವುದು. ನೀವು ವಾಂಖೆಡೆ ಕ್ರೀಡಾಂಗಣದೊಳಗೆ ಹೆಜ್ಜೆ ಇಟ್ಟ ತಕ್ಷಣ ಕಣ್ಣಿಗೆ ಹಳದಿ ಅಥವಾ ಕೆಂಪು ಬಣ್ಣದ ಜೆರ್ಸಿಗಳು ಕಾಣಬಾರದು. ಕ್ರೀಡಾಂಗಣದ ಮೂಲೆ ಮೂಲೆಯಲ್ಲೂ ಮುಂಬೈನ ನೀಲಿ ಬಾವುಟಗಳು ಹಾರಾಡಬೇಕು. ಅಭಿಮಾನಿಗಳಲ್ಲಿ ಆ ಹಳೆಯ ಆವೇಶ ಮತ್ತು ಪ್ರೀತಿ ಮರಳಿ ಬರಬೇಕು ಎಂಬುದು ನನ್ನ ಬಯಕೆ ಎಂದು ಪೊಲಾರ್ಡ್ ಹೇಳಿದ್ದಾರೆ.

ಹಳೆ ಭಯ ನೆನಪಾಗುವಂತೆ ಮಾಡ್ತೀವಿ!

ಅಭಿಮಾನಿಗಳಿಂದ ಅಂತಹ ಪ್ರೀತಿಯನ್ನು ನಿರೀಕ್ಷಿಸುವ ಮೊದಲು, ತಂಡವಾಗಿ ತಾವು ಮೈದಾನದಲ್ಲಿ ಶ್ರೇಷ್ಠ ಪ್ರದರ್ಶನ ನೀಡಬೇಕಾದ ಅಗತ್ಯವಿದೆ ಎಂಬುದನ್ನೂ ಪೊಲಾರ್ಡ್ ಒಪ್ಪಿಕೊಂಡಿದ್ದಾರೆ. ಅಭಿಮಾನಿಗಳ ಬೆಂಬಲ ಮರಳಿ ಸಿಗಬೇಕಾದರೆ ಮೊದಲಿಗೆ ಕಾರ್ಯಪ್ರವೃತ್ತರಾಗಬೇಕಾದವರು ನಾವು. ಯಾವುದಕ್ಕಾಗಿ ಮತ್ತು ಯಾರಿಗಾಗಿ ಆಡುತ್ತಿದ್ದೇವೆ ಎಂಬುದನ್ನು ಆಟಗಾರರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಕಳೆದ ಎರಡು ಆವೃತ್ತಿಗಳಲ್ಲಿ ನಾವಿದ್ದ ಸ್ಥಾನ ಅಥವಾ ಪ್ರದರ್ಶನ ಖಂಡಿತವಾಗಿಯೂ ತೃಪ್ತಿದಾಯಕವಾಗಿರಲಿಲ್ಲ. ಆ ಸತ್ಯದಿಂದ ನಾವು ಓಡಿಹೋಗಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Also Read
ಆಟಗಾರನಾಗಿ ಕಪ್‌ಗಳನ್ನು ಗೆದ್ದುಕೊಟ್ಟಿದ್ದ ದೈತ್ಯ ಈಗ ಅದೇ ತಂಡಕ್ಕೆ ಗುರು!...ಮುಂಬೈ ಇಂಡಿಯನ್ಸ್ ಹೆಡ್‌ ಕೋಚ್ ಆದ ಖ್ಯಾತ ಆಲ್‌ರೌಂಡರ್! | MI Head Coach
ಇನ್ಮುಂದೆ ವಾಂಖೆಡೆಯಲ್ಲಿ ಕೆಂಪು, ಹಳದಿ ಕಾಣಬಾರ್ದು...ಮುಂಬೈ ಇಂಡಿಯನ್ಸ್ ನೂತನ ಹೆಡ್ ಕೋಚ್ ಪೊಲಾರ್ಡ್ ಶಾಕಿಂಗ್‌ ಹೇಳಿಕೆ! | Kieron Pollard

ತಂಡದ ಭವಿಷ್ಯದ ಯೋಜನೆಯ ಬಗ್ಗೆ ವಿವರ ನೀಡಿದ ಪೊಲಾರ್ಡ್, ತಂಡದ ಲಾಂಛನಕ್ಕಾಗಿ ಹಾಗೂ ಒಳಿತಿಗಾಗಿ ಆಡುವುದು ನಮಗೆ ಮುಖ್ಯ. ವ್ಯಕ್ತಿಗತ ಆಟಕ್ಕಿಂತ ತಂಡದ ಗೆಲುವಿಗೆ ಆದ್ಯತೆ ನೀಡುತ್ತೇವೆ. ಎದುರಾಳಿ ತಂಡಗಳು ವಾಂಖೆಡೆಗೆ ಬಂದಾಗ ಅವರಿಗೆ ಮುಂಬೈನ ಹಳೆಯ ಭೀತಿ ನೆನಪಾಗುವಂತೆ ಮಾಡುತ್ತೇವೆ. ಅದಕ್ಕಾಗಿ ನಾವು ಕೊಂಚ ಹಿಂದೆ ಹೋಗಿ ನಮ್ಮ ಹಳೆಯ ಯಶಸ್ಸಿನ ಮೂಲವನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದಿದ್ದಾರೆ.

ಮಹೇಲ ಜಯವರ್ಧನೆ ಅವರ ನಿರ್ಗಮನದ ನಂತರ ಪೊಲಾರ್ಡ್ ಕೋಚ್ ಆಗಿ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದು ಪ್ಲೇಆಫ್ ಹಂತಕ್ಕೇರಲು ವಿಫಲವಾಗಿತ್ತು. ಇದೀಗ ಪೋಲಾರ್ಡ್ ಮಾರ್ಗದರ್ಶನದಲ್ಲಿ ಮುಂಬೈ ಮತ್ತೆ ತನ್ನ ಹಳೆಯ ವೈಭವಕ್ಕೆ ಮರಳಲು ಸಜ್ಜಾಗಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net