ಕಿವೀಸ್​ ವಿರುದ್ಧದ 3ನೇ ಟಿ20 ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಬಿಗ್​ ಶಾಕ್​! ತಂಡದಿಂದ ಹೊರಗುಳಿದ ಸ್ಟಾರ್​ ಆಟಗಾರ | IND vs NZ T20

ಮೂರನೇ ಟಿ20 ಪಂದ್ಯವು ಮಂಗಳವಾರ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ. ಮೊದಲ ಎರಡು ಟಿ20 ಪಂದ್ಯಗಳನ್ನು ಗೆದ್ದಿರುವ ಭಾರತ, ಮೂರನೇ ಪಂದ್ಯವನ್ನೂ ಗೆದ್ದು, ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿಯನ್ನು ತನ್ನದಾಗಿಸಿಕೊಳ್ಳುವ ತವಕದಲ್ಲಿದೆ.
 IND vs NZ T20
ಕಿವೀಸ್​ ವಿರುದ್ಧದ 3ನೇ ಟಿ20 ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಬಿಗ್​ ಶಾಕ್​! ತಂಡದಿಂದ ಹೊರಗುಳಿದ ಸ್ಟಾರ್​ ಆಟಗಾರ | IND vs NZ T20
Published on: 

IND vs NZ: ಪ್ರಸಕ್ತ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದಲ್ಲಿ ಟೀಮ್ ಇಂಡಿಯಾ ಮುನ್ನಡೆ ಸಾಧಿಸಿದ್ದೇ ಆದರೂ ತಂಡದಲ್ಲಿ ಸ್ಟಾರ್​ ಬ್ಯಾಟರ್​ ಇಶಾನ್​ ಕಿಶಾನ್​ ಅವರ ಕೊರತೆ ಕಾಡಲಾರಂಭಿಸಿದೆ. ಇಂಜುರಿ ಸಮಸ್ಯೆಯಿಂದ ಎರಡನೇ ಪಂದ್ಯದಿಂದ ಹೊರಗುಳಿದಿದ್ದ ಕಿಶನ್​ರನ್ನು ಇದೀಗ ಮೂರನೇ ಮ್ಯಾಚ್​ನಿಂದಲೂ ಕೈಬಿಡಲಾಗಿದೆ ಎಂದು ಸ್ವತಃ ಬಿಸಿಸಿಐ ಸ್ಪಷ್ಟಪಡಿಸಿದೆ.

ಮೂರನೇ ಟಿ20 ಪಂದ್ಯವು ಮಂಗಳವಾರ ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ. ಮೊದಲ ಎರಡು ಟಿ20 ಪಂದ್ಯಗಳನ್ನು ಗೆದ್ದಿರುವ ಭಾರತ, ಮೂರನೇ ಪಂದ್ಯವನ್ನೂ ಗೆದ್ದು, ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿಯನ್ನು ತನ್ನದಾಗಿಸಿಕೊಳ್ಳುವ ತವಕದಲ್ಲಿದೆ. ಆದರೆ, ಮೂರನೇ ಪಂದ್ಯಕ್ಕೂ ಮುನ್ನವೇ ಇಶಾನ್​ರ ಅಲಭ್ಯತೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಒಳ್ಳೆಯ ಫಾರ್ಮ್‌ನಲ್ಲಿರುವ ಕಿಶನ್​, ಈ ಪಂದ್ಯಕ್ಕೂ ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿ ತಿಳಿಸಿದೆ.

ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದ ವೇಳೆ ಇಶಾನ್ ಕಿಶನ್ ಗಾಯಗೊಂಡಿದ್ದರು. ಬಲ ತೊಡೆಯ ಸ್ನಾಯುವಿಗೆ ಪೆಟ್ಟು ಬಿದ್ದಿದ್ದು, ವಿಪರೀತ ನೋವಿನ ಕಾರಣ ಎರಡನೇ ಟಿ20 ಪಂದ್ಯದಿಂದ ಹೊರಗುಳಿಯಬೇಕಾಯಿತು. ಈಗ ಮೂರನೇ ಪಂದ್ಯದಲ್ಲಿ ಮುಂದುವರಿಯಲು ಸಾಧ್ಯವಾಗದ ಹಿನ್ನೆಲೆ ಅವರನ್ನು ಕೈಬಿಟ್ಟು, ಅವರ ಬದಲಿಗೆ ಕುಮಾರ್ ಕುಶಾಗ್ರ ಅವರನ್ನೇ ತಂಡದೊಂದಿಗೆ ಮುಂದುವರಿಯುವಂತೆ ತಿಳಿಸಲಾಗಿದೆ. ಕಳೆದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮೂರನೇ ಕ್ರಮಾಂಕದಲ್ಲಿ ಆಡಲು ಅವಕಾಶ ಕೊಟ್ಟಿದ್ದ ಕಾರಣ, 2ನೇ ಟಿ20 ಪಂದ್ಯದ ಅಂತಿಮ ತಂಡದಲ್ಲಿ ಕುಮಾರ್ ಕುಶಾಗ್ರ ಅವರಿಗೆ ಚಾನ್ಸ್​ ಸಿಗಲಿಲ್ಲ.

Also Read
ಏನಿದು ‘ಹ್ಯೂಮನ್ ಕಾಂಪೋಸ್ಟಿಂಗ್‌’? ಮಾನವ ದೇಹವನ್ನು ಗೊಬ್ಬರವಾಗಿಸುವ ಹೊಸ ವಿಧಾನಕ್ಕೆ ಆಸ್ಟ್ರೇಲಿಯಾ ಸಜ್ಜು | Human Composting
 IND vs NZ T20

ಈಗ ಕ್ರಿಕೆಟ್​ ಪ್ರೇಮಿಗಳ ಕಣ್ಣು ಮೂರನೇ ಟಿ20 ಪಂದ್ಯದ ಮೇಲೆ ಮೂಡಿದ್ದು, ಪಂದ್ಯ ಗೆಲುವು ಯಾರಿಗೆ ಒಲಿಯಲಿದೆ ಎಂಬುದಕ್ಕಿಂತ ಟೀಮ್ ಇಂಡಿಯಾದ ಟಾಪ್​ ಆರ್ಡರ್​ ಸಾಲಿನಲ್ಲಿ ಯಾವ ಬ್ಯಾಟ್ಸ್​ಮನ್​ಗಳಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಕಾರಣ, ವೈಭವ್​ ಸೂರ್ಯವಂಶಿಯನ್ನು ಆರಂಭಿಕರಾಗಿ ಕಳುಹಿಸಿ, ಮೂರನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್​ರನ್ನು ಆಡಿಸಬೇಕು ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಇದನ್ನೆಲ್ಲ ಮೀರಿ ಮ್ಯಾನೇಜ್​ಮೆಂಟ್​ ಯಾರನ್ನು ಆಡಿಸಲಿದೆ ಎಂಬುದನ್ನು ನಾಳಿನ ಪಂದ್ಯದಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net